ಆಕ್ಲೆಂಡ್: ವಿಶ್ವದೆಲ್ಲೆಡೆ ಜನರು 2018ಕ್ಕೆ ವಿದಾಯ ಹೇಳಿ ಹೊಸ ವರ್ಷ 2019ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಗರ ಇತರ ದೇಶಗಳಿಗಿಂತ ಮೊದಲೇ 2019ಅನ್ನು ಸ್ವಾಗತಿಸಿ ಸಂಭ್ರಮಿಸಿದೆ. ಅದ್ಯಾವ ದೇಶ ಎಂದು ಆಲೋಚಿಸುತ್ತಿದ್ದಿರಾ? ಅದೇ ನ್ಯೂಜಿಲೆಂಡ್!


COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್ ನ ಆಕ್ಲೆಂಡ್'ನಲ್ಲಿ ಸಾವಿರಾರು ಜನರು ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು. ನ್ಯೂಜಿಲೆಂಡ್ ಬಳಿಕ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಸಿಡ್ನಿ ಒಪೇರಾ ಹೌಸ್'ನ ಪಟಾಕಿಗಳು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿವೆ. 


ವಿಶ್ವದ ಇತರ ದೇಶಗಳಂತೆ ಭಾರತದಲ್ಲಿಯೂ ಸಹ ಜನರು ಹೊಸ ವರ್ಷವನ್ನು ಸ್ವಾಗತಿಸಲು ಉತ್ಸುಕರಾಗಿ ಕಾಯುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಈಗಾಗಲೇ 2019ರ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ.