Global Home Price Index 2021: ಭಾರತದಲ್ಲಿ ಮನೆಗಳ ಬೆಲೆಗಳಲ್ಲಿ ಭಾರಿ ಕುಸಿತ, ನಮ್ಮ ಬೆಂಗಳೂರಿನಲ್ಲಿ ಎಷ್ಟು ಕುಸಿತ?
Home Prices Declined In India - ಇತ್ತೀಚಿಗೆ ನೈಟ್ ಫ್ರಾಂಕ್ (Knight Frank Report 2021) ಬಿಡುಗಡೆಗೊಳಿಸಿರುವ ವರದಿಯೊಂದರ ಪ್ರಕಾರ, ವರ್ಷ 2020ರ ಮೂರನೇ ತ್ರೈಮಾಸಿಕದಿಂದ 2021ರ ಮೊದಲ ತ್ರೈಮಾಸಿಕದವರೆಗೆ ಭಾರತದಲ್ಲಿ ಮನೆಗಳ ಬೆಲೆಯಲ್ಲಿ (Home Prices in India) ಶೇ.0.6ರಷ್ಟು ಹಾಗೂ 2020ರ ನಾಲ್ಕನೇ ತ್ರೈಮಾಸಿಕದಿಂದ 2021ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಶೇ.1.4ರಷ್ಟು ಏರಿಕೆ ದಾಖಲಾಗಿದೆ ಎನ್ನಲಾಗಿದೆ.
ನವದೆಹಲಿ: Knight Frank Report 2021 - ಭಾರತದಲ್ಲಿ 2021ರ ಮೊದಲ ತ್ರೈಮಾಸಿಕದಲ್ಲಿ ಮನೆಗಳ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ (Home Prices Declined). ಈ ಕಾರಣದಿಂದಾಗಿ, ಜಾಗತಿಕ ಗೃಹ ಬೆಲೆ ಸೂಚ್ಯಂಕದಲ್ಲಿ (Global Home Price Index 2021) ಭಾರತ 12 ಸ್ಥಾನಗಳ ಕುಸಿತ ಕಂಡು 55 ನೇ ಸ್ಥಾನಕ್ಕೆ ತಲುಪಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ ಈ ಸೂಚ್ಯಂಕದಲ್ಲಿ ಭಾರತ 43 ನೇ ಸ್ಥಾನದಲ್ಲಿತ್ತು. ಅಂತರರಾಷ್ಟ್ರೀಯ ಆಸ್ತಿ ಸಲಹಾ ಸಂಸ್ಥೆ ನೈಟ್ ಫ್ರಾಂಕ್ (Knight Frank), ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ, 2021 ರ ಮೊದಲ ತ್ರೈಮಾಸಿಕದಲ್ಲಿ, ವಾರ್ಷಿಕ ಆಧಾರದ ಮೇಲೆ ಭಾರತದಲ್ಲಿ ಮನೆಗಳ ಬೆಲೆಯಲ್ಲಿ ಶೇಕಡಾ 1.6 ರಷ್ಟು ಕುಸಿತ ಕಂಡುಬಂದಿದೆ ಎಂದು ಹೇಳಿದೆ.
