ನವದೆಹಲಿ: ಹುಡುಗಿಯರು ತೂಕವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸುತ್ತಿರುವುದನ್ನು ನೀವು ಈಗ ಕೇಳಿರಬೇಕು. ಹೆಚ್ಚಿನ ಹುಡುಗಿಯರು ನೀಳಕಾಯ ಪಡೆಯಲು ಏನೆಲ್ಲಾ ಕಸರತ್ತು ಮಾಡುತ್ತಾರೆ, ಆದರೆ ಪ್ರಪಂಚದಲ್ಲಿ ಸ್ಥೂಲಕಾಯದ ಯುವತಿಯರಿಗೆ ಬೇಡಿಕೆಯಿರುವ ದೇಶವೊಂದಿದೆ. ಇಲ್ಲಿನ ಹುಡುಗಿಯರು ಸ್ಥೂಲಕಾಯ ಪಡೆಯಲು ಸಾಕಷ್ಟು  ಶ್ರಮಿಸುತ್ತಾರೆ. ಅಷ್ಟೇ ಅಲ್ಲ, ಅಧಿಕ ತೂಕವಿರುವ ಯುವತಿಯರನ್ನು ಈ ದೇಶದಲ್ಲಿ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!


ದಪ್ಪಗಾಗಿರುವ ಯುವತಿಯರು ಭಾಗ್ಯಶಾಲಿಗಳು
ಈ ದೇಶದಲ್ಲಿ, ಹುಡುಗರು ಮದುವೆಗಾಗಿ ಸ್ಲಿಮ್ ಗಿಂತ ಹೆಚ್ಚಾಗಿ ದಪ್ಪಗಾಗಿರುವ  ಯುವತಿಯರನ್ನು ಹುಡುಕುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ದೇಶ ಬೇರೆ ಯಾರೂ ಅಲ್ಲ ಮಾರಿಷಸ್. ಮಾರಿಷಸ್‌ನ ಜನರು ಸ್ಥೂಲಕಾಯದ ಯುವತಿಯರನ್ನು ಮದುವೆಯಾಗಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಸ್ಥೂಲಕಾಯದ ಯುವತಿಯರನ್ನು ಇಲ್ಲಿ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿನ ಹುಡುಗಿಯರು ತೂಕ ಇಳಿಸಿಕೊಳ್ಳಲು ಬಯಸುವುದಿಲ್ಲ ಆದರೆ ಹೆಚ್ಚಿಸಲು ಬಯಸುತ್ತಾರೆ.


ಇದನ್ನು ಓದಿ- OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?


ಯುವತಿಯರಿಗೆ ತೂಕ ಹೆಚ್ಚಿಸಲು ಸಲಹೆ ನೀಡಲಾಗುತ್ತದೆ
ಮಾರಿಷಸ್‌ನ ಹುಡುಗಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಮಾರಿಷಸ್‌ನಲ್ಲಿ, ಮದುವೆಯ ಸಮಯದಲ್ಲಿ ಹುಡುಗಿ ಅಧಿಕ ತೂಕವಿದ್ದಾಗ, ಅವಳ ಅತ್ತೆ-ಮಾವನ ಮನೆಯವರು ತುಂಬಾ ಸಂತೋಷವಾಗುತ್ತಾರೆ. ವಧು ಅಧಿಕ ತೂಕವಿರುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಾರಿಷಸ್‌ನಲ್ಲಿ, ತೆಳ್ಳಗಿನ ಹುಡುಗಿಯರು ಮದುವೆಗೆ ಮುಂಚಿತವಾಗಿ ಸಾಕಷ್ಟು ಆಹಾರ ಸೇವಿಸಲು ಸೂಚಿಸಲಾಗುತ್ತದೆ. ಇದರಿಂದ ಅವರ ತೂಕ ಹೆಚ್ಚಾಗುತ್ತದೆ ಹಾಗೂ ಮದುವೆಯ ವೇಳೆ ಅವರಿಗೆ ಒಳ್ಳೆಯ ಸಂಬಂಧ ಆರಿಸಿ ಬರುತ್ತವೆ.


