World's Costliest Water: ಈ ಒಂದು ಲೀಟರ್ ನೀರಿನ ಬೆಲೆಯಲ್ಲಿ ನೀವು 2 BHK ಫ್ಲ್ಯಾಟ್ ಖರೀದಿಸಬಹುದು

Most Costliest Water - ವಿಶ್ವದ ಈ ಅತ್ಯಂತ ದುಬಾರಿ ನೀರಿನ ಒಂದು ಬಾಟಲಿಯ ಬೆಲೆ 45 ಲಕ್ಷ ರೂ.ಗಳಿಗೂ ಹೆಚ್ಚಾಗಿದೆ. ಈ ನೀರು ಫಿಜಿ ಹಾಗೂ ಫ್ರಾನ್ಸ್ ನ ಒಂದು ನೈಸರ್ಗಿಕ ಬುಗ್ಗೆಯಿಂದ  ಹೊರಬರುತ್ತದೆ.

Written by - Nitin Tabib | Last Updated : Oct 13, 2021, 04:23 PM IST
  • ಫಿಜಿ ಮತ್ತು ಫ್ರಾನ್ಸ್ ನಲ್ಲಿ ಸಿಗುತ್ತದೆ ವಿಶ್ವದ ಅತ್ಯಂತ ದುಬಾರಿ ನೀರು
  • ಈ ನೀರಿನ ಒಂದು ಬಾಟಲಿ ಬೆಲೆ ರೂ.45 ಲಕ್ಷಕ್ಕಿಂತ ಜಾಸ್ತಿ.
  • 24 ಕ್ಯಾರೆಟ್ ಗಟ್ಟಿ ಚಿನ್ನದಿಂದ ಈ ಬಾಟಲಿಯನ್ನು ತಯಾರಿಸಲಾಗಿದೆ.
World's Costliest Water: ಈ ಒಂದು ಲೀಟರ್ ನೀರಿನ ಬೆಲೆಯಲ್ಲಿ ನೀವು 2 BHK ಫ್ಲ್ಯಾಟ್ ಖರೀದಿಸಬಹುದು title=
World's Costliest Wate (Photo Courtesy - In The Bottle)

World's Costliest Water - ವಿಶ್ವದ ಅತ್ಯಂತ ದುಬಾರಿ ಷಾಂಪೇನ್ ಅಥವಾ ಬಿಯರ್ ಬಾಟಲಿಯ ಬೆಲೆ ಲಕ್ಷಾಂತರ ಅಥವಾ  ಕೋಟಿ ರೂ. ಇದೆ ಎಂದರೆ ನಂಬಬಹುದು. ಆದರೆ ನೀರಿನ ಬಾಟಲಿಯ (Costliest Water Bottle) ಬೆಲೆ ಕೂಡ ಲಕ್ಷಗಳಲ್ಲಿರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರು ಇದು ನಿಜ. ಪ್ರಪಂಚದ ಅತ್ಯಂತ ದುಬಾರಿ ನೀರಿನ ಬಾಟಲಿಯ ಬೆಲೆ ಎಷ್ಟೊಂದು ಜಾಸ್ತಿ ಇದೆ ಎಂದರೆ, ಆ ಬೆಲೆಯಲ್ಲಿ  2 BHK ಭಾರತದ ಯಾವುದೇ ಒಂದು ನಗರದಲ್ಲಿ ನೀವು 2 BHK ಖರೀದಿಸಬಹುದು.

ಇದನ್ನೂ ಓದಿ-Student-Teacher Affair: ಗರ್ಭಿಣಿಯಾದ 41 ವರ್ಷದ ಟೀಚರಮ್ಮ, 15 ವರ್ಷದ ವಿದ್ಯಾರ್ಥಿ ಆಕೆಯ ಮಗುವಿಗೆ ತಂದೆ !

