ನವದೆಹಲಿ: ಒಂದೋ ನಾವು ಉಕ್ರೇನ್ ಯುದ್ಧವನ್ನು ಗೆಲ್ಲುತ್ತೇವೆ ಅಥವಾ ಜಗತ್ತು ನಾಶವಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಲಹೆಗಾರ ಅಲೆಕ್ಸಾಂಡರ್ ಡುಗಿನ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಉಕ್ರೇನ್‌ನೊಂದಿಗಿನ ರಷ್ಯಾದ ಯುದ್ಧವು ಮಾಸ್ಕೋದ ವಿಜಯದ ಮೂಲಕ ಅಥವಾ ಇಡೀ ಜಗತ್ತಿನ ನಾಶದ ಮೂಲಕ ಕೊನೆಗೊಳ್ಳುತ್ತದೆ ಅಂತಾ ಹೇಳಿದ್ದಾರೆ. ಹಲವಾರು ತಿಂಗಳುಗಳಿಂದ ಉಕ್ರೇನ್ ವಿರುದ್ಧ ಹೋರಾಡುತ್ತಿರುವ ರಷ್ಯಾದ ಪಡೆ ಈಗಾಗಲೇ ಅನೇಕ ಪ್ರದೇಶಗಳಿಂದ ಹಿಂದೆ ಸರಿದಿವೆ.


COMMERCIAL BREAK
SCROLL TO CONTINUE READING

ಇತ್ತೀಚಿನ ರಷ್ಯಾದ ಮಿಲಿಟರಿ ಹಿನ್ನಡೆಗಳ ಹೊರತಾಗಿಯೂ ಹೊಸ ವರ್ಷದ ಆರಂಭದಲ್ಲಿ ರಷ್ಯಾ ವ್ಯಾಪಕ ಪ್ರದೇಶಗಳ ಆಕ್ರಮಣಕ್ಕೆ ಯೋಜಿಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಕಳೆದ ತಿಂಗಳು ರಷ್ಯಾ ಪಡೆಗಳು ಉಕ್ರೇನಿಯನ್ ನಗರವಾದ ಖೆರ್ಸನ್‌ನಿಂದ ಹಿಮ್ಮೆಟ್ಟಿದ ನಂತರ ಡುಗಿನ್ ಹೇಳಿಕೆ ನೀಡಿದ್ದಾರೆ. ಇದು ಮಾಸ್ಕೋಗೆ ದೊಡ್ಡ ಹಿನ್ನಡೆ ಎಂದು ಕರೆಯಲ್ಪಟ್ಟಿದೆ.


ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಪಾಕ್, ತವಾಂಗ್‌ನಲ್ಲಿ ಚೀನಾ… ಶತ್ರುಗಳನ್ನು ಸದೆಬಡಿದು ಜಗತ್ತಿಗೆ ತನ್ನ ಶಕ್ತಿ ತೋರಿಸಿದ ಭಾರತ!


ಇನ್ನೂ ಕೆಲವು ಪ್ರದೇಶಗಳಲ್ಲಿ ದಾಳಿ ಮುಂದುವರೆದಿದ್ದು, ಪ್ರಪಂಚದ ಇತರೆ ದೇಶಗಳು ಯುದ್ಧ ಕೊನೆಗೊಳಿಸುವಂತೆ ಸಲಹೆ ನೀಡುತ್ತಿವೆ. ಈ ಹಿನ್ನೆಲೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲೆಕ್ಸಾಂಡರ್ ಡುಗಿನ್, ‘ವಿಶ್ವದಲ್ಲಿ ಒಂದು ದೇಶ ತನ್ನ ಪ್ರಾಬಲ್ಯ ಸಾಧಿಸುವುದನ್ನು ತಪ್ಪಿಸಲು, ಎಲ್ಲಾ ದೇಶಗಳು ಬಲಿಷ್ಠವಾಗಿರಲು ಬೆಂಬಲಿಸುತ್ತಾ ಈ ಯುದ್ಧ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.


