wreath laying ceremony: ಹುತಾತ್ಮ ಯೋಧ ವಿಶಾಲ್ ಕುಮಾರ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ 

ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಹೆಡ್ ಕಾನ್‌ಸ್ಟೆಬಲ್ ವಿಶಾಲ್ ಕುಮಾರ್‌ ಪಾರ್ಥೀವ ಶರೀರಕ್ಕೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

Written by - Zee Kannada News Desk | Last Updated : Apr 5, 2022, 01:18 PM IST
  • CRPF ಯೋಧ ವಿಶಾಲ್ ಕುಮಾರ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ
  • ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವಿಶಾಲ್‌ ಕುಮಾರ್‌
  • ಶ್ರೀನಗರದ ಮೈಸುಮಾದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ
wreath laying ceremony: ಹುತಾತ್ಮ ಯೋಧ ವಿಶಾಲ್ ಕುಮಾರ್‌ ಪಾರ್ಥೀವ ಶರೀರಕ್ಕೆ ಅಂತಿಮ ನಮನ  title=
wreath laying ceremony

ಬುದ್ಗಾಮ್ (ಜಮ್ಮು- ಕಾಶ್ಮೀರ): ನಿನ್ನೆ ಶ್ರೀನಗರದ ಲಾಲ್ ಚೌಕ್‌ನ ಮೈಸುಮಾದಲ್ಲಿ ನಡೆದ ಭಯೋತ್ಪಾದಕ ದಾಳಿ (Srinagar's terror attack)ಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಹೆಡ್ ಕಾನ್‌ಸ್ಟೆಬಲ್ ವಿಶಾಲ್ ಕುಮಾರ್‌ (Vishal Kumar) ಪಾರ್ಥೀವ ಶರೀರಕ್ಕೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಅಂತಿಮ ನಮನ (wreath laying ceremony) ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಮಾತನಾಡಿ, "ಭಾರತೀಯ ಸೇನಾ ಪಡೆ ಇಂತಹ ಹುಚ್ಚುತನವನ್ನು ಎಂದಿಗೂ ಸಹಿಸುವುದಿಲ್ಲ" ಎಂದು ಕಟುವಾಗಿ ಹೇಳಿದರು.

ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದ ಅವರು, "ನಾವು ಈ (ಭಯೋತ್ಪಾದನಾ ದಾಳಿ) ಹುಚ್ಚಾಟವನ್ನು ಸಹಿಸುವುದಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನಿಗೆ ನಮನ ಸಲ್ಲಿಸುತ್ತೇವೆ. ಶಾಂತಿ ಕಾಪಾಡುವ ನಮ್ಮ ಕೆಲಸ ಮುಂದುವರಿಯುತ್ತದೆ" ಎಂದರು.

ಇದನ್ನೂ ಓದಿ: Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನು ಕಳೆದ ದಿನ ಜಮ್ಮು ಮತ್ತು ಕಾಶ್ಮೀರ(Jammu Kashmir)ದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಹ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, "ನಾಗರಿಕರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹುತಾತ್ಮ ಎಚ್‌ಸಿ ವಿಶಾಲ್ ಕುಮಾರ್ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲೆಂದು  ಪ್ರಾರ್ಥಿಸುತ್ತೇನೆ. ನಮ್ಮ ಭದ್ರತಾ ಪಡೆಗಳು ಈ ಹೇಯ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಿದೆ" ಎಂದರು. 

ಇದನ್ನು ಓದಿ: ಮತ್ತೆ ಕರೋನಾ ಹಾಹಾಕಾರ.! ಹೊಸ ವೆರಿಯೇಂಟ್ ಪತ್ತೆ, ಹೆತ್ತವರಿಂದ ಪ್ರತ್ಯೇಕಿಸಲಾಗುತ್ತಿದೆ ಮಕ್ಕಳನ್ನು

ಸೋಮವಾರ ಕಣಿವೆಯಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿ(Terrorist)ಯಲ್ಲಿ, ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಇದಕ್ಕೂ ಮೊದಲು, ಶ್ರೀನಗರದ ಲಾಲ್ ಚೌಕ್‌ನ ಮೈಸುಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದರು. ಇನ್ನು ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಹೆಡ್‌ಕಾನ್ಸ್‌ಟೇಬಲ್‌ ವಿಶಾಲ್‌ ಕುಮಾರ್‌ ಮೃತಪಟ್ಟಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News