ನವದೆಹಲಿ: ಮಿಡತೆ, ರೇಷ್ಮೆ ಹುಳ ಸೇರಿದಂತೆ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಇದು ಸಿಂಗಾಪುರದಲ್ಲಿ ಕೀಟಗಳು, ಮಿಡತೆಗಳು ಮತ್ತು ರೇಷ್ಮೆ ಹುಳುಗಳು ಸೇರಿದಂತೆ 16 ಜಾತಿಯ ಕೀಟಗಳನ್ನು ಮನುಷ್ಯರ ಆಹಾರವಾಗಿ ಬಳಸಬಹುದು ಅಂತಾ ಸಿಂಗಾಪುರ್ ಆಹಾರ ಸಂಸ್ಥೆ (SFA) ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಮಾನವರು ಆಹಾರವಾಗಿ ಸೇವಿಸಲು ಯೋಗ್ಯವಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು SFA ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳನ್ನು ಉದ್ದೇಶಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ.


ಇದನ್ನೂ ಓದಿ: 11ನೇ ಮಗುವಿಗೆ ತಂದೆಯಾದ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್‌..!


ಈ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಮಾನವ ಬಳಕೆಗಾಗಿ ಅಥವಾ ಆಹಾರ-ಉತ್ಪಾದಿಸುವ ಪ್ರಾಣಿಗಳಿಗೆ ಪಶು ಆಹಾರವಾಗಿ ಬಳಸಬಹುದು. 2022ರ ಅಂತ್ಯದಲ್ಲಿ ಕೀಟಗಳು ಮತ್ತು ಕೀಟ ಉತ್ಪನ್ನಗಳ ನಿಯಂತ್ರಣದ ಕುರಿತು SFA ಸಾರ್ವಜನಿಕ ಸಮಾಲೋಚನೆ ನಡೆಸಿದೆ.


ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಂದರೆ 2023ರ ದ್ವಿತೀಯಾರ್ಧದಲ್ಲಿ 16 ಜಾತಿಯ ಕೀಟಗಳು ಬಳಕೆಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್ ಸಿಗುತ್ತದೆ ಅಂತಾ ಸಂಸ್ಥೆ ಹೇಳಿಕೊಂಡಿತ್ತು. ಅದರಂತೆ ಇದೀಗ ಇವುಗಳನ್ನು ಆಹಾರವಾಗಿ ಬಳಸಬಹುದಾಗಿದೆ ಎಂದು SFA ತಿಳಿಸಿದೆ.  


ಇದನ್ನೂ ಓದಿ: ಇನ್ನೂ ಹೆಚ್ ಐವಿ ಸೋಂಕಿಗೆ ಭಯಪಡುವ ಅಗತ್ಯವಿಲ್ಲ, ಪರಿಹಾರ ಇಲ್ಲಿದೆ ನೋಡಿ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.