ಇಡೀ ವಿಶ್ವದಲ್ಲೇ ಟಿ20 ಸ್ವರೂಪದಲ್ಲಿ ದ್ವಿಶತಕ ಬಾರಿಸುವ ಸಾಮಾರ್ಥ್ಯ ಇರೋದು ಈ ಇಬ್ಬರಿಗೆ ಮಾತ್ರ! ಅವರಲ್ಲಿ ಒಬ್ಬ ಟೀಂ ಇಂಡಿಯಾದ ಸ್ಟಾರ್...

Double Centurion in T20 Format: ಫಿಂಚ್ 3 ಜುಲೈ 2018 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 172 ರನ್‌ʼಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಅನ್ನು ಆಡಿದ್ದರು. ಅಂದಿನಿಂದ 6 ವರ್ಷಗಳು ಕಳೆದಿವೆ. ಆದರೆ ಇದುವರೆಗೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಿಲ್ಲ.‌  

Written by - Bhavishya Shetty | Last Updated : Sep 8, 2024, 02:37 PM IST
    • ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ವೈಯಕ್ತಿಕ ಇನ್ನಿಂಗ್ಸ್
    • ಜಿಂಬಾಬ್ವೆ ವಿರುದ್ಧ 172 ರನ್‌ʼಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಅನ್ನು ಆಡಿದ್ದರು
    • ಈ ವಿಶ್ವ ದಾಖಲೆಯನ್ನು ಮುರಿಯುವ ಸಾಮಾರ್ಥ್ಯ ಹೊಂದಿರುವ ಇಬ್ಬರು
ಇಡೀ ವಿಶ್ವದಲ್ಲೇ ಟಿ20 ಸ್ವರೂಪದಲ್ಲಿ ದ್ವಿಶತಕ ಬಾರಿಸುವ ಸಾಮಾರ್ಥ್ಯ ಇರೋದು ಈ ಇಬ್ಬರಿಗೆ ಮಾತ್ರ! ಅವರಲ್ಲಿ ಒಬ್ಬ ಟೀಂ ಇಂಡಿಯಾದ ಸ್ಟಾರ್... title=
File Photo

Double Centurion in T20 Format: ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ದ್ವಿಶತಕ ಗಳಿಸಲು ಸಾಧ್ಯವಾಗಿಲ್ಲ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ವೈಯಕ್ತಿಕ ಇನ್ನಿಂಗ್ಸ್ ಆಡಿದ ವಿಶ್ವದಾಖಲೆಯು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಆರನ್ ಫಿಂಚ್ ಹೆಸರಿನಲ್ಲಿದೆ.

ಇದನ್ನೂ ಓದಿ: ಜಯ್‌ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್‌ ಆಯ್ತು ಕ್ರಿಕೆಟ್‌!

ಆರನ್ ಫಿಂಚ್ 3 ಜುಲೈ 2018 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 172 ರನ್‌ʼಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಅನ್ನು ಆಡಿದ್ದರು. ಅಂದಿನಿಂದ 6 ವರ್ಷಗಳು ಕಳೆದಿವೆ. ಆದರೆ ಇದುವರೆಗೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಿಲ್ಲ.‌

ಆದರೆ ಆರೋನ್ ಫಿಂಚ್ ಅವರ ಈ ವಿಶ್ವ ದಾಖಲೆಯನ್ನು ಮುರಿಯುವ ಸಾಮಾರ್ಥ್ಯ ಹೊಂದಿರುವ ಇಬ್ಬರು ಕ್ರಿಕೆಟಿಗರಿದ್ದಾರೆ. ಅವರು ಯಾರೆಂಬುದನ್ನು ತಿಳಿಯೋಣ.

ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾದ ಸ್ಫೋಟಕ ಕ್ರಿಕೆಟಿಗ ಮತ್ತು ಟಿ20 ಶ್ರೇಯಾಂಕದಲ್ಲಿ ವಿಶ್ವದ ಪ್ರಸ್ತುತ ನಂಬರ್-1 ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್, ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೆಡ್ ಆಸ್ಟ್ರೇಲಿಯಾ ಪರ 36 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 32.35 ಸರಾಸರಿ ಮತ್ತು 155.75 ಸ್ಟ್ರೈಕ್ ರೇಟ್‌ನಲ್ಲಿ 1003 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 91 ರನ್.

ಇದನ್ನೂ ಓದಿ: ಗುರು ಬ್ರಹಸ್ಪತಿಯಿಂದ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು.. ಕಂಡ ಕನಸೆಲ್ಲ ನನಸಾಗುವ ರಾಜಯೋಗ.. ಕಷ್ಟ ಮಾಯವಾಗಿ ಸಂಪತ್ತಿನ ಮಳೆಯಾಗಲಿದೆ !

ಸೂರ್ಯಕುಮಾರ್ ಯಾದವ್ (ಭಾರತ)
ಸೂರ್ಯಕುಮಾರ್ ಯಾದವ್ ಅವರು ಆರನ್ ಫಿಂಚ್ ಅವರ 172 ರನ್‌ʼಗಳ ವಿಶ್ವ ದಾಖಲೆಯನ್ನು ಮುರಿಯುವುದು ಮಾತ್ರವಲ್ಲದೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕವನ್ನು ಗಳಿಸಬಲ್ಲ್ಲ ಸಾಮಾರ್ಥ್ಯ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಎಬಿ ಡಿವಿಲಿಯರ್ಸ್ ಎಂದೂ ಕರೆಯುತ್ತಾರೆ. ಯಾದವ್ ಪ್ರಸ್ತುತ T20 ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರಾಗಿದ್ದಾರೆ. ಟೀಂ ಇಂಡಿಯಾ ಪರ 71 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 42.67 ಸರಾಸರಿ ಮತ್ತು 168.65 ಸ್ಟ್ರೈಕ್ ರೇಟ್‌ʼನಲ್ಲಿ 2432 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20ಯಲ್ಲಿ 4 ಶತಕ ಹಾಗೂ 20 ಅರ್ಧ ಶತಕ ಬಾರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News