ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್(Bill Clinton)​ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. 75 ವರ್ಷ ಕ್ಲಿಂಟನ್ ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್​ನಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆಂದು ಅವರ ವಕ್ತಾರರು ತಿಳಿಸಿದ್ದಾರೆ.  


COMMERCIAL BREAK
SCROLL TO CONTINUE READING

ಬಿಲ್ ಕ್ಲಿಂಟನ್ ಅವರ ವಕ್ತಾರರಾಗಿರುವ ಏಂಜೆಲ್ ಅರೇನಾ(Angel Ureña), ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಲ್ ಕ್ಲಿಂಟನ್ ಅವರನ್ನು ಕೊವಿಡ್ ಹೊರತಾದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


World's Costliest Water: ಈ ಒಂದು ಲೀಟರ್ ನೀರಿನ ಬೆಲೆಯಲ್ಲಿ ನೀವು 2 BHK ಫ್ಲ್ಯಾಟ್ ಖರೀದಿಸಬಹುದು


‘2 ದಿನಗಳ ಚಿಕಿತ್ಸೆಯ ನಂತರ ಅವರ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಅವರು ಪ್ರತಿಜೀವಕಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ. ‘ಕ್ಯಾಲಿಫೋರ್ನಿಯಾ ಮೂಲದ ವೈದ್ಯಕೀಯ ತಂಡವು ಅವರ ಹೃದ್ರೋಗ ತಜ್ಞರು ಸೇರಿದಂತೆ ಅಧ್ಯಕ್ಷರ ನ್ಯೂಯಾರ್ಕ್ ಮೂಲದ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ. ನಾವು ಅವರನ್ನು ಶೀಘ್ರವೇ ಡಿಸ್ಚಾರ್ಜ್ ಮಾಡುತ್ತೇವೆಂದು’ ವೈದ್ಯರು ತಿಳಿಸಿದ್ದಾರೆ.


Inflation in Pakistan: ಪಾಕಿಸ್ತಾನದಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟೆಂದು ಕೇಳಿದರೆ ಶಾಕ್ ಆಗ್ತೀರಾ...


ಪ್ರಸ್ತುತ ಆಸ್ಪತ್ರೆಯ ಸಿಬ್ಬಂದಿ ಕ್ಲಿಂಟನ್ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕೋವಿಡ್-19(COVID-19) ಸಂಬಂಧಿ ಸಮಸ್ಯೆಗಳೂ ಅವರಲ್ಲಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಅವರು ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರಿ ಆಹಾರ ತೆಗೆದುಕೊಳ್ಳುವ ಮೂಲಕ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇದರಿಂದ ಅವರ ತೂಕ ಕೊಂಚ ಕಡಿಮೆಯಾಗಿದ್ದು, ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