Donald Trump: 7 ಗಂಟೆ ಡೊನಾಲ್ಡ್ ಟ್ರಂಪ್ ವಿಚಾರಣೆ, ಯಾವ ಪ್ರಕರಣ ಗೊತ್ತಾ?
Donald Trump: ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್‌ಗಳು & ಗಾಲ್ಫ್ ಕೋರ್ಸ್‌ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್‌ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಂಪನಿ ವ್ಯವಹಾರ ಚಟುವಟಿಕೆ ಪ್ರಕರಣ ಸಂಬಂಧ ನ್ಯೂಯಾರ್ಕ್ ಅಟಾರ್ನಿ ಜನರಲ್ ಕಚೇರಿ ಗುರುವಾರ ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ವ್ಯಾಪಾರ ಚಟುವಟಿಕೆ ವಿರುದ್ಧ ದಾಖಲಾದ ಮೊಕದ್ದಮೆಗೆ ಸಂಬಂಧಿಸಿದಂತೆ ಟ್ರಂಪ್ 2ನೇ ಬಾರಿಗೆ ಸಾಕ್ಷ್ಯ ನೀಡಿದ್ದಾರೆ. ರಿಪಬ್ಲಿಕನ್ ನಾಯಕ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರ ವಕೀಲರನ್ನು ಭೇಟಿಯಾದರು.
ಜೇಮ್ಸ್ ಕಳೆದ ವರ್ಷ ಮಾಜಿ ಅಧ್ಯಕ್ಷರ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಟಾರ್ನಿ ಜನರಲ್ ಅವರ ಮೊಕದ್ದಮೆಯು ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್‌ಗಳು & ಗಾಲ್ಫ್ ಕೋರ್ಸ್‌ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್‌ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರು ಟ್ರಂಪ್ ವಿರುದ್ಧ ಸಲ್ಲಿಸಿದ ಕ್ರಿಮಿನಲ್ ಆರೋಪಗಳಿಂದ ಮೊಕದ್ದಮೆ ಪ್ರತ್ಯೇಕವಾಗಿದೆ.
ಟ್ರಂಪ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಕಟ್ಟಡ ಪ್ರವೇಶಿಸಿದ ಸ್ವಲ್ಪ ಸಮಯದ ನಂತರ, ಅವರ ವಕೀಲ ಎಲಿನಾ ಹಬ್ಬಾ ಅವರು ‘ಸಾಕ್ಷ್ಯ ನೀಡಲು ಬಯಸುವುದು ಮಾತ್ರವಲ್ಲ, ಅವರು ಅದನ್ನು ಎದುರು ನೋಡುತ್ತಿದ್ದಾರೆ’ ಎಂದು ಹೇಳಿದರು. ಜೇಮ್ಸ್ ಅವರ ಕಚೇರಿಗಳು ಸಹ ಈ ಕಟ್ಟಡದಲ್ಲಿವೆ.
ಇದನ್ನೂ ಓದಿ: Viral Video: ಹೆಣ್ಣುಚಿಟ್ಟೆಯ ಮನಗೆಲ್ಲಲು ಗಂಡು ಚಿಟ್ಟೆಗಳ ಹರಸಾಹಸ: ಹಿಂದೆಂದೂ ಕಂಡಿರದ ಪಾತರಗಿತ್ತಿ ಲೋಕದ ವಿಚಿತ್ರ ವಿಡಿಯೋ
‘ಸತ್ಯ ಬೆಳಕಿಗೆ ಬಂದಾಗ ಸ್ಪಷ್ಟವಾಗುತ್ತದೆ’
ಸಾಕ್ಷ್ಯವನ್ನು ಪೂರ್ಣಗೊಳಿಸಿದ ನಂತರ ಟ್ರಂಪ್, ಸುಮಾರು 7 ಗಂಟೆಗಳ ಕಾಲ ತಮ್ಮ ವ್ಯವಹಾರದ ಯಶಸ್ಸಿನ ಬಗ್ಗೆ ವಿವರವಾಗಿ ವಿವರಿಸಿದರು ಎಂದು ಅವರ ವ್ಯವಹಾರಗಳ ವಕೀಲ ಕ್ರಿಸ್ಟೋಫರ್ ಕೇಸಿ ಹೇಳಿದರು. ಈ ಯಶಸ್ಸಿಗೆ ಸಂಬಂಧಿಸಿದ ಸಂಗತಿಗಳು ಬಯಲಿಗೆ ಬಂದಾಗ ಯಾವುದೇ ವಂಚನೆ ನಡೆದಿಲ್ಲವೆಂಬುದು ಸ್ಪಷ್ಟವಾಗುತ್ತದೆ ಎಂದು ಕೇಸಿ ಹೇಳಿದ್ದಾರೆ. ಅದೇ ರೀತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾಕ್ಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಜೇಮ್ಸ್ ನಿರಾಕರಿಸಿದರು.
ಗುರುವಾರ ಬೆಳಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಟ್ರಂಪ್, ‘ಇತರ ಪ್ರಕರಣಗಳಂತೆ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ, ಇದು ಹಾಸ್ಯಾಸ್ಪದ’ ಎಂದು ಹೇಳಿದ್ದಾರೆ. ಈ ಹಿಂದಿನ ಪೋಸ್ಟ್‌ನಲ್ಲಿ ಟ್ರಂಪ್, ‘ವ್ಯಾಜ್ಯದ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ನಾನು ಎಷ್ಟು ದೊಡ್ಡ, ಲಾಭದಾಯಕ ಮತ್ತು ಮೌಲ್ಯಯುತ ಕಂಪನಿ ನಿರ್ಮಿಸಿದ್ದೇನೆ ಎಂಬುದನ್ನು ತೋರಿಸಲು ಸಾಧ್ಯವಾಗುತ್ತದೆ’ ಎಂದಿದ್ದರು.
ಟ್ರಂಪ್ ಕಳೆದ ವರ್ಷ ಆಗಸ್ಟ್ 10ರಂದು ಜೇಮ್ಸ್ ಅವರ ವಕೀಲರನ್ನು ಭೇಟಿಯಾಗಿದ್ದರು. ಆದರೆ ಕೆಲವು ಕಾರ್ಯವಿಧಾನದ ಪ್ರಶ್ನೆಗಳನ್ನು ಹೊರತುಪಡಿಸಿ ಯಾವುದಕ್ಕೂ ಉತ್ತರಿಸಲು ಅವರು ನಿರಾಕರಿಸಿದರು. ಜೇಮ್ಸ್ ಸಲ್ಲಿಸಿರುವ ಮೊಕದ್ದಮೆಯ ವಿಚಾರಣೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Radhika Apte: “ನಿನ್ನ ಸ್ತನಗಳು ಯಾಕೆ ಚಿಕ್ಕ, ದಪ್ಪ ಮಾಡಿಸು..!” ಬಾಲಿವುಡ್ ಕರ್ಮಕಾಂಡ ಬೀದಿಗೆ ತಂದ್ಳು ಖ್ಯಾತ ನಟಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.