ಇದು ರಷ್ಯಾ, ಉಕ್ರೇನ್, ಯುರೋಪ್‌ಗೆ ಸಂಬಂಧಿಸಿದ ಯುದ್ಧವಲ್ಲ. ಪಶ್ಚಿಮ ಮತ್ತು ಇತರ ದೇಶಗಳಿಗೆ ಸಂಬಂಧಿಸಿದೆ. ಇದು ಪ್ರಾಬಲ್ಯದ ವಿರುದ್ಧ ಮಾನವೀಯ ಪ್ರತಿಕ್ರಿಯೆಯಾಗಿದೆ. ಎರಡು ಸಂದರ್ಭಗಳಲ್ಲಿ ಯುದ್ಧವನ್ನು ಕೊನೆಗೊಳಿಸುವ ಸಾಧ್ಯತೆಗಳಿವೆ. ಒಂದು ರಷ್ಯಾ ಗೆಲ್ಲಬೇಕು ಅಥವಾ ಜಗತ್ತು ಸರ್ವನಾಶವಾಗಬೇಕು. ಆದರೂ ಇದು ಸುಲಭವಲ್ಲ. ಯುದ್ಧದ ಕೊನೆಯಲ್ಲಿ ನಾವು ವಿಜಯವನ್ನು ಹೊರತುಪಡಿಸಿ ಬೇರೆ ಯಾವುದೇ ಪರಿಹಾರವನ್ನು ಒಪ್ಪಿಕೊಳ್ಳುವುದಿಲ್ಲ. ಒಂದೋ ನಾವು ಗೆಲ್ಲುತ್ತೇವೆ, ಇಲ್ಲವೇ ಜಗತ್ತು ನಾಶವಾಗುತ್ತದೆ’ ಎಂದು ಡುಗಿನ್ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ಮಹಾಮಾರಿ ಇನ್ನೂ ಮುಗಿದಿಲ್ಲ, 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ..! ಶಾಕಿಂಗ್ ರಿಪೋರ್ಟ್ ಇಲ್ಲಿದೆ 


ರಷ್ಯಾ ದೊಡ್ಡಮಟ್ಟದ ವಿನಾಶ ಮಾಡುತ್ತಿದ್ದರೂ ಉಕ್ರೇನ್ ಅನೇಕ ದೇಶಗಳ ಸಹಾಯದಿಂದ ಆ ದಾಳಿಗಳನ್ನು ದಿಟ್ಟತನದಿಂದ ಎದುರಿಸುತ್ತಿದೆ. ರಷ್ಯಾ ಮತ್ತು ಉಕ್ರೇನ್ ಪ್ರಸ್ತುತ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆಯಲ್ಲಿ ತೊಡಗಿಲ್ಲ. ಉಭಯ ದೇಶಗಳ ಯುದ್ಧದಲ್ಲಿ ಇದುವರೆಗೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಫೆಬ್ರವರಿ 24ರಂದು ರಷ್ಯಾ ತನ್ನ ನೆಲೆಯ ಮೇಲೆ ಆಕ್ರಮಣ ಮಾಡಿದ ನಂತರ ಉಕ್ರೇನ್ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.


ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ವಾರ ರಷ್ಯಾ ವಿಶ್ವ ಸಮರ IIರ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವನ್ನು ಕೊನೆಗೊಳಿಸುವ ಹೆಜ್ಜೆಯಾಗಿ ಕ್ರಿಸ್ಮಸ್ ವೇಳೆಗೆ ತನ್ನ ದೇಶದಿಂದ ಹಿಂದೆ ಸರಿಯಲು ಪ್ರಾರಂಭಿಸಬೇಕು ಎಂದು ರಷ್ಯಾಗೆ ಹೇಳಿದ್ದಾರೆ. ಆದರೆ ಸೈನ್ಯವನ್ನು ಹಿಂತೆಗೆದುಕೊಳ್ಳುವ ಝೆಲೆನ್ಸ್ಕಿಯ ಕರೆಯನ್ನು ರಷ್ಯಾ ತಳ್ಳಿಹಾಕಿದೆ. ಹೊಸ ಪ್ರಾದೇಶಿಕ ‘ವಾಸ್ತವಗಳನ್ನು’ ಒಪ್ಪಿಕೊಳ್ಳಲು ಕೈವ್ ಅನ್ನು ಕೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.