Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ
Foreigner Vaccine - ಫೈಜರ್ (Pfizer), ಮಾಡರ್ನಾ (Moderna) ಮತ್ತು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ತಯಾರಿಸಿರುವ ಲಸಿಕೆಗಳು ಶೀಘ್ರದಲ್ಲೇ ಭಾರತದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಸೇರ್ಪಡೆಯಾಗಲಿವೆ. ಏಕೆಂದರೆ ಭಾರತದಲ್ಲಿ ಈ ಲಸಿಕೆಗಳಿಗೆ ಅನುಮತಿ ನೀಡುವ ಕುರಿತು ನ್ಯಾಷನಲ್ ಎಕ್ಸ್ ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೆಶನ್ ಫಾರ್ Covid 19 ನೀಡಿರುವ ಸಲಹೆಗಳನ್ನು ಭಾರತ ಸರ್ಕಾರ ಒಪ್ಪಿಕೊಂಡಿದೆ. ಇದರಿಂದಾಗಿ ವಿದೇಶಿ ವ್ಯಾಕ್ಸಿನ್ ಗಳ ಭಾರತ ಪ್ರವೇಶಕ್ಕೆ ದಾರಿ ಸುಗಮವಾದಂತಾಗಿದೆ.
ನವದೆಹಲಿ: Foreigner Vaccine - ಭಾರತದಲ್ಲಿ ಕೊವಿಡ್ 19 ವೇಗಕ್ಕೆ ಕಡಿವಾಣ ಹಾಕಲು ಇದೀಗ ವಿದೇಶಿ ವ್ಯಾಕ್ಸಿನ್ ಗಳಿಗೆ ದಾರಿ ಸುಗಮವಾದಂತಾಗಿದೆ. ಅಂದರೆ, ವಿದೇಶದಲ್ಲಿ ಅಭಿವೃದ್ಧಿಗೊಂಡು ಮತ್ತು ತಮ್ಮ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದ ವ್ಯಾಕ್ಸಿನ್ ಗಳಿಗೆ ( Foreigner Vaccine) ಇದೀಗ ಭಾರತದಲ್ಲಿ ಕೂಡ ಅನುಮತಿ ಸಿಗುವ ಸಾಧ್ಯತೆ ಇದೆ. ಹೀಗಿರುವಾಗ ಮುಂಬರುವ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಲಸೀಕಾಕರಣ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ಭಾರತದ ಬಳಿ ಇರುವ ಮೂರು ಲಸಿಕೆಗಳ ಜೊತೆಗೆ ವಿದೇಶಿ ಲಸಿಕೆಗಳೂ ಕೂಡ ಇರಲಿವೆ ಎಂದು ವರ್ತಿಸಲಾಗುತ್ತಿದೆ.
ಹೀಗಾಗಿ ಫೈಜರ್ (Pfizer Vaccine), ಮಾಡರ್ನಾ (Moderna Vaccine) ಮತ್ತು ಜಾನ್ಸನ್ ಅಂಡ್ ಜಾನ್ಸನ್ (Johnson And Johnson Vaccine) ಕಂಪನಿಗಳು ತಯಾರಿಸಿರುವ ಲಸಿಕೆಗಳು ಶೀಘ್ರದಲ್ಲೇ ಭಾರತದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಸೇರ್ಪಡೆಯಾಗಲಿವೆ. ಏಕೆಂದರೆ ಭಾರತದಲ್ಲಿ ಈ ಲಸಿಕೆಗಳಿಗೆ ಅನುಮತಿ ನೀಡುವ ಕುರಿತು ನ್ಯಾಷನಲ್ ಎಕ್ಸ್ ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೆಶನ್ ಫಾರ್ ಕೊವಿಡ್-19 ನೀಡಿರುವ ಸಲಹೆಗಳನ್ನು ಭಾರತ ಸರ್ಕಾರ ಒಪ್ಪಿಕೊಂಡಿದೆ. ಇದರಿಂದಾಗಿ ವಿದೇಶಿ ವ್ಯಾಕ್ಸಿನ್ ಗಳ ಭಾರತ ಪ್ರವೇಶಕ್ಕೆ ದಾರಿ ಸುಗಮವಾದಂತಾಗಿದೆ.