ಇದನ್ನೂ ಓದಿ-LIC ಗೃಹ ಸಾಲಗಾರರಿಗೆ ಸಿಹಿ ಸುದ್ದಿ : ಬಡ್ಡಿದರ ಇಳಿಕೆ ಮಾಡಿದ LIC HFL
2005ರ ಬಳಿಕ ಅಮೆರಿಕಾದ ವಾರ್ಷಿಕ ಮೌಲ್ಯ ವೃದ್ಧಿ ದರ ಎಲ್ಲಕ್ಕಿಂತ ಹೆಚ್ಚು
ಇತ್ತೀಚಿಗೆ ನೈಟ್ ಫ್ರಾಂಕ್ (Knight Frank Report 2021) ಬಿಡುಗಡೆಗೊಳಿಸಿರುವ ವರದಿಯೊಂದರ ಪ್ರಕಾರ, ವರ್ಷ 2020ರ ಮೂರನೇ ತ್ರೈಮಾಸಿಕದಿಂದ 2021ರ ಮೊದಲ ತ್ರೈಮಾಸಿಕದವರೆಗೆ ಭಾರತದಲ್ಲಿ ಮನೆಗಳ ಬೆಲೆಯಲ್ಲಿ (Home Prices in India) ಶೇ.0.6ರಷ್ಟು ಹಾಗೂ 2020ರ ನಾಲ್ಕನೇ ತ್ರೈಮಾಸಿಕದಿಂದ 2021ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಶೇ.1.4ರಷ್ಟು ಏರಿಕೆ ದಾಖಲಾಗಿದೆ ಎನ್ನಲಾಗಿದೆ. 2005 ರಿಂದೀಚೆಗೆ ಅಮೆರಿಕವು (America) ಅತಿ ಹೆಚ್ಚು ವಾರ್ಷಿಕ ಮೌಲ್ಯ ವೃದ್ಧ ದರವನ್ನು (Highest Annual Price Growth Rate) ಕಂಡಿದೆ ಎಂದು ನೈಟ್ ಫ್ರಾಂಕ್ ವರದಿ ಹೇಳಿದೆ. ಅಮೆರಿಕಾದಲ್ಲಿ ಈ ದರ ವಾರ್ಷಿಕವಾಗಿ ಶೇ..13.2 ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷದ ಆಧಾರದ ಮೇಲೆ ತುರ್ಕಿ ಶೇ.32 ರಷ್ಟು ವೃದ್ಧಿಯೊಂದಿಗೆ ಈ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಇದನ್ನೂ ಓದಿ- Home Loan: ಕೊರೊನಾ ಮಹಾಮಾರಿಯ ಪ್ರಭಾವ, ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದೆ SBI
ಎಲ್ಲಿ ಮನೆಗಳ ಬೆಲೆಯಲ್ಲಿ ಎಷ್ಟು ಶೇಕಡಾವರು ಇಳಿಕೆ?
ಈ ಜಾಗತಿಕ ಪಟ್ಟಿಯಲ್ಲಿ ಶೇ.22.1ರಷ್ಟು ವೃದ್ಧಿಯೊಂದಿಗೆ ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದರೆ, ಶೇ.16.6 ರಷ್ಟು ವೃದ್ಧಿಯೊಂದಿಗೆ ಲಕ್ಸಂಬರ್ಗ್ ಇದೆ. ವರ್ಷ 2021ರ ಮೊದಲ ತ್ರೈಮಾಸಿಕದಲ್ಲಿ ಸ್ಪೇನ್ ಪ್ರದರ್ಶನ ತುಂಬಾ ಕಳಪೆಮಟ್ಟದ್ದಾಗಿದೆ. ಅಲ್ಲಿ ಮನೆಗಳ ಬೆಲೆಯಲ್ಲಿ ಶೇ.1.8 ರಷ್ಟು ಕುಸಿತ ಸಂಭವಿಸಿದೆ. ಸ್ಪೇನ್ ಬಳಿಕ ಶೇ.1.6ರಷ್ಟು ಕುಸಿತದ ಮೂಲಕ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸರಾಸರಿ ಮೌಲ್ಯ ಪರಿವರ್ತನೆಯಲ್ಲಿ ಕೊಲ್ಕತ್ತಾದ ಬೆಲೆಗಳಲ್ಲಿ ಶೇ.4, ಪುಣೆ ಶೇ.3, ಮುಂಬೈ ಶೇ.3, ಅಹ್ಮದಾಬಾದ್ ಶೇ.2 , ಬೆಂಗಳೂರಿನಲ್ಲಿ ಶೇ.1 ರಷ್ಟು ಹಾಗೂ ದೆಹಲಿ-NCR ಪ್ರಾಂತ್ಯದಲ್ಲಿ ಶೇ.1 ರಷ್ಟು ಕುಸಿತ ಗಮನಿಸಲಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ- Home Loan : ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಸಿಗಲಿಕ್ಕಿಲ್ಲ.! ಯಾಕೆ ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