ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ವುದ್ಯರ ಬಳಿ ತೆರಳಿದ್ದ ಬ್ರಿಟನ್ ಮಹಿಳೆಯ ಕಣ್ಣಿನಲ್ಲಿ 28 ವರ್ಷಗಳ ಹಿಂದಿನ ಕಾಂಟ್ಯಾಕ್ಟ್ ಲೆನ್ಸ್ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಬಿಎಂಜೆ ಜರ್ನಲ್ ಪ್ರಕಟಿಸಿದ್ದು, ಸಿಎನ್ಎನ್ ಸಂಸ್ಥೆ ವರದಿ ಮಾಡಿದೆ. ಅದರಂತೆ 42 ವರ್ಷಗಳ ಮಹಿಳೆಯೊಬ್ಬರು ಕಣ್ಣಿನ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗ ವೈದ್ಯರು ಶಸ್ತ್ರ ಚಿಕಿತ್ಸೆಗೂ ಮೊದಲು ಎಂಆರ್ ಐ ಸ್ಕ್ಯಾನಿಂಗ್ ಮಾಡಿದಾಗ ಆಕೆಯ ಕಣ್ಣಿನಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಇದ್ದುದು ಪತ್ತೆಯಾಗಿದೆ. ಇದು ಬಹಳ ಹಳೆಯದಾಗಿದ್ದು, ಸಂಪೂರ್ಣ ಹಾಳಾದ ಸ್ಥಿತಿಯಲ್ಲಿದ್ದುದನ್ನು ಕಂಡ ವೈದ್ಯರಿಗೆ ಈ ಲೆನ್ಸ್ ಆಕೆಯ ಕಣ್ಣಿನಲ್ಲಿ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆ ಕಾಡತೊಡಗಿತು. ಈ ಬಗ್ಗೆ ಆ ಮಹಿಳೆಯನ್ನು ಕೇಳಲಾಗಿ, ಆಕೆಗೆ ತನ್ನ ಕಣ್ಣಿನಲ್ಲಿ ಲೆನ್ಸ್ ಇರುವ ಅರಿವೇ ಇರಲಿಲ್ಲ ಎಂಬುದನ್ನು ತಿಳಿದ ವೈದ್ಯರಿಗೆ ಇದೊಂದು ಉಹೆಗೂ ನಿಲುಕದ ಪ್ರಶ್ನೆಯಾಗಿಯೇ ಉಳಿದಿತ್ತು. 


ಆದರೆ, ಈ ಬಗ್ಗೆ ಆ ಮಹಿಳೆಯ ತಾಯಿಯನ್ನು ವಿಚಾರಿಸಿದಾಗ, 28 ವರ್ಷಗಳ ಹಿಂದೆ ತಮ್ಮ ಮಗಳು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದುದಾಗಿಯೂ, ಆದರೆ ಬ್ಯಾಡ್ಮಿಂಟನ್ ಆಡುವಾಗ ಶಟಲ್ ಕಾಕ್ ಆಕೆಯ ಕಣ್ಣಿಗೆ ತಗುಲಿ ನೋವಾಗಿ ಆ ಲೆನ್ಸ್ ಬಿದ್ದುಹೊಗಿರಬಹುದು ಎಂದು ತಿಳಿದಿದ್ದಾಗಿಯೂ ಹೇಳಿದ್ದಾರೆ. ಆದರೂ ಕಳೆದ 28 ವರ್ಷಗಳಿಂದ ಆ ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿನಲ್ಲಿ ಇದ್ದರೂ ಮಹಿಳೆಗೆ ತಿಳಿಯದಿರುವುದು ಕಂಡು ವೈದ್ಯರಿಗೇ ಅಚ್ಚರಿಯಾಗಿತ್ತು. ಆದರೂ 28 ವರ್ಷಗಳ ಹಳೆಯ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಮಹಿಳೆಯ ಕಣ್ಣಿನಿಂದ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.