ಲಾಹೋರ್: ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅರ್ಥಿಕ ನಷ್ಟವನ್ನು ತಡೆಗಟ್ಟುವ ಬಗ್ಗೆ ನೂತನ ಸರ್ಕಾರ ಗಮನ ಹರಿಸುತ್ತಿದೆ. ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸರ್ಕಾರದ ಹೊಸ ರೈಲ್ವೆ ಸಚಿವರನ್ನೂ ಕೂಡ ಉದ್ಯೋಗಿಗಳು ಅಪಹಾಸ್ಯ ಮಾಡುತ್ತಿದ್ದಾರೆ. ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು 730 ದಿನಗಳ ಸಂಪೂರ್ಣ ವೇತನ ರಜೆಯನ್ನು ಕೇಳಿದ್ದಾರೆ. ವೃತ್ತಿಪರವಲ್ಲದ ಮತ್ತು ಅಸಭ್ಯ ವರ್ತನೆಯ ಹೊಸ ರೈಲ್ವೆ ಸಚಿವ ರಶೀದ್ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನನ್ನ ರಜೆ ಅನುಮೋದಿಸಬೇಕು ಎಂದು ಗ್ರೇಡ್ -20 ಅಧಿಕಾರಿ ಹನೀಫ್ ಗುಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹನೀಫ್ ಗುಲ್ ಅವರ ಅರ್ಜಿ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಾರ್ಪಟ್ಟಿದೆ. ಮೂಲಗಳು ಪ್ರಕಾರ, ರಶೀದ್ ಇತ್ತೀಚೆಗೆ ರೈಲ್ವೆ ಅಧಿಕಾರಿಗಳ ಸಭೆ ನಡೆಸಿದರು. ಅವರು ಇಲಾಖೆಯ ಕೆಲಸಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.



ಸರಕಾರಿ ಅಧಿಕಾರಿಗಳಿಗೆ ಪಾಕ್ ಪ್ರಥಮ ದರ್ಜೆಯ ವಿಮಾನವನ್ನು ನಿಷೇಧಿಸಿತ್ತು:
ಪಾಕಿಸ್ತಾನದ ಹೊಸ ಸರಕಾರವು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯೂ ಸೇರಿದಂತೆ ಸರ್ಕಾರಿ ಅಧಿಕಾರಿಗಳು ತಮ್ಮ ಮನಬಂದಂತೆ ಸರ್ಕಾರದ ಹಣವನ್ನು ಖರ್ಚು ಮಾಡುವುದನ್ನು ನಿಷೇಧಿಸಿದೆ. ಅಲ್ಲದೆ ಪ್ರಥಮ ವರ್ಗದಲ್ಲಿ ವಾಯುಯಾನ ಮಾಡುವುದರ ಮೇಲೂ ನಿರ್ಬಂಧ ಹೇರಿದೆ. ಇದು ಸರ್ಕಾರದ ಖರ್ಚಿಗೆ ಕಡಿವಾಣ ಹಾಕಲು ತೆಗೆದುಕೊಂಡಿರುವ ನಿರ್ಧಾರವಾಗಿದೆ. ಸಚಿವ ಫವಾದ್ ಚೌಧರಿಯ ನೀಡಿದ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


"ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯ ನ್ಯಾಯಾಧೀಶರು, ಸೆನೆಟ್ ಅಧ್ಯಕ್ಷ, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮತ್ತು ಮುಖ್ಯಮಂತ್ರಿ ಕ್ಲಬ್/ಬಿಸಿನೆಸ್ ಶ್ರೇಣಿಯಲ್ಲಿ ಪ್ರಯಾಣಿಸಬಹುದು ಎಂದು ನಿರ್ಧರಿಸಲಾಗಿದೆ. ಸೈನ್ಯದ ಮುಖ್ಯಸ್ಥರಿಗೆ ಬಿಸಿನೆಸ್ ಶ್ರೇಣಿಯಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಅವರು ಎಕನಾಮಿಕ್ ಶ್ರೇಣಿಯಲ್ಲಿ ಪ್ರಯಾಣಿಸುತ್ತಾರೆ ಎಂದು ಚೌಧರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.


ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಇತರ ಅಧಿಕಾರಿಗಳ ವಿವೇಚನಾ ಹಂಚಿಕೆ ನಿಧಿಯ ಮೇಲೂ ನಿಷೇಧವನ್ನು ಹೇರಲಾಗಿದೆ. ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ವರ್ಷಕ್ಕೆ 51 ಬಿಲಿಯನ್ ರೂಪಾಯಿಗಳಿಗೆ ಹಣವನ್ನು ಬಳಸುತ್ತಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.


ಪ್ರಧಾನ ಮಂತ್ರಿಯ ದೇಶೀ ಅಥವಾ ವಿದೇಶೀ ಪ್ರಯಾಣಕ್ಕಾಗಿ ವಿಶೇಷ ವಿಮಾನಗಳನ್ನು ಅಥವಾ ಬಿಸಿನೆಸ್ ಶ್ರೇಣಿಯ ವಿಮಾನ ಪ್ರಯಾಣವನ್ನು ಸಹ ನಿಷೇಧಿಸಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಖಾನ್ ಐಶಾರಾಮಿ ಬಂಗಲೆಯನ್ನು ಬಳಸಬಾರದು ಎಂದು ನಿರ್ಧರಿಸಿ, ಬದಲಿಗೆ ಬಂಗಲೆಯ ಒಂದು ಭಾಗವನ್ನು ಮಾತ್ರ ಬಳಸಲು ನಿರ್ಧರಿಸಿದ್ದಾರೆ.ಖಾನ್ ಕೇವಲ ಎರಡು ವಾಹನ ಮತ್ತು ಇಬ್ಬರು ಸೇವಕರನ್ನು ಮಾತ್ರ ನಿಯೋಜಿಸಲು ನಿರ್ಧರಿಸಿದ್ದಾರೆ.