ಜನರ ಮೇಲೆ ಈ ವ್ಯಾಕ್ಸಿನ್ ಬಳಕೆಯ ನಂತರ ಸರ್ಕಾರ ಗಮನ ಕೂಡ ಹರಿಸಲಿದೆ
ಈ ವ್ಯಾಕ್ಸಿನ್ ಅನ್ನು ಜನರ ಮೇಲೆ ಬಳಕೆ ಮಾಡುವ ಮುನ್ನ ಇವುಗಳ ಮೇಲೆ ತನ್ನ ಗಮನವನ್ನೂ ಕೂಡ ಕೇಂದ್ರೀಕರಿಸಲಿದೆ. ಈ ಲಸಿಕೆಗಳನ್ನು ಆಮದು ಮಾಡಿಕೊಂಡ ಬಳಿಕ ಮೊದಲು 100 ಜನರಿಗೆ ಈ ಲಸಿಕೆಯನ್ನು ನೀಡಲಾಗುವುದು ಹಾಗೂ 7 ದಿನಗಳವರೆಗೆ ಅವರ ಮೇಲೆ ನಿಗಾವಹಿಸಲಾಗುವುದು ಎನ್ನಲಾಗಿದೆ. ಈ ಅವಧಿಯಲ್ಲಿ ಲಸಿಕೆ ನೀಡಿದ ಬಳಿಕ ಅವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡು ಬರುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು. ಈ ನಡುವೆ ಬ್ರಿಜ್ ಟ್ರಯಲ್, ವೋ ಅಂದರೆ ಕಡಿಮೆ ಜನರ ಮೇಲೆ ನಡೆಸಲಾಗುವ ಟ್ರಯಲ್ ಗಳು ಕೂಡ ಮುಂದುವರೆಯಲಿವೆ.
ಇದನ್ನೂ ಓದಿ-ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?
DCGI ಈಗಾಗಲೇ ರಷ್ಯಾದ Sputnik V ಲಸಿಕೆಗೆ ಅನುಮತಿ ನೀಡಿದೆ
ಈ ಕುರಿತು ಹೇಳಿಕೆ ನೀಡಿರುವ ನೀತಿ ಆಯೋಗದ ಸಸಸ್ಯರಗಿರುವ ಡಾ. ವಿ.ಕೆ ಪಾಲ್, ಪ್ರಸ್ತುತ ಫೈಜರ್, ಮಾಡೆರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳು ಮಾತ್ರ ಇದಕ್ಕೆ ಅರ್ಹತೆಯನ್ನು ಪಡೆದುಕೊಳ್ಳುತ್ತಿವೆ. ಏಕೆಂದರೆ ಈಗಾಗಲೇ ಭಾರತದ ಬಳಿ ಮೂರು ವ್ಯಾಕ್ಸಿನ್ ಗಳಿದ್ದು , ಇವುಗಳಲ್ಲಿ ಮಂಗಳವಾರವಷ್ಟೇ DCGI ರಷ್ಯಾದ Sputnik ವ್ಯಾಕ್ಸಿನ್ ನ ತುರ್ತುಬಳಕೆಗೆ ಅನುಮತಿ ನೀಡಿದೆ. ಈ ವ್ಯಾಕ್ಸಿನ್ ನ ಎರಡನೇ ಪ್ರಮಾಣ 21 ದಿನಗಳ ಬಳಿಕ ನೀಡಲಾಗುತ್ತಿದೆ. ಇದಾದ ಬಳಿಕ ಲಸಿಕಾಕರಣ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಹಲವು ವ್ಯಾಕ್ಸಿನ್ ಗಳು ಕೂಡ ಇದೀಗ ಸರದಿಯಲ್ಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ
ಪರಿಸ್ಥಿತಿ ಇನ್ನೂ ಗಂಭೀರವಾಗಿದೆ
ಅಮೆರಿಕಾದ ರೆಗ್ಯೂಲೆಟರ್, ಯುಕೆ ನಿಯಂತ್ರಕ ಮಂಡಳಿ, ಜಪಾನ್ ಹಾಗೂ WHO ನಿಂದ ಮಾನ್ಯತೆ ಪಡೆದ ಲಸಿಕೆಗಳು ಈ ಪಟ್ಟಿಯಲ್ಲಿ ಶಾಮೀಲಾಗಿವೆ ಎಂದು ಡಾ. ವಿ.ಕೆ ಪಾಲ್ (Dr. V.K Paul) ಹೇಳಿದ್ದಾರೆ. ಏತನ್ಮಧ್ಯೆ ಸದ್ಯದ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಹಾಗೂ ಇಮ್ಯೂನಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಜನರು ಮನೆಯಲ್ಲಿಯೇ ಉಪಾಯಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ-Coronavirus Vaccine ಪಡೆಯುವ ಮೊದಲು ಮತ್ತು ನಂತ್ರ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ತಜ್ಞರ ಸಲಹೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.