ಹೀಗೆ ಮಾಡಿದರೆ ಬೇಸಿಗೆಯಲ್ಲಿ ಬಾಳೆಹಣ್ಣು ಕಪ್ಪಾಗದಂತೆ ತಡೆಯಬಹುದು..!

ಬಾಳೆಹಣ್ಣನ್ನು ಹ್ಯಾಂಗರ್ ರೀತಿಯಲ್ಲಿ ನೇತು ಹಾಕಿದರೆ ಬಹಳ ನಿಧಾನವಾಗಿ ಹಣ್ಣಾಗುತ್ತದೆ. ಅಂದರೆ ಬಹಳದಿನದ ತನಕ  ಅದರ ತಾಜಾತನ ಹಾಗೆ ಇರುತ್ತದೆ.

Written by - Ranjitha R K | Last Updated : Apr 27, 2021, 05:02 PM IST
  • ಬಾಳೆಹಣ್ಣು ಬೇಗನೆ ಕಪ್ಪಾಗದಂತೆ ಏನು ಮಾಡಬಹುದು ?
  • ಬಾಳೆ ಹಣ್ಣು ಹ್ಯಾಂಗರ್ ನಲ್ಲಿ ನೇತು ಹಾಕಿದರೆ ತಾಜಾತನ ಹಾಗೇ ಉಳಿಯುತ್ತದೆ
  • ಅಲ್ಯೂಮೀನಿಯಂ ಫಾಯಿಲ್ ನಿಂದ ಬಾಳೆ ಹಣ್ಣಿನ ಬುಡ ಸುತ್ತಿದರೂ ಪ್ರಯೋಜನವಾಗುತ್ತದೆ
ಹೀಗೆ ಮಾಡಿದರೆ ಬೇಸಿಗೆಯಲ್ಲಿ ಬಾಳೆಹಣ್ಣು ಕಪ್ಪಾಗದಂತೆ ತಡೆಯಬಹುದು..! title=
ಬಾಳೆಹಣ್ಣು ಬೇಗನೆ ಕಪ್ಪಾಗದಂತೆ ಏನು ಮಾಡಬಹುದು ? (file photo)

ನವದೆಹಲಿ : ಬಾಳೆ ಹಣ್ಣು (Banana) ವರ್ಷ ಪೂರ್ತಿ ಸಿಗುವ ಹಣ್ಣು. ಪ್ರತಿ ಮನೆಯಲ್ಲೂ ಬಾಳೆಹಣ್ಣು ಇದ್ದೇ ಇರುತ್ತದೆ. ಆರೋಗ್ಯಕ್ಕೂ ಬಹಳ  ಉತ್ತಮ.  ಈ ಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೇಶಿಯಂ, ಐರನ್, ಹಲವು ರೀತಿಯ ವಿಟಮಿನ್, ಫೈಬರ್ ಬೇಕಾದಷ್ಟು ಸಿಗುತ್ತದೆ. ಊಟದ ನಂತರ ಬಾಳೆ ಹಣ್ಣು ತಿನ್ನೋದು ಆರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು.  ಆದರೆ ಬೇಸಿಗೆಯಲ್ಲಿ (Summer) ಈ ಹಣ್ಣು ಬಲು ಬೇಗ ಕಪ್ಪಾಗುತ್ತದೆ. ಮಕ್ಕಳು ಕಪ್ಪಾದ ಬಾಳೆಹಣ್ಣು ತಿನ್ನಲು ಒಪ್ಪುವುದಿಲ್ಲ. ಬಾಳೆ ಹಣ್ಣು ಕಪ್ಪಾಗದಂತೆ ಬಹಳ ದಿನ ಹಾಗೆ ಕಾಪಾಡಬಹುದು. ಅಂಥಹ ಕೆಲವು ಅಡುಗೆ ಮನೆ ಟ್ರಿಕ್ಸ್ ಇಲ್ಲಿದೆ. 

1.ಬಾಳೆಹಣ್ಣನ್ನು ಹ್ಯಾಂಗರಿನಲ್ಲಿ ಹಾಕಿ : ಬಾಳೆಹಣ್ಣನ್ನು ಹ್ಯಾಂಗರ್ (Banana Hanger)ರೀತಿಯಲ್ಲಿ ನೇತು ಹಾಕಿದರೆ ಬಹಳ ನಿಧಾನವಾಗಿ ಹಣ್ಣಾಗುತ್ತದೆ. ಅಂದರೆ ಬಹಳದಿನದ ತನಕ  ಅದರ ತಾಜಾತನ ಹಾಗೆ ಇರುತ್ತದೆ. ಬಹುಬೇಗ ಕಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿ ಬಾಳೆಹಣ್ಣು (Banana) ನೇತು ಹಾಕುವ ಹ್ಯಾಂಗರುಗಳೇ ಸಿಗುತ್ತವೆ. 

