ಇದೀಗ ಇಡೀ ದೇಶದ ಜನರು ಕರೋನಾದಿಂದ ಬಳಲುತ್ತಿದ್ದಾರೆ. ಕೊರೋನಾ ಎರಡನೇ  ಅಲೆಯು ಭಾರಿ ಜೋರಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಈ ರೋಗಕ್ಕೆ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಎಲ್ಲರೂ ತತ್ತರಿಸುತ್ತಿದ್ದಾರೆ. ಆದ್ದರಿಂದ, ಈ ಸೋಂಕನ್ನು ನಿಯಂತ್ರಿಸಲು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ಏಕೆಂದರೆ ನಮ್ಮ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ ನಮ್ಮ ದೇಹವು ಕರೋನಾ ವೈರಸ್ ಹೊರತುಪಡಿಸಿ ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಈ ಸಮಯದಲ್ಲಿ ಅನೇಕ ಜನರು ತಮ್ಮ ರೋಗನಿರೋಧಕ ಶಕ್ತಿ(Immunity Power)ಯನ್ನು ಹೆಚ್ಚಿಸಲು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಮನೆಯಲ್ಲಿ ರೋಗನಿರೋಧಕ ಹೆಚ್ಚಿಸುವ  ಪಾಕವಿಧಾನ ಬಗ್ಗೆ ಹೇಳಿಲಿದ್ದೇವೆ, ಇದರ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕ ರೀತಿಯಲ್ಲಿ ಹೆಚ್ಚಿಸಬಹುದು. 


ಇದನ್ನೂ ಓದಿ : Corona Vaccine ಬೂಸ್ಟರ್ ಡೋಸ್ ಗೆ ಸಿದ್ಧತೆ, ಈಗಾಗಲೇ 7 ಜನರ ಮೇಲೆ ಟ್ರಯಲ್ ಆರಂಭ


ಪೇಸ್ಟ್ ತಯಾರಿಸಲು ಬೇಕಾದ ವಸ್ತುಗಳು : 


5-6 ಕರಿಬೇವಿನ ಎಲೆಗಳು(Curry Leaves)
8-10 ತುಳಸಿ ಎಲೆಗಳು
ಒಂದು ಚಮಚ ಜೇನುತುಪ್ಪ


ಇದನ್ನೂ ಓದಿ : Almond Recipe:ನೀವೂ ಕೂಡ ಒಂದು ಬಾರಿ ಸವಿದು ನೋಡಿ ಬಾದಾಮ್-ತುಳಸಿಯ ಈ ಚಟ್ನಿ


ಈ ಪೇಸ್ಟ್ ತಯಾರಿಸುವುದು ಹೇಗೆ


ಕರಿಬೇವಿನ ಮತ್ತು ತುಳಸಿ ಎಲೆಗಳು ಮನೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಆಯುರ್ವೇದ(Ayurveda)ದಲ್ಲಿ ಎರಡೂ ವಿಷಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ತುಳಸಿ, ಕರಿಬೇವಿನ ಎಲೆಗಳು ಮತ್ತು ಜೇನುತುಪ್ಪ ivugalu  ಅನೇಕ ಔಷಧಿಯ ಗುಣಗಳನ್ನು ಹೊಂದಿವೆ. ಈ ಪೇಸ್ಟ್ ತಯಾರಿಸಲು ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳನ್ನು ಒಟ್ಟಿಗೆ ಪುಡಿ ಮಾಡಿ. ನಂತರ ಈ ಪೇಸ್ಟ್ ಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಇಮ್ಯುನಿಟಿ ಬೂಸ್ಟರ್ ಪೇಸ್ಟ್ ಸಿದ್ಧವಾಗಿದೆ. ಈಗ ನೀವು ಈ ಪೇಸ್ಟ್ ಅನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು. ಆದರೆ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : ಹೀಗೆ ಮಾಡಿದರೆ ಬೇಸಿಗೆಯಲ್ಲಿ ಬಾಳೆಹಣ್ಣು ಕಪ್ಪಾಗದಂತೆ ತಡೆಯಬಹುದು..!


ಈ ಪ್ರಯೋಜನಗಳು ಸಹ ಇರುತ್ತದೆ : 


ತುಳಸಿ, ಜೇನುತುಪ್ಪ ಮತ್ತು ಕರಿಬೇವಿನ ಎಲೆಯಾ ಪೇಸ್ಟ್ ತೆಗೆದುಕೊಳ್ಳುವದರಿಂದ ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಗಳು(Breathing Problem) ನಿವಾರಣೆಯಾಗುತ್ತವೆ. ಈ ಪೇಸ್ಟ್ ಅನ್ನು ದಿನಕ್ಕೆ 1-2 ಬಾರಿ ಸೇವಿಸಬೇಕು. ನೀವು ಬಯಸಿದರೆ, ಇದನ್ನ ಈ ರೀತಿ ಕೂಡ ಸೇವಿಸಬಹುದು ಒಂದು ಕಪ್ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ನಿಮ್ಮ ರುಚಿಗೆ ಅನುಗುಣವಾಗಿ ಕುಡಿಯಬಹುದು. ಉತ್ತಮ ಫಲಿತಾಂಶಕ್ಕಾಗಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಪ್ರತಿದಿನ ಸೇವಿಸಿ.


ಇದನ್ನೂ ಓದಿ : Skin Care: ಬೇಸಿಗೆಯಲ್ಲಿ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಕೊತ್ತಂಬರಿ ಫೇಸ್ ಪ್ಯಾಕ್ ಟ್ರೈ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.