ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!

ನಂಬಿದ್ರೆ ನಂಬಿ, ಬಿಟ್ರೆ ಬಿಡಿ! ಈ ಮಹಿಳೆ ಸತ್ತ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಂತ ಹೇಳ್ತಿದೆ ಸಂಶೋಧನಾ ವರದಿ!

Last Updated : Mar 28, 2018, 06:27 PM IST
ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!

ನವದೆಹಲಿ: ಬದುಕಿದ್ದಾಗಲೇ ಹೆರಿಗೆ ಸಂದರ್ಭದಲ್ಲಿ ಹಲವು ಸಮಸ್ಯೆಗಳಿಂದಾಗಿ ಗರ್ಭದಲ್ಲಿಯೇ ಮಗು ಸಾಯುವ ಅದೆಷ್ಟೋ ಘಟನೆಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಸತ್ತ ಮಹಿಳೆ ಮಗುವಿಗೆ ಜನ್ಮ ನೀಡಿದ ಬಗ್ಗೆ ಎಂದಾದರೂ ಕೇಳಿದ್ದೀರಾ? ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!

ಪುರಾತತ್ವ ಶಾಸ್ತ್ರಜ್ಞರ ತಂಡವೊಂಡು ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಭೂಮಿಯಲ್ಲಿ ದೊರೆತ ಮಹಿಳೆಯ ಅಸ್ತಿಪಂಜರದಲ್ಲಿ ಆಕೆಯ ಕಾಲುಗಳ ನಡುವೆ ಮಗುವಿನ ತಲೆ ಬುರುಡೆ ಮತ್ತು ಮೂಳೆಗಳ ಅವಶೇಷಗಳು ದೊರೆತಿದ್ದು, ಇದನ್ನು ಇಂದಿಗೂ ಸಂರಕ್ಷಿಸಲಾಗಿದೆ. ಈ ಅವಶೇಷಗಳು 2010 ರಲ್ಲಿ ಇಟಲಿಯ ಇಮಾಲಾದಲ್ಲಿ ದೊರೆತಿದ್ದವು ಎನ್ನಲಾಗಿದೆ. 

Daily Mail ಪತ್ರಿಕೆ ವರದಿ ಪ್ರಕಾರ, ಈ ಅಸ್ತಿಪಂಜರವನ್ನು ನೋಡಿದ ಫೆರಾರಾ ಮತ್ತು ಬೊಲೊಗ್ನಾ ವಿಶ್ವವಿದ್ಯಾನಿಲಯಗಳ ಸಂಶೋಧಕರು ಇದೊಂದು ಅಸಾಮಾನ್ಯ coffin birth(ಶವಪೆಟ್ಟಿಗೆಯಲ್ಲಿ ಜನನ) ಎಂದಿದ್ದಾರೆ. ಮಗುವಿನ ಕಾಲಿನ ಎಲುಬುಗಳು ಅಷ್ಟಾಗಿ ಇಲ್ಲದಿದ್ದರೂ, ಭ್ರೂಣದ ತಲೆ ಮತ್ತು ಮುಂದಿನ ಭಾಗ ಭಾಗಶಃ ದೊರೆತಿದೆ ಎಂದಿದ್ದಾರೆ.

ಸುಮಾರು 25 ರಿಂದ 35 ವರ್ಷದ 38 ವಾರಗಳ ಗರ್ಭಿಣಿ ಮಹಿಳೆಯನ್ನು ಸಮಾಧಿ ಮಾಡಲಾಗಿದ್ದು, ಇದು ಕ್ರಿ.ಶ 7 ಅಥವಾ 8ನೇ ಶತಮಾನದಷ್ಟು ಹಳೆಯದ್ದಾಗಿದೆ. ಸತ್ತ ಗರ್ಭಿಣಿ ಮಹಿಳೆಯ ಭ್ರೂಣವು ಸಮಾಧಿಯೊಳಗೆ ಹೊರಹಾಕಲ್ಪಟ್ಟಾಗ ಕಾಫಿನ್ ಜನನವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

More Stories

Trending News