45 ಲಕ್ಷ ರೂ.ಗಳಿಗೆ ಸಿಗುತ್ತೆ 750 ಮಿಲಿ ನೀರಿನ ಬಾಟಲಿ
Knowledge Story -
ವಿಶ್ವದ ಈ ಅತ್ಯಂತ ದುಬಾರಿ ನೀರಿನ ಹೆಸರು Acqua di Cristallo Tributo a Modigliani. ಇದರ ಬಾಟಲಿಯ ಬೆಲೆ 45 ಲಕ್ಷ ರೂಪಾಯಿಗಳು ಮತ್ತು ಇದು ಸಂಪೂರ್ಣ 1 ಲೀಟರ್ ನೀರನ್ನು ಕೂಡ ಹೊಂದಿರುವುದಿಲ್ಲ. ಬದಲಾಗಿ, ಈ ಬಾಟಲಿಯಲ್ಲಿ ಕೇವಲ 750 ಮಿಲಿ ನೀರು ಬರುತ್ತದೆ. ಇನ್ ಅ ಬಾಟಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಆಕ್ವಾ ಡಿ ಕ್ರಿಸ್ಟೆಲ್ಲೊ ಟ್ರಿಬ್ಯುಟೊ ಮೊಡಿಗ್ಲಿಯಾನಿ ನೀರಿನ ಬಾಟಲಿಯ ಬೆಲೆ $ 60,000 ಅಂದರೆ ರೂ. 45 ಲಕ್ಷಕ್ಕಿಂತ ಹೆಚ್ಚು. ಈ ನೀರು ಫ್ರಾನ್ಸ್ ಮತ್ತು ಫಿಜಿಯ ನೈಸರ್ಗಿಕ ಬುಗ್ಗೆಯಿಂದ ಬರುತ್ತದೆ.

ಇದನ್ನೂ ಓದಿ- Covid-19&Flu: Corona ಆತಂಕದ ನಡುವೆಯೇ ಎದುರಾದ ಹೊಸ ಅಪಾಯ, Twindemic ನಿಂದ ಪಾರಾಗುವುದು ಕಷ್ಟ!

ಯಾಕೆ ಇಷ್ಟೊಂದು ದುಬಾರಿ ಗೊತ್ತಾ?
ಲಕ್ಷಗಟ್ಟಲೆ ಬೆಲೆ ಬಾಳುವ ಈ ನೀರಿನ ಬಾಟಲಿ ಇಷ್ಟೊಂದು ದುಬಾರಿ ಯಾಕೆ ಎಂಬುದರ ಹಿಂದೆ  ಹಲವು ಕಾರಣಗಳಿವೆ. ಇದಕ್ಕೆ ಒಂದು ಕಾರಣವೆಂದರೆ ಅದರ ವಿಶೇಷ ಬಾಟಲ್, ಇದನ್ನು 24 ಕ್ಯಾರೆಟ್ ಘನ ಚಿನ್ನದಿಂದ ತಯಾರಿಸಲಾಗಿದೆ. ಈ ಬಾಟಲಿಯನ್ನು ವಿಶ್ವದ ಅತ್ಯಂತ ಪ್ರಸಿದ್ಧ ಬಾಟಲ್ ಡಿಸೈನರ್ ಫೆರ್ನಾಂಡೊ ಅಲ್ಟಮಿರಾನೊ (Fernando Altamirano)ವಿನ್ಯಾಸಗೊಳಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಬಾಟಲಿಯಾದ ಕಾಗ್ನ್ಯಾಕ್ ಡುಡೊಗ್ನೆ ಹೆರಿಟೇಜ್ ಹೆನ್ರಿ IV ಅನ್ನು ಕೂಡ ಅವರೇ ವಿನ್ಯಾಸಗೊಳಿಸಿದ್ದರು. ಬಾಟಲಿಯ ಹೊರತಾಗಿ, ಈ ನೀರಿನ ರುಚಿ ಕೂಡ ವಿಭಿನ್ನವಾಗಿದೆ ಮತ್ತು ಇದು ಸಾಮಾನ್ಯ ನೀರಿಗಿಂತ ಹಲವು ಪಟ್ಟು ಹೆಚ್ಚು ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ-WHO Pandemic Alert To China: ಮತ್ತೊಂದು ಮಹಾಮಾರಿಯ ಕುರಿತು ಚೀನಾಗೆ ಎಚ್ಚರಿಕೆ ನೀಡಿದ WHO, ಅರ್ಧಕ್ಕಿಂತ ಹೆಚ್ಚು ಸೋಂಕಿತರ ಸಾವು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News