ವಾಷಿಂಗ್ಟನ್: ನೀವು ಎಂದಾದರೂ ಹಾರುವ ಕಾರಿನಲ್ಲಿ ಪ್ರಯಾಣಿಸುವ ಕನಸು ಕಂಡಿದ್ದೀರಾ? ಹೌದು ಎಂದಾದರೆ ನಿಮ್ಮ ಕನಸು ಶೀಘ್ರದಲ್ಲೇ ಈಡೇರಲಿದೆ. ಏಕೆಂದರೆ ಫ್ಲೈಯಿಂಗ್ ಕಾರನ್ನು (Flying Car) ಅಮೆರಿಕದಲ್ಲಿ ತಯಾರಿಸಲಾಗಿದೆ ಮಾತ್ರವಲ್ಲ, ಅದಕ್ಕೆ ಅನುಮೋದನೆಯನ್ನೂ ನೀಡಲಾಗಿದೆ. ವಿಶೇಷವೆಂದರೆ ಈ ಕಾರು 160 ಕಿ.ಮೀ. ವೇಗದಲ್ಲಿ ಹಾರಾಟ ನಡೆಸುವುದಲ್ಲದೆ, ನೆಲದಿಂದ 10,000 ಅಡಿಗಳಷ್ಟು ಎತ್ತರದಲ್ಲಿ ಸಹ ಹಾರಾಟ ನಡೆಸಬಹುದು. ಇನ್ನೂ ವಿಶೇಷವೆಂದರೆ ನಿಮ್ಮ ಪ್ರಯಾಣ ಪೂರ್ಣಗೊಂಡ ಬಳಿಕ ಯಾವುದೇ ಸಾಮಾನ್ಯ ಕಾರಿನಂತೆ ನಿಮ್ಮ ಗ್ಯಾರೇಜ್‌ನಲ್ಲಿ ಪಾರ್ಕ್ ಮಾಡಬಹುದಂತೆ.


COMMERCIAL BREAK
SCROLL TO CONTINUE READING

ಯುಎಸ್ ಫೆಡರಲ್ ಏಜೆನ್ಸಿಯಿಂದ ಅನುಮೋದನೆ :
ಅಮೆರಿಕದ ಫೆಡರಲ್ ಏವಿಯೇಷನ್ ​​ಅಥಾರಿಟಿ ಈ ಕಾರಿಗೆ ಅನುಮೋದನೆ ನೀಡಿದೆ. ಈ ಫ್ಲೈಯಿಂಗ್ ಕಾರನ್ನು (Flying Car) ಟೆರ್ರಾಫುಜಿಯಾ ಟ್ರಾನ್ಸಿಶನ್ ಕಂಪನಿಯು ನಿರ್ಮಿಸಿದ್ದು, ಇದನ್ನು 'ರೋಡಬಲ್ ಏರ್‌ಕ್ರಾಫ್ಟ್' ವಿಭಾಗದಲ್ಲಿ ವಿಶೇಷ ಲೈಟ್-ಸ್ಪೋರ್ಟ್ಸ್ ವಿಮಾನವಾಗಿ ಅನುಮೋದಿಸಲಾಗಿದೆ. ಇದರರ್ಥ ಈ ಕಾರು ವಿಮಾನವಾಗಿಯೂ ಮಾನ್ಯವಾಗಿದೆ. ರಸ್ತೆಯಲ್ಲಿ ಸಾಮಾನ್ಯ ಕಾರುಗಳಂತೆಯೂ ಚಲಿಸಬಹುದು. ಆದರೆ ರಸ್ತೆಯಲ್ಲಿ ಚಲಿಸಲು ಈ ವಾಹನಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಇದಕ್ಕೆ ರಸ್ತೆಯಲ್ಲಿ ಚಲಿಸಲು ಕೂಡ ಅನುಮೋದನೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.


ಪೆಟ್ರೋಲ್, ಡೀಸೆಲ್, ವಿದ್ಯುತ್ ಅಲ್ಲ, ಸೌರಶಕ್ತಿಯಿಂದ ಚಲಿಸುವ ಕಾರುಗಳು, ಇದು ಸರ್ಕಾರದ ಯೋಜನೆ


27 ಅಡಿ ಅಗಲದ ಫ್ಯಾನ್ :
ಈ ಕಾರು 27 ಅಡಿ ಅಗಲದ ಫ್ಯಾನ್ ಹೊಂದಿದ್ದು, ಇದು ಪೋರ್ಟಬಲ್ ಆಗಿದೆ. ಈ ಹಾರುವ ಕಾರಿನಲ್ಲಿ (Flying Car) ಕೇವಲ 2 ಜನರು ಕುಳಿತುಕೊಳ್ಳಬಹುದು ಮತ್ತು ಅದನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು. ಡೈಲಿಮೇಲ್ನ ಸುದ್ದಿಯ ಪ್ರಕಾರ, ಈ ಕಾರನ್ನು ಹಾರಲು ಅನುಮತಿಸಲಾಗಿದೆ ಮತ್ತು ನೀವು ಅದನ್ನು ಪೈಲಟ್ ತರಬೇತಿ ಸಂಸ್ಥೆಯಲ್ಲಿಯೂ ಖರೀದಿಸಬಹುದು. ಆದರೆ 2023 ರ ವೇಳೆಗೆ ಈ ಕಾರನ್ನು ರಸ್ತೆಯಲ್ಲೂ ಓಡಿಸಲು ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.


Uber ನಿಂದ ಬುಕ್ ಮಾಡಿ ಹಾರುವ ಟ್ಯಾಕ್ಸಿ!


ಪೈಲಟ್ ಪರವಾನಗಿ ಅಗತ್ಯವಿದೆ :
ಈ ಕಾರನ್ನು ಚಲಾಯಿಸಲು ಪೈಲಟ್ ಪರವಾನಗಿ ಅಗತ್ಯ ಎಂದು ಟೆರ್ರಾಫುಜಿಯಾ ಟ್ರಾನ್ಸಿಶನ್ ಕಂಪನಿ ಹೇಳಿದೆ. ಟೆರ್ರಾಫುಜಿಯಾ ಚೀನಾದ ಕಂಪನಿಯಾಗಿದೆ. ಆದರೆ ಅದರ ಎಲ್ಲಾ ಕಾರ್ಯಾಚರಣೆಗಳು ಯುಎಸ್ನಲ್ಲಿವೆ. ಕಂಪನಿಯ ಅಧಿಕಾರಿ ಕೆವಿನ್ ಅವರು ನಮ್ಮ ತಂಡವು ಈ ಫ್ಲೈಯಿಂಗ್ ಕಾರನ್ನು ಬಹಳ ಶ್ರಮವಹಿಸಿ ತಯಾರಿಸಿದೆ. ಇದು 80 ದಿನಗಳ ವಿಮಾನ ಪರೀಕ್ಷೆಯನ್ನು ಸಹ ಮಾಡಿದೆ. ಈ ಕಂಪನಿಯು ಎಫ್‌ಎಎ ಲೆಕ್ಕಪರಿಶೋಧನೆಗೆ 150 ತಾಂತ್ರಿಕ ಪತ್ರಿಕೆಗಳನ್ನು ಸಹ ಭರ್ತಿ ಮಾಡಿದೆ. ಈ ಕಾರಿನ ತೂಕ 590 ಕೆಜಿ ಮತ್ತು ಇದು ಕೇವಲ 1 ನಿಮಿಷದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಿದೆ  ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.