ಇದನ್ನೂ ಓದಿ Skin Care: ಬೇಸಿಗೆಯಲ್ಲಿ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಕೊತ್ತಂಬರಿ ಫೇಸ್ ಪ್ಯಾಕ್ ಟ್ರೈ ಮಾಡಿ

2.ಅಲ್ಯೂಮೀನಿಯಂ ಫಾಯಿಲ್ ನಿಂದ (aluminium foil) ಬಾಳೆ ಹಣ್ಣಿನ ಕವಲಿನ ಬುಡಭಾಗವನ್ನು ಸುತ್ತಿಡಿ. ಹೀಗೆ ಮಾಡಿದರೂ ಬಾಳೆ ಹಣ್ಣು ನಿಧಾನವಾಗಿ ಹಣ್ಣಾಗುತ್ತದೆ. ಬಾಳೆ ಹಣ್ಣಿನ ಗುಚ್ಛದ ಬುಡ  ಅಥವಾ  ಪ್ರತ್ಯೇಕ ಬಾಳೆಹಣ್ಣಿನ ಬುಡವನ್ನು ಅಲ್ಯೂಮೀನಿಯಂ ಫಾಯಿಲ್ ನಿಂದ ಸುತ್ತಿದರೆ ಬೇಗನೇ ಕಪ್ಪಾಗುವುದಿಲ್ಲ.

3.ಮಾಗಿದ ಹಣ್ಣನ್ನು ಫ್ರಿಜ್ ನಲ್ಲಿಡಿ (fridge). ಹಣ್ಣಾಗದ ಹಸಿರು ಬಣ್ಣದ ಹಣ್ಣನ್ನು ಫ್ರಿಝ್ ನಲ್ಲಿಡುವುದು ಸರಿಯಲ್ಲ. ಆದರೆ ಮಾಗಿದ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದರ ಜೀವಿತಾವಧಿ ಹೆಚ್ಚಾಗುತ್ತದೆ. 

ಇದನ್ನೂ ಓದಿ : ಕರೋನಾದಿಂದ ಚೇತರಿಸಿಕೊಂಡ ಮೇಲೆ ಏನು ತಿನ್ನಬೇಕು? ಯಾವ ಆಹಾರ ದೇಹಕ್ಕೆ ಒಳ್ಳೆಯದು?

4.ಬಾಳೆ ಹಣ್ಣನ್ನುಫ್ರೀಜ್ ಮಾಡಿ :ಹಣ್ಣಾದ ಬಾಳೆಯನ್ನು ಫ್ರೀಜ್ ಮಾಡಬಹುದು. ಫ್ರೀಜ್ ಮಾಡಿದಾಗ ಹೊರಗಿನ ಸಿಪ್ಪೆ ಕಪ್ಪಾಗುತ್ತದೆ. ಸಿಪ್ಪೆ ಕಪ್ಪಾಗಿದೆ ಎಂದು ಎಸೆಯಲು ಹೋಗಬೇಡಿ. ಒಳಗಡೆ ಹಣ್ಣು ಚೆನ್ನಾಗಿರುತ್ತದೆ. ತಿನ್ನಲು ಯೋಗ್ಯವಾಗಿರುತ್ತದೆ.  ಒಂದು ವೇಳೆ ಬೇಡ  ಅನ್ನಿಸಿದರೆ ಇನ್ನಿತರ ತಿಂಡಿ ತಿನಿಸುಗಳಲ್ಲಿ ಅದನ್ನು ಸೇರಿಸಿ ತಿನ್ನಬಹುದು.

5.ತುಂಬಾ ಹಣ್ಣಾದ ಬಾಳೆಹಣ್ಣು ಖರೀದಿಸಬೇಡಿ: ಅರೆ ಹಣ್ಣಾದ ಬಾಳೆಹಣ್ಣನ್ನು ಮಾರುಕಟ್ಟೆಯಿಂದ (Market) ಖರೀದಿಸಿ. ಹೀಗೆ ಮಾಡುವುದರಿಂದ ನಿಮ್ಮ  ಅಗತ್ಯಕ್ಕೆ ತಕ್ಕಂತೆ ಬಾಳೆ ಹಣ್ಣನ್ನು ಬಳಸಬಹುದು. ಅಂದರೆ ಬಳಕೆ ತಡವಾದರೂ ಬಾಳೆ ಹಣ್ಣು ಕಪ್ಪಾಗುವುದಿಲ್ಲ.

ಇದನ್ನೂ ಓದಿ : Curry Leaf Benefits: ಕರಿಬೇವಿನ ಎಲೆಗಳಲ್ಲಿದೆ ನಿಮ್ಮ ಆರೋಗ್ಯಕ್ಕೆ ನೀಡುವ ರೋಗ ನಿರೋಧಕ ಶಕ್ತಿ: ಬಳಸುವುದು ಹೇಗೆ?

6. ಬಾಳೆಹಣ್ಣು ಬಾಕ್ಸ್ (Banana Box) ಬಳಕೆ ಮಾಡಿ. ಸಾಮಾನ್ಯವಾಗಿ ಬಾಳೆ ಹಣ್ಣು ಒಂದಕ್ಕೊಂದು ಟಚ್ ಆದಾಗ ಟಚ್ ಆದ ಭಾಗ ಬೇಗ ಕಪ್ಪಾಗುತ್ತದೆ.  ಆಗ ಬಾಳೆ ಹಣ್ಣು ತಿನ್ನಲು ಹಿಂದೇಟು ಹಾಕುತ್ತೇವೆ. ಬಾಳೆ ಹಣ್ಣನ್ನು ಒಂದು ಬಾಕ್ಸ್ ನಲ್ಲಿ ಇಟ್ಟು ಬಳಸಿದರೆ, ಈ ಸಮಸ್ಯೆ ತಪ್ಪುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News