International Women's Day 2023 : ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ವಿಶ್ವದ ಸರಿ ಸುವಾರು ಅರ್ಧದಷ್ಟು ಜನಸಂಖ್ಯೆಯ ಗೌರವಾರ್ಥವಾಗಿ ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವು ಮಹಿಳೆಯರ ಹಕ್ಕುಗಳನ್ನು ಉತ್ತೇಜಿಸುವುದಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನವು ಮಹಿಳಾ ಹಕ್ಕುಗಳ ಚಳುವಳಿಯ ಕೇಂದ್ರಬಿಂದುವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ, ಇದು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ವಿರುದ್ಧದ ಹಿಂಸೆ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆ ವಿಶ್ವದ ಗಮನ ಸೆಳೆಯುತ್ತದೆ. ಇದಲ್ಲದೆ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಾಧನೆಗಳ ಆಚರಣೆಯಾಗಿ ಆಚರಿಸಲಾಗುತ್ತದೆ, ಮಹಿಳೆಯರಿಗೆ ಗೌರವ, ಮೆಚ್ಚುಗೆ ಮತ್ತು ಪ್ರೀತಿಯನ್ನು ತೋರ್ಪಡಿಸುವ ದಿನ ಇದಾಗಿದೆ. ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನವು ಒಂದು ಅಥವಾ ಇನ್ನೊಂದು ಥೀಮ್ ಅನ್ನು ಆಧರಿಸಿರುತ್ತದೆ. 


COMMERCIAL BREAK
SCROLL TO CONTINUE READING

2023 ರ ಅಂತರರಾಷ್ಟ್ರೀಯ ಮಹಿಳಾ ದಿನದ ವಿಷಯವು "ಲಿಂಗ ಸಮಾನತೆಗೆ ನಾವಿನ್ಯತೆ ಮತ್ತು ತಂತ್ರಜ್ಞಾನ" ವಾಗಿದೆ. ಕೆಲವು ಸಮಯದಿಂದ, ವಿಶ್ವಾದಂತ ಲಿಂಗ ಸಮಾನತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜನರು ಈ ವಿಷಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ನಮಗೆ ತಿಳಿಯೋಣ.


ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ
ವಿಶ್ವಸಂಸ್ಥೆಯು ಮಾರ್ಚ್ 8, 1975 ರಂದು ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು, ಆದರೆ ಅದಕ್ಕೂ ಮೊದಲು ಇದನ್ನು 1909 ರಲ್ಲಿ ಆಚರಿಸಲು ಒಮ್ಮೆ ಕಸರತ್ತು ನಡೆಸಲಾಗಿತ್ತು. ವಾಸ್ತವದಲ್ಲಿ, 1909 ರಲ್ಲಿ, ಅಮೇರಿಕಾದಲ್ಲಿ ಮೊದಲ ಬಾರಿಗೆ ಫೆಬ್ರವರಿ 28 ರಂದು ಮಹಿಳಾ ದಿನವನ್ನು ಆಚರಿಸಲಾಯಿತು. 1908 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್ಸ್ ಕಾರ್ಮಿಕರ ಮುಷ್ಕರವನ್ನು ಗೌರವಿಸಲು ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕಾ ಈ ದಿನವನ್ನು ಆರಿಸಿಕೊಂಡಿತ್ತು. ಅದೇ ಸಮಯದಲ್ಲಿ, ಮೊದಲ ಬಾರಿಗೆ, ಫೆಬ್ರವರಿ 28 ರಂದು, ಮಹಿಳಾ ದಿನವನ್ನು ಆಚರಿಸುತ್ತಾ, ರಷ್ಯಾದ ಮಹಿಳೆಯರು ಮೊದಲ ವಿಶ್ವ ಯುದ್ಧದ ವಿರುದ್ಧ ಪ್ರತಿಭಟನೆಯನ್ನು ನಮೂದಿಸಿದರು.


ಇದನ್ನೂ ಓದಿ-Indian Railways Update:ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ!


1917 ರಲ್ಲಿ ರಷ್ಯಾದ ಮಹಿಳೆಯರು ಬ್ರೆಡ್ ಮತ್ತು ಶಾಂತಿಗಾಗಿ ಮುಷ್ಕರ ನಡೆಸಿದರು. ಫೆಬ್ರವರಿ ಕೊನೆಯ ಭಾನುವಾರದಂದು ಮುಷ್ಕರ ಪ್ರಾರಂಭವಾಯಿತು. ಇದು ಐತಿಹಾಸಿಕ ಮುಷ್ಕರವಾಗಿತ್ತು ಮತ್ತು ರಷ್ಯಾದ ಝಾರ್ ಅಧಿಕಾರವನ್ನು ತೊರೆದಾಗ, ಅಲ್ಲಿನ ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ಯುರೋಪ್‌ನಲ್ಲಿ ಮಹಿಳೆಯರು ಮಾರ್ಚ್ 8 ರಂದು ರ್ಯಾಲಿಗಳನ್ನು ನಡೆಸಿದರು.


ಇದನ್ನೂ ಓದಿ-UPSC ಪರೀಕ್ಷೆ ಬರೆದ AI ಚಾಟ್ ಬಾಟ್ ChatGPT, ಪಾಸಾಯ್ತಾ ಅಥವಾ ಫೇಲಾಯ್ತಾ?


ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಾಮುಖ್ಯತೆ
ಮಹಿಳೆಯರಿಗೆ ಗೌರವ ಮತ್ತು ಪ್ರೀತಿ ನೀಡುವ ಬಗ್ಗೆ ಸಮಾಜದ ಜನರಿಗೆ ಅರಿವು ಮೂಡಿಸುವುದು ಮತ್ತು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರ ಚೈತನ್ಯವನ್ನು ಹೆಚ್ಚಿಸಲು ಮತ್ತು ಸಮಾಜದಲ್ಲಿ ಹರಡಿರುವ ಅಸಮಾನತೆಯನ್ನು ಹೋಗಲಾಡಿಸಲು ಈ ದಿನವು ಬಹಳ ಮುಖ್ಯವಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.