ನವದೆಹಲಿ: ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಫಿಡೆಲ್ ಏಂಜೆಲ್ ಕ್ಯಾಸ್ಟ್ರೋ ಡಯಾಜ್ ರವರು ಮಾನಸಿಕ  ಖಿನ್ನತೆಯ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ಯೂಬಾ ಮಾಧ್ಯಮಗಳು ವರದಿ ಮಾಡಿವೆ.


COMMERCIAL BREAK
SCROLL TO CONTINUE READING

ಹಲವಾರು ತಿಂಗಳುಗಳಿಂದ ವೈಧ್ಯರಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಡಯಾಜ್  ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ಯುಬೇಡೆಬೇಟ್ ವೆಬ್ಸೈಟ್ ವರದಿ ಮಾಡಿದೆ.ಅವರಿಗೆ 68 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗಿದೆ.


ಅವರು ಆರಂಭದಲ್ಲಿ ಮಾನಸಿಕ ಅಸ್ವಸ್ಥತೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೂ ಕೂಡಾ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.