Kabul Kidnapping Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ 150 ಭಾರತೀಯರ ಅಪಹರಣದ ಸುದ್ದಿ ಸುಳ್ಳು: ಮೂಲಗಳು

ಕಾಬೂಲ್ : Kabul Indians Kidnapping Update - ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್ ನಲ್ಲಿ (Kabul), ತಾಲಿಬಾನ್ ಭಯೋತ್ಪಾದಕರು (Taliban Militants)ಇಂದು (ಶನಿವಾರ) ಭಾರತೀಯ ಸಂಯೋಜಕ ಜೊಹಿಬ್ (Zohib) ಅವರನ್ನು ಅಪಹರಿಸಿದ್ದರು ಎನ್ನಲಾಗಿತ್ತು. 

Written by - Nitin Tabib | Last Updated : Aug 21, 2021, 03:27 PM IST
  • ಕಾಬೂಲ್ ಮೂಲೆ ಮೂಲೆಯಲ್ಲಿ ಉಗ್ರರ ನಿಯೋಜನೆ.
  • ಉಗ್ರರ ಕಪಿಮುಷ್ಥಿಯಲ್ಲಿ ಭಾರತೀಯರು.
  • ಆದರೆ, ಭಾರತ ಸರ್ಕಾರದ ಮೂಲಗಳು ಅಪಹರಣದ ಸುದ್ದಿಯನ್ನು ಖಂಡಿಸಿದ್ದಾರೆ.
Kabul Kidnapping Update: ಕಾಬೂಲ್ ವಿಮಾನ ನಿಲ್ದಾಣದಲ್ಲಿ 150 ಭಾರತೀಯರ ಅಪಹರಣದ ಸುದ್ದಿ ಸುಳ್ಳು: ಮೂಲಗಳು  title=
Kabul Kidnapping Update (File Photo)

ಕಾಬೂಲ್ : Kabul Indians Kidnapping Update - ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್ ನಲ್ಲಿ (Kabul), ತಾಲಿಬಾನ್ ಭಯೋತ್ಪಾದಕರು (Taliban Militants)ಇಂದು (ಶನಿವಾರ) ಭಾರತೀಯ ಸಂಯೋಜಕ ಜೊಹಿಬ್ (Zohib) ಅವರನ್ನು ಅಪಹರಿಸಿದ್ದರು ಎನ್ನಲಾಗಿತ್ತು. ಅವರು ಕಾಬೂಲ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ನಿರತರಾಗಿದ್ದರು. ಆತನ ಫೋನ್ ಅನ್ನು ಭಯೋತ್ಪಾದಕರು ಕಸಿದುಕೊಂಡಿದ್ದರು. ಇದಲ್ಲದೇ 150 ಭಾರತೀಯರು ಕೂಡ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ, ಮೂಲಗಳಿಂದ ಬಂದ ಮಾಹಿತ್ಯ ಪ್ರಕಾರ  ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಈ ಎಲ್ಲಾ ಭಾರತೀಯರನ್ನು ಮತ್ತೆ ವಿಮಾನ ನಿಲ್ದಾಣಕ್ಕೆ ಕರೆತರಲಾಗುವುದು ಎನ್ನಲಾಗಿದೆ. ಭಾರತ ಸರ್ಕಾರ ನಿರಂತರ ಅವರ  ಸಂಪರ್ಕದಲ್ಲಿದ್ದು, ಭಯೋತ್ಪಾದಕರು (Terrorists) ಭಾರತೀಯ ಸಂಯೋಜಕರನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ-ಅಗಸ್ಟ್ 31 ರ ವರೆಗೂ ತಾಲಿಬಾನ್ ನೂತನ ಸರ್ಕಾರ ರಚಿಸುವುದಿಲ್ಲ...

ಭಾರತೀಯ ಸಂಯೋಜಕನ ಮೇಲೆ ಉಗ್ರರ ಹಲ್ಲೆ
ಈ ಕುರಿತು ಹೇಳಿಕೆ ನೀಡಿದ್ದ ಪ್ರತ್ಯಕ್ಷದರ್ಶಿಯೊಬ್ಬರು, ತಾಲಿಬಾನ್ ಉಗ್ರರು ಈ ವೇಳೆ ಭಾರತೀಯ ಸಂಯೋಜಕನ ಬಳಿ ಬಂದಿದ್ದಾರೆ ಮತ್ತು ಅವರ ಗುರುತು ಕೇಳಿದ್ದಾರೆ. ಬಳಿಕ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಆತನ ಮೊಬೈಲ್ ಕಸಿದುಕೊಂಡು ಸ್ವಿಚ್ ಆಫ್ ಮಾಡಿದ್ದಾರೆ.

