ನವದೆಹಲಿ: ದಕ್ಷಿಣ ಕೊರಿಯಾದ ಡೇಗು ನಗರದಲ್ಲಿ ಭಾನುವಾರ ರಿಕ್ಟರ್ ಮಾಪನದಲ್ಲಿ 4.7 ರಷ್ಟು ಭೂಕಂಪನ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೆ  ಪ್ರಕಾರ  ಭೂಕಂಪನವು ಹೊಕೊದ ವಾಯುವ್ಯ ಭಾಗಕ್ಕೆ ಸುಮಾರು ಏಳು ಕಿ.ಮೀ.ದೂರದಲ್ಲಿ  10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ಯಾವುದೇ ಸಾವು ನೋವುಗಳ  ಬಗ್ಗೆ ವರದಿಯಾಗಿಲ್ಲ.


ಕಳೆದ ವಾರ ತೈವಾನ್ ಉಂಟಾಗಿದ್ದ  ಭೂಕಂಪದಲ್ಲಿ  14 ಮಂದಿ ಪ್ರಾಣ ಕಳೆದುಕೊಂಡಿದ್ದರಲ್ಲದೆ ಮತ್ತು 260ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶವಾದ ರಿಂಗ್ ಆಫ್ ಫೈರ್ನಲ್ಲಿ ತೈವಾನ್ ಇದೆ.  ಆದ್ದರಿಂದ  ಪೆಸಿಫಿಕ್ ಸಾಗರದಲ್ಲಿ  ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತಿದೆ.