Girl Addicted to Mobile Gaming: ಈಗ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದಾರೆ. ಆದರೆ ಮಕ್ಕಳು ಫೋನ್‌ನಲ್ಲಿ ಮುಳುಗಿ ಹೋಗುವುದನ್ನು ಅನೇಕ ಬಾರಿ ನೋಡಬಹುದು. ನಿಮ್ಮ ಬಳಿ ಫೋನ್ ಇಲ್ಲದಿದ್ದರೆ, ನೀವು ಒಂದು ಕ್ಷಣವೂ ಇರುವುದಿಲ್ಲ ಎಂಬ ಭಾವನೆ ಮೂಡುವುದು. ಅದರಲ್ಲೂ ಕೆಲವರು ಆನ್‌ಲೈನ್ ಆಟಗಳನ್ನು ಆಡುತ್ತಾ ಜಗತ್ತನ್ನೇ ಮರೆಯುತ್ತಿದ್ದಾರೆ. ಇತ್ತೀಚೆಗೆ 13 ವರ್ಷದ ಬಾಲಕಿಯೊಬ್ಬಳು ಆನ್‌ಲೈನ್ ಗೇಮಿಂಗ್ ಬಲೆಗೆ ಬಿದ್ದು 52,19,809 ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಹುಡುಗಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತಿದ್ದಾಳೆ. ಇಡೀ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ್ದಾಳೆ. ತಾಯಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕೇವಲ 5 ರೂ. ಇರುವುದು ಗೊತ್ತಾಗಿದೆ. ಹುಡುಗಿ ತನ್ನ ತಾಯಿ ತನ್ನ ಡೆಬಿಟ್ ಕಾರ್ಡ್ ಅನ್ನು ಆನ್‌ಲೈನ್ ಆಟಗಳನ್ನು ಆಡಲು ಬಳಸುತ್ತಿದ್ದಳು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. 


COMMERCIAL BREAK
SCROLL TO CONTINUE READING

ಈ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ. ಬಾಲಕಿ ಆನ್‌ಲೈನ್ ಗೇಮಿಂಗ್‌ಗೆ ಅಡಿಕ್ಟ್ ಆಗಿದ್ದಾಳೆ ಎಂದು ಬಾಲಕಿಯ ಶಾಲಾ ಶಿಕ್ಷಕಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್ ಸ್ಕ್ರೀನ್ ಟೈಮ್ ತುಂಬಾ ಹೆಚ್ಚಿರುವುದನ್ನು ಶಿಕ್ಷಕಿ ಗಮನಿಸಿದ್ದಾರೆ. ಶಾಲಾ ಸಮಯದಲ್ಲೂ ಬಾಲಕಿ ಫೋನಿನಲ್ಲಿ ಗೇಮ್ ಆಡುತ್ತಿರುವುದನ್ನು ಕಂಡು ಶಿಕ್ಷಕಿ ಹುಡುಗಿಯ ತಾಯಿಗೆ ವಿಚಾರ ತಿಳಿಸಿದ್ದಾರೆ. ಆಗ ತಾಯಿ ಮೊಬೈಲ್ ತೆಗೆದುಕೊಂಡು ಪರಿಶೀಲಿಸಿದಾಗ ಈ ಶಾಕಿಂಗ್ ವಿಷಯ ತಿಳಿದಿದೆ.


ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಬಾತ್ ರೂಂನಲ್ಲಿ ರಹಸ್ಯ ದಾಖಲೆಗಳ ಪೆಟ್ಟಿಗೆ! 


ಹಣ ಏನಾಯಿತು ಎಂದು ತಂದೆ ಹುಡುಗಿಯನ್ನು ಕೇಳಿದಾಗ, ಹಣವನ್ನು ಆನ್‌ಲೈನ್ ಆಟಗಳಿಗೆ ಮತ್ತು ಆಟದಲ್ಲಿ ಏನನ್ನೋ ಖರೀದಿಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾಳೆ. ಅಲ್ಲದೇ, ತನ್ನ ಸ್ನೇಹಿತರಿಗಾಗಿ 11,61,590 ರೂ ಮೌಲ್ಯದ ಗೇಮ್‌ಗಳನ್ನು ಖರೀದಿಸಿರುವುದಾಗಿ ಬಾಲಕಿ ಹೇಳಿದ್ದಾಳೆ. ಮನೆಯಲ್ಲಿ ಡೆಬಿಟ್ ಕಾರ್ಡ್ ಸಿಕ್ಕಿದ್ದು, ಅದನ್ನು ತನ್ನ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಬಾಲಕಿಯ ತಾಯಿ ತನ್ನ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಅನ್ನು ಬಾಲಕಿಗೆ ಮೊದಲೇ ತಿಳಿಸಿದ್ದಾಳೆ. ಇದರಿಂದ ಬಾಲಕಿ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಆನ್ ಲೈನ್ ಗೇಮಿಂಗ್ ಗಾಗಿ 52 ಲಕ್ಷ ರೂ. ಬಳಸಿದ್ದಾಳೆ.


ಹಾಗಾಗಿ ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಈ ಘಟನೆಗೆ ಬಾಲಕಿಯ ಪೋಷಕರೇ ಕಾರಣ ಎನ್ನುತ್ತಾರೆ ನೆಟಿಜನ್‌ಗಳು. ಮೊದಲೇ ಮುಂಜಾಗ್ರತೆ ವಹಿಸಿದ್ದರೆ ಇಷ್ಟು ದೊಡ್ಡ ಹಾನಿ ಸಂಭವಿಸುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಮೆಕ್‌ಗಿಲ್ ವಿಶ್ವವಿದ್ಯಾನಿಲಯವು ನಡೆಸಿದ ಸಮೀಕ್ಷೆಯ ಪ್ರಕಾರ ಚೀನಾದಲ್ಲಿ ಹೆಚ್ಚು ಜನರು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗಿದ್ದಾರೆ. ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದ್ದು, ಮಲೇಷ್ಯಾ ಮೂರನೇ ಸ್ಥಾನದಲ್ಲಿದೆ.


ಇದನ್ನೂ ಓದಿ:  ಈ ದೇಶದಲ್ಲಿ ಕುಳಿತು ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಚೀನಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.