ಜಕಾರ್ತ: ಇಂಡೋನೇಷ್ಯಾದ ಲೊಂಬೊಕ್ ಐಲ್ಯಾಂಡ್ನಲ್ಲಿ ಭಾನುವಾರ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 82 ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೇ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ನಿನ್ನೆ ಸಂಜೆ ಈ ಭೂಕಂಪನದ ತೀವ್ರತೆಗೆ ಬಾಲಿಯ ಸುತ್ತಮುತ್ತಲ ಪ್ರದೇಶಗಳ ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ. ಸಾಕಷ್ಟು ಪ್ರವಾಸಿಗರು ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಘಟನೆ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋನೇಷ್ಯಾ ಸೇನೆ, ಸ್ಥಳೀಯ ಅಗ್ನಿಶಾಮಕ ದಳಗಳು, ನೈಸರ್ಗಿಕ ವಿಕೋಪ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಲೊಂಬೊಕ್ ನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.


ನಿನ್ನೆ ಸಂಜೆಯೇ ಸುನಾಮಿಯ ಸೂಚನೆ ಬಂದಿದ್ದರಿಂದ ಪ್ರವಾಸಿಗರು ಆತಂಕಕ್ಕೀಡಾಗಿದ್ದರು. ಆದರೆ, ಸುನಾಮಿಯ ಸಾಧ್ಯತೆಯಿಲ್ಲ ಎಂದು ತಿಳಿದ ಬಳಿಕ ಪ್ರವಾಸಿಗರು ನಿಟ್ಟುಸಿರು ಬಿಟ್ಟರು.