ಇದನ್ನು ಓದಿ- Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!


ಯುವತಿಯರ ತೂಕ ಹೆಚ್ಚಾಗಿರುವ ಸಂಪ್ರದಾಯ
ಮಾರಿಷಸ್‌ನಲ್ಲಿರುವ ಯುವಕರಿಗೂ ಕೂಡ ಸ್ಥೂಲಕಾಯದ ಯುವತಿಯನ್ನು  ಇಷ್ಟಪಡುವಂತೆ ಸೂಚಿಸಲಾಗುತ್ತದೆ. ಇತರ ವಿವಾಹ ಪದ್ಧತಿಗಳು ಮತ್ತು ಸಂಪ್ರದಾಯಗಳ ಜೊತೆಗೆ, ಸ್ಥೂಲಕಾಯದ ಯುವತಿಯರು  ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾರೆ ಎಂಬುದು ಮಾರಿಷಸ್‌ ಜನರ ವಿಚಿತ್ರ (Bizarre) ನಂಬಿಕೆ. ಇಲ್ಲಿನ ಜನರು ತಮ್ಮ ಹೆಣ್ಣುಮಕ್ಕಳನ್ನು ಡೈಟಿಂಗ್ ಮಾಡುವುದರಿಂದ ಅಥವಾ ತೂಕ ಇಳಿಕೆ ಮಾಡುವುದರಿಂದ ತಡೆಯುತ್ತಾರೆ.


ಇದನ್ನು ಓದಿ- OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?


ನೀಳಕಾಯದ ಯುವತಿಯರಿಗೆ ಇಲ್ಲಿ ಡಿಮಾಂಡ್ ಇಲ್ಲ
ಭಾರತ ಅಥವಾ ವಿಶ್ವದ ಇತರ ದೇಶಗಳಲ್ಲಿ ತೆಳ್ಳಗಿನ ಹುಡುಗಿಯರಿಗೆ ಬೇಡಿಕೆ ಇದೆ. ಸ್ಥೂಲಕಾಯವನ್ನು ಇಲ್ಲಿ ಅಲ್ಲಗಳೆಯಲಾಗುತ್ತದೆ. ಇಲ್ಲಿರುವ ಯುವತಿಯರ ತೂಕ ಹೆಚ್ಚಾಗಿದ್ದರೆ ಅವರ ಮದುವೆ ನೆರವೇರುವುದಿಲ್ಲ. ಆದರೆ ಮಾರಿಷಸ್‌ನಲ್ಲಿ, ತೂಕ ಇಳಿಸಿಕೊಂಡ ಹುಡುಗಿ, ಅವಳ ಮದುವೆಯಲ್ಲೂ ತೊಂದರೆ ಉಂಟು ಮಾಡುತ್ತದೆ. ಆದ್ದರಿಂದ, ಅವರಿಗೆ ಸಾಕಷ್ಟು ಆಹಾರ ಸೇವಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗುತ್ತದೆ ಮತ್ತು ಜನರು ತಮ್ಮ ಪುತ್ರರಿಗೆ ಮದುವೆಯ ನಂತರ, ತಮ್ಮ ಕುಟುಂಬಕ್ಕೆ ಸಂತೋಷ ಮತ್ತು ಅದೃಷ್ಟವನ್ನು ತರಲು ಅವರು ತಮ್ಮ ಹೆಂಡತಿಗೆ ಸಾಕಷ್ಟು ಆಹಾರವನ್ನು ನೀಡಬೇಕು ಎಂದು ಹೇಳುತ್ತಾರೆ. ಕುಟುಂಬದ ಸೊಸೆ-ಹೆಣ್ಣುಮಕ್ಕಳ ತೂಕ ಹೆಚ್ಚಾದಷ್ಟೂ ಕುಟುಂಬದಲ್ಲಿ ಅದೃಷ್ಟ ಹೆಚ್ಚು ಎನ್ನಲಾಗುತ್ತದೆ.