ಮಾಸ್ಕೊ: ರಷ್ಯಾದ ಮಾಜಿ ಅಧ್ಯಕ್ಷ, ಸೋವಿಯತ್ ಒಕ್ಕೂಟದ (USSR) ಕೊನೆಯ ನಾಯಕ ಮಿಖಾಯಿಲ್ ಗೊರ್ಬಚೆವ್ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 91 ವರ್ಷ ವಯಸ್ಸಾಗಿತ್ತು ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಶೀತಲ ಸಮರವನ್ನು ರಕ್ತಪಾತವಿಲ್ಲದೆ ಕೊನೆಗೊಳಿಸಿದ ಗೋರ್ಬಚೇವ್ ಸೋವಿಯತ್ ಒಕ್ಕೂಟದ ಪತನವನ್ನು ತಡೆಯುವಲ್ಲಿ ವಿಫಲರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾದರು ಎಂದು ರಷ್ಯಾದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ದೃಢಪಡಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗೋರ್ಬಚೇವ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ರಷ್ಯಾ ಸೋವಿಯತ್ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿದ್ದ ಗೊರ್ಬಚೆವ್, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ಕಡಿತದ ಒಪ್ಪಂದ ಮಾಡಿಕೊಂಡಿದ್ದರು.


ಇದನ್ನೂ ಓದಿ: PM Modi ಜನಪ್ರೀಯತೆಯ ಮುಂದೆ ಘಟಾನುಘಟಿಗಳು ಫೇಲ್, ವಿಶ್ವದ 22 ನಾಯಕರ ಪಟ್ಟಿಯಲ್ಲಿ ನಂ.1 ಸ್ಥಾನ


ಗೊರ್ಬಚೆವ್ 7 ವರ್ಷಗಳಿಗಿಂತ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದರು. ದೇಶ ಉಸಿರುಕಟ್ಟುವ ಸ್ಥಿತಿಯಲ್ಲಿದ್ದರೂ ಅನೇಕ ಬದಲಾವಣೆ ಮತ್ತು ಸುಧಾರಣೆಗಳಿಗೆ ಪ್ರಯತ್ನಿಸಿದ್ದರು. ಇದು ಮುಂದೆ ಸೋವಿಯತ್ ಒಕ್ಕೂಟದ ಪತನಕ್ಕೆ ಕಾರಣವಾಯಿತು. ಪೂರ್ವ ಯುರೋಪಿಯನ್ ರಾಷ್ಟ್ರಗಳನ್ನು ರಷ್ಯಾದ ಪ್ರಾಬಲ್ಯದಿಂದ ಮುಕ್ತಗೊಳಿಸಿತು. ಇದಲ್ಲದೆ ದಶಕಗಳ ಪೂರ್ವ-ಪಶ್ಚಿಮ ಪರಮಾಣು ಮುಖಾಮುಖಿಯನ್ನು ಕೊನೆಗೊಳಿಸಿತ್ತು.


ಗೋರ್ಬಚೇವ್ ಮಾರ್ಚ್ 1985ರಲ್ಲಿ ಸೋವಿಯತ್ ನಾಯಕರಾದರು ಮತ್ತು ಡಿಸೆಂಬರ್ 25, 1991ರಂದು ರಾಜೀನಾಮೆ ನೀಡಿದರು. ಅವರು ಸೋವಿಯತ್ ವಿಭಜನೆಯನ್ನು ಒಳಗೊಂಡಂತೆ ಅನೇಕ ಬದಲಾವಣೆಗಳನ್ನು ಮಾಡಿದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ನಾನು ದೇಶಕ್ಕೆ, ಯುರೋಪ್ ಮತ್ತು ಜಗತ್ತಿಗೆ ಅಗತ್ಯವಾದ ಸುಧಾರಣೆಗಳನ್ನು ಪ್ರಾರಂಭಿಸಿದ ವ್ಯಕ್ತಿ’ ಎಂದು ಹೇಳಿಕೊಂಡಿದ್ದರು.


ಇದನ್ನೂ ಓದಿ: ರಷ್ಯಾ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ಹಾಕಿದ್ದು ಏಕೆ..?


ಶೀತಲ ಸಮರವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೊನೆಯ ಸೋವಿಯತ್ ನಾಯಕ 1990ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು. ಇದಲ್ಲದೆ ಗೋರ್ಬಚೇವ್ ಅವರಿಗೆ ಪ್ರಪಂಚದ ಮೂಲೆ ಮೂಲೆಗಳಿಂದ ಪ್ರಶಸ್ತಿ- ಪುರಸ್ಕಾರಗಳು ದೊರೆತಿವೆ. ಆದರೂ 1991ರ ಸೋವಿಯತ್ ಒಕ್ಕೂಟದ ಪತನದ ಕಾರಣದಿಂದ ರಷ್ಯನ್ನರು ಅವರನ್ನು ದೂಷಿಸಿದ್ದರು.  1996ರಲ್ಲಿ ಗೋರ್ಬಚೇವ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದು ರಾಷ್ಟ್ರೀಯ ಹಾಸ್ಯವಾಗಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.