ಜಪಾನ್‌ನಲ್ಲಿ ಭಾರೀ ಭೂಕಂಪ, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು
Japan Earthquake: ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಬುಧವಾರ ರಾತ್ರಿ ಏಕಾಏಕಿ ಭೂಮಿ ಕಂಪಿಸಿದ್ದು ಜನರು ಆತಂಕಗೊಂಡಿದ್ದಾರೆ.
Japan Earthquake Updates : ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಬುಧವಾರ ರಾತ್ರಿ ಏಕಾಏಕಿ ಭೂಮಿ ಕಂಪಿಸಿದ್ದು ಜನರು ಆತಂಕಗೊಂಡಿದ್ದಾರೆ. ಭೂಕಂಪ ಸಂಭವಿಸುತ್ತಿದ್ದಂತೆ ಕೆಲವೆಡೆ ಜನರು ಓಡಿ ಮನೆಯಿಂದ ಹೊರಬಂದಿದ್ದಾರೆ.
ಜಪಾನ್ ಹವಾಮಾನ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ದಕ್ಷಿಣ ಜಪಾನ್‌ನ ನ್ಯಾನ್ಯೊ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಜಪಾನ್‌ನ ಕೈಕು ಮತ್ತು ಶಿಕೋಕು ದ್ವೀಪಗಳನ್ನು ಬೇರ್ಪಡಿಸುವ ಬಂಗೋ ಚಾನೆಲ್ ಭೂಕಂಪದ ಕೇಂದ್ರಬಿಂದು ಎಂದು ಕಂಡುಬಂದಿದೆ. ಆಸ್ತಿ ಮತ್ತು ಪ್ರಾಣಹಾನಿಗಳ ಕುರಿತು ಯಾವುದೇ ಮಾಹಿತಿ ಹಿರಬಿದ್ದಿಲ್ಲ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಮಳೆ, ತುರ್ತು ಪರಿಸ್ಥಿತಿ ಘೋಷಣೆ
ಜಪಾನ್‌ನ ಉವಾಜಿಮಾದಿಂದ ಪಶ್ಚಿಮಕ್ಕೆ 18 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರವನ್ನು ಯುಎಸ್ ಜಿಯೋಲಾಜಿಕಲ್ ಸರ್ವೆ ಪತ್ತೆ ಮಾಡಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ ಎನ್ನಲಾಗಿದೆ. ರಿಕ್ಟರ್ ಮಾಪಕದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯುಳ್ಳ ಭೂಕಂಪ ಹೆಚ್ಚಾಗಿ ಜಪಾನ್‌ನಲ್ಲಿ ಸಂಭವಿಸುತ್ತವೆ.
ಮಾರ್ಚ್ ತಿಂಗಳಿನಲ್ಲಿಯೂ ಜಪಾನ್ ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲಾಗಿತ್ತು.
ಇದನ್ನೂ ಓದಿ: ಲಡಾಖ್ : ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.