200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆ
ಇಂಗ್ಲೇಂಡಿನ ವೇಲ್ಸ್ ಕರಾವಳಿಯಲ್ಲಿ 200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆಯಾಗಿದೆ.
ನವದೆಹಲಿ: ಇಂಗ್ಲೇಂಡಿನ ವೇಲ್ಸ್ ಕರಾವಳಿಯಲ್ಲಿ 200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆಯಾಗಿದೆ.
ವೇಲ್ಸ್‌ನ ಗ್ಲಾಮೊರ್ಗಾನ್‌ನಲ್ಲಿರುವ ಪೆನಾರ್ತ್ ಕರಾವಳಿಯಲ್ಲಿ ಅಪರೂಪದ ಡೈನೋಸಾರ್ ಹೆಜ್ಜೆಗುರುತುಗಳು ಕಂಡುಬಂದಿವೆ. ಇವು ಸುಮಾರು 2 ಕೋಟಿ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಇವುಗಳನ್ನು 2020 ರಲ್ಲಿ ಪ್ರವಾಸಿಗರು ಕಂಡು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಗೆ ಇದರ ಬಗ್ಗೆ ಮಾಹಿತಿ ನೀಡಿದ್ದರು. ತದನಂತರ ವಿಜ್ಞಾನಿಗಳು ಅದನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದರು.
ಇದನ್ನೂ ಓದಿ- Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..
ಆರಂಭದಲ್ಲಿ ವಿಜ್ಞಾನಿಗಳು ಈ ಗುರುತುಗಳು ಕೆಲವು ಭೂವೈಜ್ಞಾನಿಕ ಪ್ರಕ್ರಿಯೆಯ ಫಲಿತಾಂಶ ಎಂದು ಭಾವಿಸಿದ್ದರು ಆದರೆ ಸಂಶೋಧನೆಯ ನಂತರ ಅವುಗಳನ್ನು ಟ್ರಯಾಸಿಕ್ ಅವಧಿಯ ಡೈನೋಸಾರ್‌ಗಳ ಹೆಜ್ಜೆಗುರುತುಗಳೊಂದಿಗೆ ಹೋಲಿಸಿ ಹೆಚ್ಚಿನ ಸಂಶೋಧನೆಗೆ ಒಳಪಡಿಸಿದಾಗ ಇವುಗಳು ಡೈನೋಸಾರ್‌ಗಳು ಪಳೆಯುಳಿಕೆಗಳು ಎಂದು ತಿಳಿದುಬಂದಿದೆ.
ಡೈನೋಸಾರ್‌ಗಳ ಈ ಅಪರೂಪದ ಹೆಜ್ಜೆಗುರುತುಗಳ ಅಧ್ಯಯನವನ್ನು ಜಿಯೋಲಾಜಿಕಲ್ ಮ್ಯಾಗಜೀನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಮಾನವಶಾಸ್ತ್ರದ ಪ್ಯಾಲಿಯೊಬಯಾಲಜಿಸ್ಟ್ ಪಾಲ್ ಬ್ಯಾರೆಟ್ ಅವರು ಆರಂಭದಲ್ಲಿ ನಾವು ಬೇರೆ ಯಾವುದೋ ಎಂದು ಭಾವಿಸಿದ್ದೇವು ಆದರೆ ನಾವು ಈ ಸ್ಥಳವನ್ನು ಟ್ರಯಾಸಿಕ್ ಅವಧಿಯೊಂದಿಗೆ ಸಂಪರ್ಕಿಸಿದಾಗ, ಈ ಗುರುತುಗಳು ಡೈನೋಸಾರ್‌ಗಳದ್ದೆಂದು ತಿಳಿದುಬಂದಿದೆ ಎಂದು ಹೇಳಿದರು.
ಇದನ್ನೂ ಓದಿ- ಜೈಲಿಗೆ ಹಾಕಿದ್ರು ಪರವಾಗಿಲ್ಲ, ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿ.ಕೆ.ಶಿವಕುಮಾರ್
ಬ್ರಿಟನ್ ಮತ್ತು ಅದರ ಸುತ್ತಮುತ್ತಲಿನ ಟ್ರಯಾಸಿಕ್ ಅವಧಿಯಲ್ಲಿ ವಾಸಿಸುತ್ತಿದ್ದ ಡೈನೋಸಾರ್‌ಗಳು ತುಂಬಾ ದೊಡ್ಡದಾಗಿರಲಿಲ್ಲ, ಅದಕ್ಕಾಗಿ ಇದರ ಹೆಜ್ಜೆಗುರುತುಗಳನ್ನು ಕಂಡುಹಿಡಿಯುವುದು ದೊಡ್ಡ ಸವಾಲಾಗಿತ್ತು, ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಶೋಧನೆ ನಡೆಸಿದಾಗ ವಿವಿಧ ಗಾತ್ರದ ಡೈನೋಸಾರ್‌ಗಳ ಹೆಜ್ಜೆ ಗುರುತುಗಳು ಇರುವುದು ಪತ್ತೆಯಾಗಿದೆ. ಏಕೆಂದರೆ ಕೆಲವು ಗುರುತುಗಳು ತುಂಬಾ ದೊಡ್ಡದಾಗಿರುತ್ತವೆ, ಈ ಪ್ರದೇಶದಲ್ಲಿ ಡೈನೋಸಾರ್‌ಗಳ ಕುಟುಂಬ ಅಥವಾ ಹಿಂಡು ಹಾದು ಹೋಗಿರಬಹುದು ಎಂದು ಪಾಲ್ ಬ್ಯಾರಟ್ ಅವರು ಅಭಿಪ್ರಾಯ ಪಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.