First Taliban Fatwa: Afghanistanನಲ್ಲಿ ಮೊದಲ ತಾಲಿಬಾನಿ ಫತ್ವಾ ಜಾರಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಓದುವಂತಿಲ್ಲ!
First Taliban Fatwa - ಅಫ್ಘಾನಿಸ್ಥಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಅಧಿಕಾರಿಗಳು ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದೇಶ ಜಾರಿಗೊಳಿಸಿ, ಇನ್ಮುಂದೆ ಹುಡುಗಿಯರನ್ನು ಹುಡುಗರ ಜೊತೆಗೆ ಒಂದೇ ತರಗತಿಯಲ್ಲಿ ಓದಲು ಅವಕಾಶ ನೀಡಲಾಗುವುದಿಲ್ಲ ಎಂದಿದೆ ಎನ್ನಲಾಗಿದೆ.
ಕಾಬೂಲ್: First Taliban Fatwa - ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೊದಲ ಫತ್ವಾ ಜಾರಿಯಾಗಿದೆ. ಖಾಮಾ ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ್ ಆಫ್ಘಾನಿಸ್ಥಾನದ (Afghanistan) ಹೆರಾತ್ ಪ್ರಾಂತ್ಯದಲ್ಲಿ (Herat Region) ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದೇಶ ಹೊರಡಿಸಿ, ಇನ್ಮುಂದೆ ವಿದ್ಯಾರ್ಥಿನಿಯರನ್ನು ವಿದ್ಯಾರ್ಥಿಗಳ ಜೊತೆಗೆ (Boys And Girls Co-Education) ಒಟ್ಟಿಗೆ ಒಂದೇ ತರಗತಿಯಲ್ಲಿ ಓದಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ವಿಶ್ವವಿದ್ಯಾನಿಲಯ ಉಪನ್ಯಾಸಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ (Taliban) ಅಧಿಕಾರಿಗಳ ನಡುವಿನ ಮೂರು ಗಂಟೆಗಳ ಸಭೆಯಲ್ಲಿ, ಸಹ-ಶಿಕ್ಷಣವನ್ನು ಮುಂದುವರಿಸುವುದು ಯಾವುದೇ ವಿಕಲ್ಪ ಹಾಗೂ ಔಚಿತ್ಯವಿಲ್ಲ ಮತ್ತು ತಕ್ಷಣ ಅದನ್ನು ರದ್ದುಗೊಳಿಸಬೇಕು ಎಂದು ಹೇಳಲಾಗಿದೆ. ಅಫ್ಘಾನಿಸ್ತಾನದಲ್ಲಿ ಸಹ-ಶಿಕ್ಷಣ ಮತ್ತು ಪ್ರತ್ಯೇಕ ಶಿಕ್ಷಣದ ಮಿಶ್ರ ವ್ಯವಸ್ಥೆ ಚಾಲ್ತಿಯಲ್ಲಿದೆ. ಶಾಲೆಗಳು ಪ್ರತ್ಯೇಕ ತರಗತಿಗಳನ್ನು ನಡೆಸುತ್ತವೆ, ಆದರೆ ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಸಹ-ಶಿಕ್ಷಣ ಪದ್ಧತಿಯನ್ನು ಅಳವಡಿಸಲಾಗಿದೆ.
ಇದನ್ನೂ ಓದಿ-ಭಾರತೀಯ ಪ್ರಭಾವವನ್ನು ಎದುರಿಸಲು ಅಫ್ಘಾನಿಸ್ತಾನದಲ್ಲಿ ಪಾಕ್ ಆಸಕ್ತಿ -ಯುಎಸ್ ವರದಿ
ಹೆರಾತ್ ಪ್ರಾಂತ್ಯದ ಉಪನ್ಯಾಸಕರು ಸರ್ಕಾರಿ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಪ್ರತ್ಯೇಕವಾಗಿ ತರಗತಿಗಳನ್ನು ನಿರ್ವಹಿಸಬಹುದೆಂದು ಈ ವೇಳೆ ವಾದಿಸಿದ್ದಾರೆ, ಆದರೆ ಸೀಮಿತ ಸಂಖ್ಯೆಯ ವಿದ್ಯಾರ್ಥಿನಿಯರಿಂದಾಗಿ ಖಾಸಗಿ ಸಂಸ್ಥೆಗಳು ಪ್ರತ್ಯೇಕ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್, ಹೆರಾತ್‌ನಲ್ಲಿ ನಡೆದ ಸಭೆಯಲ್ಲಿ ತಾಲಿಬಾನ್‌ಗಳನ್ನು ಪ್ರತಿನಿಧಿಸುತ್ತಿದ್ದರು, ಈ ವ್ಯವಸ್ಥೆಯು ಸಮಾಜದಲ್ಲಿನ ಎಲ್ಲಾ ಕೆಟ್ಟತನಕ್ಕೆ ಮೂಲವಾಗಿರುವುದರಿಂದ ಸಹ-ಶಿಕ್ಷಣವನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ- Afghanistan crisis: ಕಾಬೂಲ್‌ನಿಂದ ವಾಯುಪಡೆ ವಿಮಾನದಲ್ಲಿ 85ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ
ಈ ವ್ಯವಸ್ಥೆಗೆ ಪರ್ಯಾಯವಾಗಿ ಸಲಹೆ ನೀಡಿರುವ ಫರೀದ್, ಮಹಿಳಾ ಉಪನ್ಯಾಸಕರು ಅಥವಾ ಸದ್ಗುಣ ಹೊಂದಿರುವ ಹಿರಿಯ ಪುರುಷರು ವಿದ್ಯಾರ್ಥಿನಿಯರಿಗೆ ಕಲಿಸಲು ಅವಕಾಶವಿದೆ ಮತ್ತು ಆದರೆ, ಸಹ-ಶಿಕ್ಷಣದ ವಿಕಲ್ಪ ಅಥವಾ ಔಚಿತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೆರಾತ್‌ನ ಉಪನ್ಯಾಸಕರು, ಖಾಸಗಿ ಸಂಸ್ಥೆಗಳು ಪ್ರತ್ಯೇಕ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ, ಸಾವಿರಾರು ಹುಡುಗಿಯರು ಉನ್ನತ ಶಿಕ್ಷಣದಿಂದ ವಂಚಿತರಾಗಬಹುದು ಎಂದು ಅವರು ಹೇಳಿದ್ದಾರೆ. ಈ ಪ್ರಾಂತ್ಯವು ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಲ್ಲಿ ಸುಮಾರು 40,000 ವಿದ್ಯಾರ್ಥಿಗಳು ಮತ್ತು 2,000 ಉಪನ್ಯಾಸಕರನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-"ಇತಿಹಾಸದಲ್ಲಿಯೇ ಕಾಬೂಲ್ ಸ್ಥಳಾಂತರ ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್‌ಗಳಲ್ಲಿ ಒಂದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