ಈ ದೇಶಗಳಲ್ಲಿ AstraZeneca Covid Vaccine ಬಳಕೆ ರದ್ದು
ಕೊರೊನಾ ಲಸಿಕೆ ಪಡೆದ ನಂತರ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದರಿಂದಾಗಿ ಡೆನ್ಮಾರ್ಕ್, ನಾರ್ವೆ ಮತ್ತು ಐಸ್ಲ್ಯಾಂಡ್ ಗುರುವಾರ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ನವದೆಹಲಿ: ಕೊರೊನಾ ಲಸಿಕೆ ಪಡೆದ ನಂತರ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದರಿಂದಾಗಿ ಡೆನ್ಮಾರ್ಕ್, ನಾರ್ವೆ ಮತ್ತು ಐಸ್ಲ್ಯಾಂಡ್ ಗುರುವಾರ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಇನ್ನೊಂದೆಡೆಗೆ ಈ ಔಷದ ತಯಾರಕರು ಲಸಿಕೆ (Coronavirus) ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಲಸಿಕೆ ಪಡೆದ ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಗಂಭೀರ ಪ್ರಕರಣಗಳ ವರದಿಗಳ ನಂತರ ಡೆನ್ಮಾರ್ಕ್ ತನ್ನ ಅಮಾನತುಗೊಳಿಸುವಿಕೆಯನ್ನು ಮೊದಲು ಘೋಷಿಸಿತು ಎಂದು ದೇಶದ ಆರೋಗ್ಯ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಆತಂಕಕಾರಿ ಎಂದ ಕೇಂದ್ರ...!
ಮಾರ್ಚ್ 9 ರ ಹೊತ್ತಿಗೆ, ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ ಲಸಿಕೆ ಹಾಕಿದ ಮೂರು ದಶಲಕ್ಷಕ್ಕೂ ಹೆಚ್ಚು ಜನರಲ್ಲಿ 22 ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ವರದಿಯಾಗಿವೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ತಿಳಿಸಿದೆ.ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ 49 ವರ್ಷದ ನರ್ಸ್ ಸಾವನ್ನಪ್ಪಿದ ನಂತರ ಆಸ್ಟ್ರಾಜೆನೆಕಾ ಲಸಿಕೆಗಳ ಬಳಕೆಯನ್ನು ಸ್ಥಗಿತಗೊಳಿಸಿದ್ದಾಗಿ ಆಸ್ಟ್ರಿಯಾ ಸೋಮವಾರ ಪ್ರಕಟಿಸಿತು.
ಇತರ ನಾಲ್ಕು ಯುರೋಪಿಯನ್ ರಾಷ್ಟ್ರಗಳಾದ ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಲಕ್ಸೆಂಬರ್ಗ್ ಸಹ ಈ ಬ್ಯಾಚ್‌ನಿಂದ ಲಸಿಕೆಗಳ ಬಳಕೆಯನ್ನು ಸ್ಥಗಿತಗೊಳಿಸಿವೆ.ಆದಾಗ್ಯೂ ಡೆನ್ಮಾರ್ಕ್ ತನ್ನ ಎಲ್ಲಾ ಅಸ್ಟ್ರಾಜೆನೆಕಾ ಪೂರೈಕೆಯ ಬಳಕೆಯನ್ನು ಸ್ಥಗಿತಗೊಳಿಸಿತು, ಐಸ್ಲ್ಯಾಂಡ್ ಮತ್ತು ನಾರ್ವೆ ಗುರುವಾರ ನಂತರದ ಪ್ರಕಟಣೆಗಳಲ್ಲಿ ಇದೇ ರೀತಿಯ ಕಳವಳಗಳನ್ನು ಉಲ್ಲೇಖಿಸಿವೆ.
ಆಸ್ಟ್ರಿಯಾದಲ್ಲಿ ಬಳಸಲಾದ ಅಸ್ಟ್ರಾಜೆನೆಕಾ ಲಸಿಕೆಗಳ ಬ್ಯಾಚ್ ದಾದಿಯ ಸಾವಿಗೆ ಕಾರಣವಾಗುವುದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಬುಧವಾರ ಇಎಂಎ ತಿಳಿಸಿದೆ.
ಇದನ್ನೂ ಓದಿ: Night Party Prohibition: ರಾಜ್ಯದಲ್ಲಿ ಮತ್ತೆ ಕೊರೊನಾ ಉಲ್ಬಣ: ನೈಟ್ ಪಾರ್ಟಿ ನಿಷೇಧ!
"ಇದು ಯುರೋಪಿನ ಕೆಲವು ಪ್ರತ್ಯೇಕ ವರದಿಗಳ ಆಧಾರದ ಮೇಲೆ ಅತ್ಯಂತ ಎಚ್ಚರಿಕೆಯ ವಿಧಾನವಾಗಿದೆ" ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನ ಫಾರ್ಮಾಕೊಪಿಡೆಮಿಯಾಲಜಿ ಪ್ರಾಧ್ಯಾಪಕ ಸ್ಟೀಫನ್ ಇವಾನ್ಸ್ ಹೇಳಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಲಸಿಕೆ ಅಭಿವೃದ್ಧಿಪಡಿಸಿದ ಆಂಗ್ಲೋ-ಸ್ವೀಡಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ತನ್ನ ಉತ್ಪನ್ನದ ಸುರಕ್ಷತೆಯನ್ನು ಸಮರ್ಥಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