ನವದೆಹಲಿ: ಮಾಸ್ಕೋ ಒಪ್ಪಂದದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್ ಅವರು, ಭಾರತ ಮತ್ತು ಚೀನಾ ಪರಸ್ಪರರ ಬೆಳವಣಿಗೆಯನ್ನು ಸಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದು ಎರಡೂ ದೇಶಗಳ ರಾಜತಾಂತ್ರಿಕತೆ ಯಲ್ಲಿ ಪ್ರಮುಖ ಅಂಶವಾಗಿದೆ. ವಿಶ್ವ ಆರ್ಥಿಕ ವೇದಿಕೆ ಅಭಿವೃದ್ಧಿ ಪರಿಣಾಮ ಶೃಂಗಸಭೆಯಲ್ಲಿ ಮಾತನಾಡಿದ ಜೈಶಂಕರ್, ಭಾರತ ಮತ್ತು ಚೀನಾಗಳು ಪರಸ್ಪರರ ಬೆಳವಣಿಗೆಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.


ಎರಡೂ ದೇಶಗಳು ಕೆಲವು ಸಾಮಾನ್ಯ ಆಸಕ್ತಿ ಮತ್ತು ಅನೇಕ ಆಸಕ್ತಿಗಳನ್ನು ಹೊಂದಿರುತ್ತವೆ, ಅದು ಹೆಚ್ಚು ವೈಯಕ್ತಿಕ ಅಥವಾ ರಾಷ್ಟ್ರೀಯ ಕೇಂದ್ರಿತವಾಗಿದೆ ಮತ್ತು ಎರಡೂ ಬೆಳವಣಿಗೆ ಹೊಂದುತ್ತಿರುವಾಗ ಪರಸ್ಪರ ಹೇಗೆ ಹೊಂದಿಕೊಳ್ಳಬೇಕು ಎನ್ನುವುದು ಎರಡು ದೇಶಗಳ ರಾಜತಾಂತ್ರಿಕತೆಯಲ್ಲಿ ದೊಡ್ಡ ಸಂಗತಿ ಎಂದು ಹೇಳಿದರು.


ಭಾರತ-ಚೀನಾ ಉದ್ವಿಗ್ನತೆಯ ನಡುವೆ 'ಸಂಬಂಧ ಮುಖ್ಯ' ಎಂದು ವಿದೇಶಾಂಗ ಸಚಿವರು ಹೇಳಿದ್ದೇಕೆ?


ಗಡಿ ಸಮಸ್ಯೆಗಳನ್ನು ಆ ಸಮಸ್ಯೆಯ ಒಂದು ಭಾಗ ಎಂದು ಕರೆದ ಅವರು, ನಾವು ಬಹಳ ಅಭೂತಪೂರ್ವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಮತ್ತು ದೀರ್ಘಾವಧಿಯಲ್ಲಿ ನೋಡಿದರೆ, ಇದು ದೊಡ್ಡ ವಿದ್ಯಮಾನದ ಒಂದು ಅಂಶವಾಗಿದೆ. ಇದಕ್ಕಾಗಿ ಎರಡೂ  ಭಾರತ ಮತ್ತು ಚೀನಾ ಕುಳಿತು ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ಒಂದೇ ದಿನದಲ್ಲಿ 3 ಬಾರಿ ಮುಖಾಮುಖಿಯಾಗಲಿರುವ ಭಾರತ-ಚೀನಾದ ವಿದೇಶಾಂಗ ಸಚಿವರು...!


ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ, ಭಾರತೀಯ ಮತ್ತು ಚೀನಾದ ವಿದೇಶಾಂಗ ಮಂತ್ರಿಗಳು ಮೊದಲ ಬಾರಿಗೆ ಸಭೆ ನಡೆಸಿದರು. ಎರಡು ಗಂಟೆಗಳ ಸುದೀರ್ಘ ಭೇಟಿಯ ನಂತರ, ಇಬ್ಬರೂ ಐದು ಅಂಶಗಳ ಜಂಟಿ ಹೇಳಿಕೆಯೊಂದಿಗೆ ಎಲ್ಎಸಿ ವಿಚಾರದಲ್ಲಿ ಮಾತುಕತೆ, ನಿಷ್ಕ್ರಿಯಗೊಳಿಸುವಿಕೆ ಮತ್ತು ಎರಡು ದೇಶಗಳ ಸೈನ್ಯದ ನಡುವಿನ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ಸರಾಗಗೊಳಿಸುವಂತೆ ಕರೆ ನೀಡಿದರು.


ಭೇಟಿಯ ನಂತರ, ಭಾರತ ಮತ್ತು ಚೀನಾದ ಕಾರ್ಪ್ ಕಮಾಂಡರ್‌ಗಳು ಈ ವಾರದ ಆರಂಭದಲ್ಲಿ ಭೇಟಿಯಾದರು ಮತ್ತು ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಒಪ್ಪಿಕೊಂಡರು. ಇದು ಆರನೇ ಸಭೆಯಾಗಿದ್ದು, ಮುಂದಿನ ಸುತ್ತಿನ ಮಾತುಕತೆಗೆ ಎರಡೂ ಕಡೆಯವರು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ.