Strawberry Supermoon: ಇಂದು ಪ್ರಪಂಚದಾದ್ಯಂತ ಆಕಾಶದಲ್ಲಿ ವಿಸ್ಮಯಕಾರಿ ಘಟನೆಯೊಂದು ಜರುಗಲಿದೆ. ಸ್ಟ್ರಾಬೆರಿ ಸೂಪರ್‌ಮೂನ್, ಮೀಡ್, ಹನಿ ಅಥವಾ ರೋಸ್ ಮೂನ್ ಸೇರಿದಂತೆ ಪ್ರಪಂಚದಾದ್ಯಂತ ಹುಣ್ಣಿಮೆಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: The Rave Party: ರೇವ್ ಪಾರ್ಟಿ ಎಂದರೇನು? ಹೇಗಿರುತ್ತೆ? ಏನಿರುತ್ತೆ? ಇಲ್ಲಿದೆ ಸ್ಫೋಟಕ ಮಾಹಿತಿ


ಆಕಾಶದಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನವಾದ ಸ್ಟ್ರಾಬೆರಿ ಸೂಪರ್‌ಮೂನ್ ಮಂಗಳವಾರ ಜಗತ್ತಿನಾದ್ಯಂತ ಗೋಚರಿಸಲಿದೆ. ಭಾರತದಲ್ಲಿಯೂ ಪೂರ್ಣ ಚಂದಿರನನ್ನು ಕಾಣಬಹುದಾಗಿದೆ. ಇಂದು ಮಹತ್ವದ ಹಾಗೂ ಅಪರೂಪದ ವಿದ್ಯಮಾನಕ್ಕೆ ಚಂದ್ರ ಸಾಕ್ಷಿಯಾಗಲಿದ್ದಾನೆ. ಜಗತ್ತಿನಾದ್ಯಂತ ಆಕಾಶದಲ್ಲಿ ಸ್ಟ್ರಾಬೆರಿ ಸೂಪರ್‌ಮೂನ್ ಕಾಣಲಿದ್ದಾನೆ.  


ಸ್ಟ್ರಾಬೆರಿ ಸೂಪರ್‌ಮೂನ್ ಹೆಸರು ಬರಲು ಕಾರಣ:


ಈಶಾನ್ಯ ಅಮೆರಿಕದಲ್ಲಿ ವಾಸಿಸುವ ಅಲ್ಗೊನ್‌ಕ್ವಿನ್ ಬಡುಕಟ್ಟುಗಳಿಂದ ಸ್ಟ್ರಾಬೆರಿ ಮೂನ್ ಎಂಬ ಹೆಸರು ಬಂದಿದೆ. ಈ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ಸ್ಟ್ರಾಬೆರಿ ಬೆಳೆಯ ಕೊಯ್ಲು ಆರಂಭವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿನ ಚಂದ್ರಗ್ರಹಣಕ್ಕೆ ಈ ಹೆಸರು ಬಂದಿದೆ. ಯುರೋಪ್‌ನಲ್ಲಿ ಇದನ್ನು ಮೀಡ್ ಅಥವಾ ಹನಿ ಮೂನ್ (ಜೇನಿನ ಚಂದ್ರ) ಎಂದು ಕರೆಯಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಇಲ್ಲಿ ಹೆಚ್ಚಿನ ಜೇನುತುಪ್ಪ ಲಭ್ಯವಾಗುತ್ತದೆ, ಇದೇ ಕಾರಣಕ್ಕೆ ಆ ಹೆಸರುಗಳಿಂದ ಕರೆಯಲಾಗುತ್ತದೆ. 


ಇದನ್ನೂ ಓದಿ: ಸ್ಥೂಲಕಾಯದಿಂದ ಮಕ್ಕಳಲ್ಲಿ ಎದುರಾಗಬಹುದು ಈ ಐದು ಸಮಸ್ಯೆಗಳು ..!


ನಾಸಾ ಪ್ರಕಾರ, ಭೂಮಿಗೆ ಚಂದ್ರ ಅತ್ಯಂತ ಹತ್ತಿರವಿದ್ದಾಗ ಭೂಮಿಯಿಂದ ಅದರ ಸರಾಸರಿ ದೂರ ಸುಮಾರು 3,63,300 ಕಿಮೀ ಇರುತ್ತದೆ. ಈ ಸಮೀಪದ ಬಿಂದುವಿನಲ್ಲಿ ಕಾಣಿಸಿಕೊಳ್ಳುವ ಪೂರ್ಣ ಚಂದ್ರ ಹೆಚ್ಚು ಪ್ರಖರವಾಗಿರುತ್ತದೆ. ಸಾಮಾನ್ಯ ಹುಣ್ಣಿಮೆ ಇಂದು ಕಾಣುವ ಚಂದಿರ ಹೆಚ್ಚು ದೊಡ್ಡದಾಗಿರುತ್ತದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.