ಅರುಣಾಚಲ ಪ್ರದೇಶದಲ್ಲಿ ಎರಡು ಬಾರಿ ನಡುಗಿದ ಭೂಮಿ.!

Earthquake in North East :ಭೂಕಂಪದಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸ್ವಲ್ಪ ಸಮಯದ ಹಿಂದೆ ಕೂಡಾ, ಈ ಪ್ರದೇಶದಲ್ಲಿ ಪ್ರಬಲ  ಭೂಕಂಪದ ಅನುಭವವಾಗಿತ್ತು.  

Written by - Ranjitha R K | Last Updated : Nov 10, 2022, 12:19 PM IST
  • ಗುರುವಾರ ನಡುಗಿದ ಭೂಮಿ
  • ಬೆಳಗ್ಗೆ ಪ್ರಬಲ ಭೂಕಂಪನದ ಅನುಭವ
  • ಭೂಕಂಪದ ತೀವ್ರತೆ 5.7ರಷ್ಟು ದಾಖಲು
 ಅರುಣಾಚಲ ಪ್ರದೇಶದಲ್ಲಿ ಎರಡು ಬಾರಿ ನಡುಗಿದ ಭೂಮಿ.! title=
Earthquake today (file photo)

Earthquake in North East : ಅರುಣಾಚಲ ಪ್ರದೇಶದಲ್ಲಿ  ಗುರುವಾರ ಭೂಮಿ ಕಂಪಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಬೆಳಗ್ಗೆ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.7ರಷ್ಟು ದಾಖಲಾಗಿದೆ.

ಆದರೆ, ಭೂಕಂಪದಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸ್ವಲ್ಪ ಸಮಯದ ಹಿಂದೆ ಕೂಡಾ, ಈ ಪ್ರದೇಶದಲ್ಲಿ ಪ್ರಬಲ  ಭೂಕಂಪದ ಅನುಭವವಾಗಿತ್ತು.

ಇದನ್ನೂ ಓದಿ : India Post Recruitment 2022 : ಅಂಚೆ ಇಲಾಖೆಯಲ್ಲಿ 188 ಹುದ್ದೆಗಳಿಗೆ ಅರ್ಜಿ ಆಹ್ವಾನ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

ಭೂಕಂಪದ ಮುನ್ಸೂಚನೆ ನೀಡಲಾಗಿತ್ತು :
ಬುಧವಾರ ಮುಂಜಾನೆ ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ತಡರಾತ್ರಿ ಭೂಮಿ ನಡುಗಿತ್ತು. ಇದಾದ ನಂತರ  ಹಿಮಾಲಯ ಪ್ರದೇಶದಲ್ಲಿ  ಪ್ರಬಲ ಭೂಕಂಪವಾಗುವ ಸಂಭವ ಇದೆ ಎಂದು ಹೇಳಲಾಗಿತ್ತು. 

ವಿಜ್ಞಾನಿಗಳು ಏನು ಹೇಳುತ್ತಾರೆ?:
ಭೂಗರ್ಭಶಾಸ್ತ್ರಜ್ಞ ಡಾ.ಅಜಯ್ ಪೌಲ್ ಮಾತನಾಡಿ, ಹಿಮಾಲಯದ ಅಡಿಯಲ್ಲಿ ಶಕ್ತಿಯ ಶೇಖರಣೆಯಿಂದಾಗಿ ಭೂಕಂಪಗಳು ಸಂಭವಿಸುವುದು ಸಾಮಾನ್ಯ ಮತ್ತು ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ಇಡೀ ಹಿಮಾಲಯದ ಪ್ರದೇಶವು ಭೂಕಂಪಗಳಿಗೆ ಬಹಳ ಸೂಕ್ಷ್ಮವಾದ ಪ್ರದೇಶವಾಗಿದ್ದು, ಇಲ್ಲಿ ಯಾವಾಗಲೂ ಪ್ರಬಲ ಭೂಕಂಪವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ತೀವ್ರತೆ ಹೊಂದುವ ಸಾಧ್ಯತೆಯಿದೆ ಎಂದು  ಹೇಳಿದ್ದಾರೆ.  ಆದರೂ, ಈ ಅಸ್ಪಷ್ಟ ಶಕ್ತಿಯ ಬಿಡುಗಡೆ ಅಥವಾ ಭೂಕಂಪ ಸಂಭವಿಸುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಡಾ ಪಾಲ್ ಹೇಳಿದ್ದಾರೆ. ಹಾಗಾಗಿ ಭೂಕಂಪ  ಯಾವ ಸಂದರ್ಭದಲ್ಲಿ ಸಂಭವಿಸಬಹುದು ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Patra Chawl Case: ಪತ್ರಾ ಚಾಲ್ ಪ್ರಕರಣ ವಿಚಾರಣೆ: ಸಂಜಯ್ ರಾವತ್ ಗೆ ಜಾಮೀನು ಮಂಜೂರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News