ನವದೆಹಲಿ: ಅಮೆರಿಕಾದ ವಯಸ್ಕರಲ್ಲಿ ಅರ್ಧದಷ್ಟು ಜನರು ಮಂಗಳವಾರ ಪೂರ್ಣ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.


COMMERCIAL BREAK
SCROLL TO CONTINUE READING

ಆ ಮೂಲಕ ಈಗ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಮೇರಿಕಾ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ ಎಂದು ಹೇಳಿದೆ.ಈ ಕುರಿತಾಗಿ ಮಾತನಾಡಿರುವ ಶ್ವೇತ ಭವನದ ಅಧಿಕಾರಿಯೊಬ್ಬರು "ಇಂದು, ಅಮೇರಿಕಾ 50 ರಷ್ಟು ಅಮೆರಿಕನ್ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ-ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!


ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಕರೋನವೈರಸ್‌ (Coronavirus) ನಿಂದ ಸಾವನ್ನಪ್ಪಿದ್ದಾರೆ ಆದರೆ ದೇಶವು ಈಗ ವ್ಯಾಕ್ಸಿನೇಷನ್‌ಗಳನ್ನು ತಯಾರಿಸುವಲ್ಲಿ ವಿಶ್ವದ ಅಗ್ರಗಣ್ಯ ದೇಶವಾಗಿದೆ.ಯುಎಸ್ ತನ್ನ ಜನಸಂಖ್ಯೆಯ ಸುಮಾರು 332 ಮಿಲಿಯನ್ ಜನಸಂಖ್ಯೆಯನ್ನು ಕನಿಷ್ಠ ಒಂದು ಡೋಸ್ ನ್ನು ನೀಡಿದೆ ತಲುಪಿದೆ, ಆದರೆ ಅದರ ವ್ಯಾಕ್ಸಿನೇಷನ್ ಅಭಿಯಾನವು ಜನರ ಹಿಂಜರಿಕೆಯ ಹಿನ್ನೆಲೆಯಲ್ಲಿ ನಿಧಾನವಾಗುತ್ತಿದೆ.


ಇದನ್ನೂ ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು


ಅಧ್ಯಕ್ಷ ಜೋ ಬಿಡನ್ ಜುಲೈ 4 ರೊಳಗೆ ಶೇ 70 ರಷ್ಟು ವಯಸ್ಕರಿಗೆ ಕನಿಷ್ಠ ಒಂದು ಡೋಸ್ ಮೂಲಕ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದಾರೆ. ಪ್ರಸ್ತುತ ಅಂಕಿ-ಅಂಶವು ಸುಮಾರು 62 ರಷ್ಟಿದೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.