ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಚೈನೀಸ್ ಹೋಟೆಲ್‌ನಲ್ಲಿ ಸೋಮವಾರ (ಡಿ.12) ಮಧ್ಯಾಹ್ನ ಪ್ರಬಲ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಮುಂಬೈ ಮಾದರಿಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಚೀನಾದ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.
ವರದಿಗಳ ಪ್ರಕಾರ, ಕಾಬೂಲ್‌ನಲ್ಲಿರುವ ಚೀನಾದ ಉದ್ಯಮಿಗಳು ಈ ಹೋಟೆಲ್‍ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಗುಂಡಿನ ದಾಳಿಯ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ದಾಳಿಗೊಳಗಾದ ಹೋಟೆಲ್ ಕಟ್ಟಡದಿಂದ ಬೆಂಕಿ ಮತ್ತು ದಟ್ಟವಾದ ಹೊಗೆ ಹೊರಹೊಮ್ಮುತ್ತಿರುವುದನ್ನು ಈ ವಿಡಿಯೋಗಳಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Snake Video : ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ
ಶಸ್ತ್ರಸಜ್ಜಿತ ದಾಳಿಕೋರರು ಕಾಬೂಲ್‌ನ ಐಷಾರಾಮಿ ಶೇರ್ನೌ ಪ್ರದೇಶದಲ್ಲಿರುವ ಹೋಟೆಲ್ ಸ್ಟಾರ್-ಇ-ನಾವ್ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಕೋರರು ಇನ್ನೂ ಹೋಟೆಲ್ ಕಟ್ಟಡದೊಳಗೆ ಇದ್ದಾರೆಂದು ತಿಳಿದುಬಂದಿದೆ.
ಮುಂಬೈ ಮಾದರಿ ಭಯೋತ್ಪಾದಕ ದಾಳಿ!
An explosion has taken place in Kabul where the #Chinese were living .
pic.twitter.com/4IU6KAEE23— Abdulhaq Omeri (@AbdulhaqOmeri) December 12, 2022
ಚೀನಾದ ನಾಗರಿಕರೇ ಹೆಚ್ಚಾಗಿದ್ದ ಹೊಟೆಲ್ ಮೇಲೆ ಭಯೋತ್ಪಾದ ದಾಳಿ ನಡೆದಿದೆ. ಶಸ್ತ್ರಾಸ್ತ್ರ ಹಿಡಿದುಕೊಂಡಿದ್ದ ಉಗ್ರರು ಫೈರಿಂಗ್ ಮಾಡುತ್ತಾ ಹೊಟೆಲ್‍ನೊಳಗೆ ನುಗ್ಗಿದ್ದಾರೆ. ಬಳಿಕ ಗ್ರೇನೇಡ್ ಸ್ಫೋಟಿಸಿ ಭೀಕರ ದಾಳಿ ನಡೆಸಿದ್ದಾರೆ. ಹೊಟೆಲ್‌ನಲ್ಲಿರುವ ಹಲವರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದಾಳಿಯಲ್ಲಾಗಿರುವ ಸಾವು-ನೋವಿನ ಬಗ್ಗೆ ಮಾಹಿತಿ ಲಭಿಸಿಲ್ಲ. 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಂತೆ ಕಾಬೂಲ್‌ನಲ್ಲಿ ದಾಳಿ ನಡೆದಿದೆ. ತಾಲಿಬಾನ್ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದು, ಗುಂಡಿನ ಕಾಳಗ ನಡೆಯುತ್ತಿದೆ. ಕಾಬೂಲ್ ಸೇರಿದಂತೆ ಇತರ ಭಾಗದಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Viral Video : ಸಿಗರೇಟ್ ಸೇದುತ್ತ ಹೊಗೆ ಬಿಡುವ ಏಡಿಯ ವಿಡಿಯೋ ವೈರಲ್ri) December 12, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.