ಭಾರತೀಯ ವಾಯು ಸೇನೆಯ C-17 ಗ್ಲೋಬ್ ಮಾಸ್ಟರ್ ಕಳೆದ ರಾತ್ರಿಯಿಂದಲೇ ಕಾಬುಲ್ ಏರ್ಪೋರ್ಟ್ (Kabul Airport) ಮೇಲೆ ನಿಯೋಜನೆಗೊಂಡಿದೆ. ಆದರೆ, ಭಾರಿ ಜನಸಂದಣಿಯ ಕಾರಣ ಭಾರತೀಯರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ವಿಫಲರಾಗಿದ್ದಾರೆ. 

ಹಕ್ಕಾನಿ ನೆಟ್ವರ್ಕ್ ಗೆ ಭದ್ರತೆಯ ಜವಾಬ್ದಾರಿ
ಕಾಬೂಲ್ ಸುರಕ್ಷತೆಗಾಗಿ ತಾಲಿಬಾನ್ ಹಕ್ಕಾನಿ ನೆಟ್ವರ್ಕ್ ಗೆ ಜವಾಬ್ದಾರಿ ವಹಿಸಿದೆ. ಹಕ್ಕಾನಿ ನೆಟ್ವರ್ಕ್ ಉಗ್ರರು ತಾಲಿಬಾನ್ ಬೀದಿಯಿಂದ ಹಿಡಿದು ಏರ್ಪೋರ್ಟ್ ವರೆಗೆ ನಿಯೋಜನೆಗೊಂಡಿದ್ದಾರೆ. ತಾಲಿಬಾನ್ ಗೆಲುವಿನಲ್ಲಿ ಹಕ್ಕಾನಿ ನೆಟ್ವರ್ಕ್ ದೊಡ್ಡ ಕೈವಾಡವೇ ಇದೆ ಎನ್ನಲಾಗಿದೆ. ಅಫ್ಘಾನಿಸ್ತಾನನಲ್ಲಿ ತಾಲಿಬಾನ್ ವಿಸ್ತಾರಕ್ಕೆ ದೊಡ್ಡ ಪಾತ್ರ ನಿರ್ವಹಿಸಿದೆ. 

ಇದನ್ನೂ ಓದಿ-Viral Video: ಜನಸಂದಣಿ ಚದುರಿಸಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಗುಂಡಿನ ದಾಳಿ..!

ಏತನ್ಮಧ್ಯೆ ಹಕ್ಕಾನಿ ನೆಟ್ವರ್ಕ್ ಮೋಸ್ಟ ವಾಂಟೆಡ್ ಉಗ್ರ ಖಲೀಲ್ ಹಕ್ಕಾನಿಯನ್ನು ಕೂಡ ಕಾಬೂಲ್ ನಲ್ಲಿ ನೋಡಲಾಗಿದೆ. ಆತನ ವಿರುದ್ಧ ಅಮೇರಿಕಾ 5 ಮಿಲಿಯನ್ ಡಾಲರ್ ಅಂದರೆ ಸುಮಾರು 37 ಕೋಟಿಗೂ ಅಧಿಕ ಬಹುಮಾನ ಘೋಷಿಸಿದೆ. ಈ ವೇಳೆ ಖಲೀಲ್ ಮಸೀದಿಯಲ್ಲಿ ತಕ್ರೀರ್ ಕೂಡ ಅರ್ಪಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಆತ ಆಫ್ಘಾನಿಸ್ತಾನದ ಸುರಕ್ಷತೆ ತಮ್ಮ ಆದ್ಯತೆಯಾಗಿದೆ ಎಂದಿದ್ದಾನೆ.

ಇದನ್ನೂ ಓದಿ-Afghanistan Crisis: ಕಾಬೂಲ್ ವಶದ ಬಳಿಕ ಭಾರತದ ವಿರುದ್ಧ ದೊಡ್ಡ ಹೆಜ್ಜೆ ಇಟ್ಟ ತಾಲಿಬಾನ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News