Earthquake: ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
Earthquake in Solomon Islands: ಮಂಗಳವಾರ (ನವೆಂಬರ್ 22) ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Earthquake in Solomon Islands: ಪೆಸಿಫಿಕ್ ಮಹಾಸಾಗರದ ಸೊಲೊಮನ್ ದ್ವೀಪಗಳಲ್ಲಿ ಮಂಗಳವಾರ (ನವೆಂಬರ್ 22) 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸೋಲೊಮನ್ ದ್ವೀಪಗಳಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪದ ಬಳಿಕ ಭೂಕಂಪದ ಕೇಂದ್ರದಿಂದ 300 ಕಿಲೋಮೀಟರ್ (185 ಮೈಲುಗಳು) ಒಳಗೆ ಸೊಲೊಮನ್ಸ್ ಕರಾವಳಿಯ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ- Earthquake in Indonesia: ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: 20 ಮಂದಿ ಮೃತ, 300ಕ್ಕೂ ಹೆಚ್ಚು ಜನರಿಗೆ ಗಾಯ
ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ 7:33 ಕ್ಕೆ ಭೂಕಂಪ ಸಂಭವಿಸಿದೆ, ಅದರ ಕೇಂದ್ರವು 10 ಕಿಮೀ ಆಳದಲ್ಲಿದೆ ಎಂದು ತಿಳಿದುಬಂದಿದೆ. ಸೊಲೊಮನ್ ದ್ವೀಪಗಳ ಮಲಂಗೋ ಬಳಿ ಭೂಕಂಪ ಅಪ್ಪಳಿಸಿದ್ದು, ದೇಶದ ಕರಾವಳಿ, ಪಪುವಾ ನ್ಯೂಗಿನಿಯಾ ಮತ್ತು ವನವಾಟು ಪ್ರದೇಶಗಳಲ್ಲೂ ಇದರ ಪ್ರಭಾವ ಕಂಡುಬಂದಿದೆ. ಭೂಕಂಪದಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ತಮ್ಮ ಕಚೇರಿಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.
ಇದನ್ನೂ ಓದಿ- Earthquake : ದೇಶದ ಹಲವು ರಾಜ್ಯಗಳಲ್ಲಿ ನಡುಗಿದ ಭೂಮಿ, 4 ದಿನಗಳಲ್ಲಿ ಎರಡನೇ ಬಾರಿಗೆ ಭೂಕಂಪನ!
ಇನ್ನು ಸೊಲೊಮನ್ ದ್ವೀಪಗಳಲ್ಲಿ ಭೂಕಂಪದ ವರದಿಯಾಗುತ್ತಿದ್ದಂತೆ ಸೊಲೊಮನ್ ದ್ವೀಪಗಳ ಪ್ರಧಾನಮಂತ್ರಿಗಳ ಕಚೇರಿಯು ಜನರನ್ನು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸಲಹೆ ನೀಡಿದೆ. ಇದೇ ಸಂದರ್ಭದಲ್ಲಿ ಭೂಕಂಪದಿಂದಾಗಿ ರಾಜಧಾನಿ ಹೊನಿಯಾರಾದಲ್ಲಿ ಯಾವುದೇ ಕಟ್ಟಡಗಳಲ್ಲೂ ಹಾನಿ ಬಗ್ಗೆ ವರದಿಯಾಗಿಲ್ಲ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.