ನವದೆಹಲಿ: ಜಗತ್ತನ್ನೇ ಆತಂಕದ ಆಕಾಶಕ್ಕೆ ದೂಡಿರುವ ದುಹೃದಯಿ ‌ ಕರೋನಾವೈರಸ್ (Coronavirus)  ತಗುಲಿ ನಲುಗಿಹೋಗಿದ್ದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕಡೆಗೂ ಕಡುಕಟುಕ ಕೊರೋನಾದ ವಿರುದ್ಧ ಗೆದ್ದಿದ್ದಾರೆ‌. ಕೊರೋನಾ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದ ಬೋರಿಸ್ ಜಾನ್ಸನ್ (Boris Johnson) ಅಂತಿಮವಾಗಿ ಗುಣಮುಖರಾಗಿ ಇಂದಿನಿಂದ ತಮ್ಮ ಕರ್ತವ್ಯಕ್ಕೂ ಮರಳಿದ್ದಾರೆ.


COMMERCIAL BREAK
SCROLL TO CONTINUE READING

ನಿಷ್ಕರುಣಿ ಕೊರೋನಾ ವೈರಸ್ ಕೋವಿಡ್-19 (Covid-19)  ಸೃಷ್ಟಿಸಿದ ಸಂಚಲನಕ್ಕೆ ಹೆದರಿ ಜರ್ಮನಿಯ ಹಣಕಾಸು ಸಚಿವ ಥಾಮಸ್ ಸ್ಕೇಫರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಾಗತಿಕ ನಾಯಕರ ಆತ್ಮವಿಶ್ವಾಸ ಕುಂದಿತ್ತು. ನಂತರ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೂ ಕೊರೋನಾ ಸೋಂಕು ತಗುಲಿದೆ ಎಂದು ಗೊತ್ತಾದಾಗ ಜಂಘಾಬಲವೇ ಹುದುಗಿಹೋಗಿತ್ತು. ಈಗ ಬೋರಿಸ್ ಜಾನ್ಸನ್ ಗುಣಮುಖರಾಗಿರುವುದು ತುಸು ಸಮಾಧಾನ ತಂದಿದೆ.


ಕೊರೋನಾ ಪೀಡಿತರಾಗಿದ್ದ ಬೋರಿಸ್ ಜಾನ್ಸನ್ ಗುಣಮುಖರಾಗಿರುವುದಷ್ಟೇ ಅಲ್ಲದೆ ಇಂದಿನಿಂದ ಕರ್ತವ್ಯಕ್ಕೂ ಮರಳಿದ್ದಾರೆ.  ಕೆಲಸ ಆರಂಭಿಸಿರುವ ಬೋರಿಸ್ ಜಾನ್ಸನ್, ಕೊರೋನಾದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವುದು ಮೊದಲ ಆದ್ಯತೆ ಎಂದು ಹೇಳಿದ್ದಾರೆ.


ಬೇರೆ ದೇಶಗಳಂತೆ ಇಂಗ್ಲೆಂಡಿನಲ್ಲೂ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು ಸದ್ಯ ಇಂಗ್ಲೇಂಡಿನ ಕೊರೋನಾ ಪೀಡಿತರ ಸಂಖ್ಯೆ 152,840ಕ್ಕೆ ಏರಿಕೆಯಾಗಿದೆ. ಬ್ರಿಟೀಷರ ನಾಡಿನಲ್ಲಿ ಕಿಲ್ಲರ್ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 20,732ಕ್ಕೆ ಏರಿಕೆಯಾಗಿದೆ‌.