ಸ್ಥೂಲಕಾಯದಿಂದ ಮಕ್ಕಳಲ್ಲಿ ಎದುರಾಗಬಹುದು ಈ ಐದು ಸಮಸ್ಯೆಗಳು ..!

ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ಸೂಕ್ತ ಸಮಯಕ್ಕೆ ನಿಯಂತ್ರಿಸದಿದ್ದರೆ, ಅದು ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. 

ಬೆಂಗಳೂರು : ಗುಂಡು ಗುಂಡಾಗಿರುವ ಮಕ್ಕಳು ನೋಡುವುದಕ್ಕೆ ಮುದ್ದು ಮುದ್ದಾಗಿ ಕಂಡರೂ ನಂತರದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಮಕ್ಕಳಲ್ಲಿ ಸ್ಥೂಲಕಾಯತೆಯು ದೇಹದಲ್ಲಿನ ಅತಿಯಾದ ಕೊಬ್ಬು ಮತ್ತು ಹೆಚ್ಚಿನ ಮಟ್ಟದ ಬಾಡಿ ಮಾಸ್ ಇಂಡೆಕ್ಸ್‌ನ ಒಂದು ರೂಪವಾಗಿದೆ. ಕಳಪೆ ಜೀವನಶೈಲಿ, ಆಹಾರದಲ್ಲಿ ಹೆಚ್ಚಿನ ಕ್ಯಾಲೋರಿಗಳು, ನಿಧಾನ ಚಯಾಪಚಯ, ನಿದ್ರೆಯ ಕೊರತೆ, ಒತ್ತಡ, ಜಂಕ್ ಫುಡ್ ನ ಅತಿಯಾದ ಸೇವನೆ, ಸಂಸ್ಕರಿಸಿದ ಆಹಾರಗಳು ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ಉಂಟುಮಾಡಬಹುದು. ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ಸೂಕ್ತ ಸಮಯಕ್ಕೆ ನಿಯಂತ್ರಿಸದಿದ್ದರೆ, ನಂತರ ಅದು ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

ಸ್ಥೂಲಕಾಯ ಹೊಂದಿರುವ ಮಕ್ಕಳು, ಅಂದರೆ, ದೇಹದಲ್ಲಿ ಕೊಬ್ಬು ಸಂಗ್ರಹವಾಗುವ ಮಕ್ಕಳು, ಅವರು ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಎರಡೂ ಅಂಶಗಳು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

2 /5

ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.  ಬೊಜ್ಜು  ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡಬಹುದು. ಇನ್ಸುಲಿನ್ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಸ್ಥೂಲಕಾಯತೆಯಿಂದಾಗಿ ಇನ್ಸುಲಿನ್ ಪ್ರತಿರೋಧದ ಸ್ಥಿತಿಯು ಉದ್ಭವಿಸಿದಾಗ, ರಕ್ತದಲ್ಲಿನ ಸಕ್ಕರೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ . ಪರಿಣಾಮ ನೀವು ಮಧುಮೇಹಕ್ಕೆ ಬಲಿಯಾಗಬೇಕಾಗುತ್ತದೆ. 

3 /5

ಸ್ಥೂಲಕಾಯತೆಯು ಕೀಲು ನೋವನ್ನು ಉಂಟುಮಾಡುತ್ತದೆ.   ಸ್ಥೂಲಕಾಯತೆಯು ಮೊಣಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.  ನಡೆಯುವಾಗ ಅಥವಾ ಇತರ ಯಾವುದೇ ಚಟುವಟಿಕೆಯನ್ನು ಮಾಡುವಾಗ ಕೀಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

4 /5

ಬೊಜ್ಜು ಹೊಂದಿರುವ ಜನರು ಸ್ಲೀಪ್ ಅಪ್ನಿಯದ  ಸಮಸ್ಯೆಗಳನ್ನು ಕೂಡಾ ಎದುರಿಸುತ್ತಾರೆ. ಇದು ಗಂಭೀರವಾದ ನಿದ್ರಾಹೀನತೆಯಾಗಿದ್ದು ಅದು ಉಸಿರಾಟವನ್ನು ಕಷ್ಟಕರವಾಗಿಸುತ್ತದೆ.  ಈ ಸ್ಥಿತಿಯಿಂದಾಗಿ ರಾತ್ರಿ ನಿದ್ರೆ ಮಾಡುವುದು ಕಷ್ಟವಾಗುತ್ತದೆ.  ಸ್ಥೂಲಕಾಯದ ಮಕ್ಕಳು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ.

5 /5

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರು ಖಿನ್ನತೆ, ಆತಂಕ, ಒತ್ತಡ ಮತ್ತು ಕಿರಿಕಿರಿಯನ್ನು ಹೊಂದಿರುತ್ತಾರೆ. ಅವರು ಕಡಿಮೆ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ, ಸಾಮಾಜಿಕ ಸಂಬಂಧಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ.  ಸ್ಥೂಲಕಾಯತೆ ಯ ಪರಿಣಾಮ  ಅವರು ಮನೆಯಲ್ಲಿಯೇ ಇರುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.