ಕ್ವಿಟೋ: ಈಕ್ವೆಡಾರ್‌ನ ಜೈಲೊಂದರಲ್ಲಿ ಗ್ಯಾಂಗ್‌ವಾರ್‌ (Ecuador Prison Riot) ನಡೆದ ಪರಿಣಾಮ ಸುಮಾರು 20 ಜನರು ಸಾವನ್ನಪ್ಪಿ, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಈಕ್ವೆಡಾರ್‌ನ ರಾಜಧಾನಿ ಕ್ವಿಟೋದಿಂದ ಸುಮಾರು 310 ಕಿಲೋಮೀಟರ್ ದೂರದಲ್ಲಿರುವ ತುರಿ ಎಂಬಲ್ಲಿರುವ ಜೈಲಿ(Jail)ನಲ್ಲಿ ಈ ಘರ್ಷಣೆ ಸಂಭವಿಸಿದೆ ಎಂದು ಅಲ್ಲಿನ ಗೃಹ ಸಚಿವ ಪ್ಯಾಟ್ರಿಸಿಯೊ ಕ್ಯಾರಿಲ್ಲೊ (Home Minister Patricio Carrillo) ತಿಳಿಸಿದ್ದಾರೆ.


ಇದನ್ನು ಓದಿ: wreath laying ceremony: ಹುತಾತ್ಮ ಯೋಧ ವಿಶಾಲ್ ಕುಮಾರ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ 


ಬಂದೂಕುಗಳು ಮತ್ತು ಚಾಕುಗಳಿಂದ ಪರಸ್ಪರ ದಾಳಿ ನಡೆದಿದ್ದು, ಸತ್ತವರಲ್ಲಿ ಐವರ ದೇಹವನ್ನು ವಿರೂಪಗೊಳಿಸಲಾಗಿದೆ. ಆರು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಕನಿಷ್ಠ ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ಯಾಟ್ರಿಸಿಯೊ ಕ್ಯಾರಿಲ್ಲೊ ಹೇಳಿದರು. 


ಇನ್ನು ಈ ಸಂಘರ್ಷವನ್ನು ನಿಯಂತ್ರಿಸಲು ಸುಮಾರು 1,000 ಪೊಲೀಸರು ಮತ್ತು ಮಿಲಿಟರಿ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ ಎಂದು ಕ್ಯಾರಿಲ್ಲೊ ಹೇಳಿದ್ದಾರೆ. 2020ರಿಂದ ಈವರೆಗೆ ಈಕ್ವೆಡಾರ್ ಜೈಲುಗಳಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 316 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಕಳೆದ ತಿಂಗಳು ವರದಿ ನೀಡಿತ್ತು.


ಇದನ್ನೂ ಓದಿ: Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.