Donald Trump: ಡೊನಾಲ್ಡ್ ಟ್ರಂಪ್ ಬಾತ್ ರೂಂನಲ್ಲಿ ರಹಸ್ಯ ದಾಖಲೆಗಳ ಪೆಟ್ಟಿಗೆ!

Donald Trump News: ನ್ಯಾಯಾಂಗ ಇಲಾಖೆಯ ಪ್ರಕಾರ, ಜನವರಿ 2021 ರಲ್ಲಿ ಟ್ರಂಪ್ ಶ್ವೇತಭವನವನ್ನು ತೊರೆದರು. ಈ ವೇಳೆ ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದರು.   

Written by - Chetana Devarmani | Last Updated : Jun 11, 2023, 01:55 PM IST
  • ಜನವರಿ 2021 ರಲ್ಲಿ ಟ್ರಂಪ್ ಶ್ವೇತಭವನವನ್ನು ತೊರೆದರು
  • ಈ ವೇಳೆ ಕೆಲವು ಫೈಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದರು
  • ಡೊನಾಲ್ಡ್ ಟ್ರಂಪ್ ಬಾತ್ ರೂಂನಲ್ಲಿ ರಹಸ್ಯ ದಾಖಲೆಗಳ ಪೆಟ್ಟಿಗೆ!
Donald Trump: ಡೊನಾಲ್ಡ್ ಟ್ರಂಪ್ ಬಾತ್ ರೂಂನಲ್ಲಿ ರಹಸ್ಯ ದಾಖಲೆಗಳ ಪೆಟ್ಟಿಗೆ!  title=

US News: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸದಲ್ಲಿ ರಹಸ್ಯ ದಾಖಲೆಗಳು ಪತ್ತೆಯಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು ಇದೀಗ ಸಾರ್ವಜನಿಕಗೊಳಿಸಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024 ರ ಯುಎಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಪೈಪೋಟಿಯಲ್ಲಿರುವ ರಿಪಬ್ಲಿಕನ್ ಪಕ್ಷದ ನಾಯಕ ಕೂಡ ಆಗಿದ್ದಾರೆ. ಫ್ಲೋರಿಡಾದ ಮಾರ್-ಎ-ಲಾಗೊ ಮನೆಯಲ್ಲಿ ಅನೇಕ ದಾಖಲೆಗಳನ್ನು ಅವರು ರಹಸ್ಯವಾಗಿ ಇಟ್ಟುಕೊಂಡಿದ್ದಕ್ಕಾಗಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪಣೆಯ ಭಾಗವಾಗಿ ಬಿಡುಗಡೆಯಾದ ಆರು ಫೋಟೋಗಳು ಅವರ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ಕೊಠಡಿಗಳಲ್ಲಿ ಇರಿಸಲಾದ ದಾಖಲೆಗಳ ಕಾರ್ಡ್‌ಬೋರ್ಡ್ ಬಾಕ್ಸ್‌ಗಳನ್ನು ಒಳಗೊಂಡಿವೆ. ಟ್ರಂಪ್‌ ಬಾತ್‌ರೂಮ್‌, ಬಾಲ್ ರೂಮ್‌ ಮತ್ತು ಮಲಗುವ ಕೋಣೆಯಲ್ಲಿ ಈ ಪೆಟ್ಟಿಗೆಗಳನ್ನು ಇಟ್ಟುಕೊಂಡಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್

ಬಾತ್‌ರೂಮ್‌ನಲ್ಲಿ ಟಾಯ್ಲೆಟ್ ಮತ್ತು ಶವರ್ ನಡುವೆ ಜೋಡಿಸಲಾದ  ದಾಖಲೆಗಳನ್ನು ಹೊಂದಿರುವ ಪೆಟ್ಟಿಗೆಗಳನ್ನು  ತೋರಿಸುವ ಫೋಟೋ ಎಲ್ಲರ ಗಮನಸೆಳೆಯುತ್ತಿದೆ. ಚಾರ್ಜಿಂಗ್ ಡಾಕ್ಯುಮೆಂಟ್ ಪ್ರಕಾರ, ಈ ಪೆಟ್ಟಿಗೆಗಳನ್ನು ಏಪ್ರಿಲ್ 2021 ರಲ್ಲಿ ಬಾತ್‌ರೂಮ್‌ಗೆ ಕೊಂಡೊಯ್ಯಲಾಯಿತು. ನಂತರ ನೆಲ ಮಹಡಿಯಲ್ಲಿನ ಕೊಠಡಿಯನ್ನು ತೆರವುಗೊಳಿಸಿ ಆ ಪೆಟ್ಟಿಗೆಗಳನ್ನು ಅಲ್ಲಿಡಲು ಟ್ರಂಪ್ ನಿರ್ದೇಶಿಸಿದರು ಎನ್ನಲಾಗಿದೆ. ಜೂನ್‌ನಲ್ಲಿ ಬಾಕ್ಸ್‌ಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. 

ಅವರು ಶ್ವೇತಭವನದಿಂದ ಹೊರಬಂದಾಗ, ಅವರು ತಮ್ಮೊಂದಿಗೆ ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋದರು ಎಂಬ ಆರೋಪವಿದೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಟ್ರಂಪ್ ಜನವರಿ 2021 ರಲ್ಲಿ ಶ್ವೇತಭವನವನ್ನು ತೊರೆದಾಗ, ಅವರು ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ದೋಷಾರೋಪಣೆಯ ಪ್ರಕಾರ, ಟ್ರಂಪ್ ಅವರು ಫ್ಲೋರಿಡಾದ ಮಾರ್-ಎ-ಲಾಗೊ ನಿವಾಸ ಮತ್ತು ಕ್ಲಬ್‌ನಲ್ಲಿ ಗುಪ್ತಚರ ದಾಖಲೆಗಳನ್ನು ಅಸುರಕ್ಷಿತವಾಗಿ ಇರಿಸಿದ್ದರು ಎನ್ನಲಾಗಿದೆ. 

ಇದನ್ನೂ ಓದಿ:  ಅಮೇರಿಕಾದಲ್ಲಿ ಈ ಭಾರತದ ಸಂಜಾತೆಗೆ ಸಿಕ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿ

ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದು, ನ್ಯಾಯಕ್ಕೆ ಅಡ್ಡಿಪಡಿಸುವ ಪಿತೂರಿ, ದಾಖಲೆಗಳನ್ನು ಮರೆಮಾಚುವುದು ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವುದು ಸೇರಿದಂತೆ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ 37 ಆರೋಪಗಳನ್ನು ಹೊರಿಸಲಾಗಿದೆ. ಟ್ರಂಪ್ ಸಹಾಯಕ ವಾಲ್ಟ್ ನೌಟಾ ಅವರನ್ನು ಆರು ಪ್ರಕರಣಗಳಲ್ಲಿ ದೋಷಾರೋಪಣೆ ಮಾಡಲಾಗಿದೆ. ದಾಖಲೆಗಳನ್ನು ಮರೆಮಾಡಲು ಟ್ರಂಪ್‌ಗೆ ಸಹಾಯ ಮಾಡಿದ ಆರೋಪ ಅವರ ಮೇಲಿದೆ.‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News