ನವದೆಹಲಿ: Harassment In Google Office - ದಿಗ್ಗಜ ಟೆಕ್ ಕಂಪನಿ ಗೂಗಲ್ (Harassment) ಹಾಗೂ ಅಲ್ಫಾಬೆಟ್ ಸಿಇಓ ಆಗಿರುವ  ಸುಂದರ್ ಪಿಚೈ (Sunder Pichai) ಅವರಿಗೆ ಪತ್ರಬರೆದಿರುವ ಕಂಪನಿಯ ಸುಮಾರು 500 ನೌಕರರು, ಗೂಗಲ್ ಕಚೇರಿಯಲ್ಲಿ ನಡೆಯುತ್ತಿರುವ ಕಿರುಕುಳದ (Harassment) ಕುರಿತು ದೂರು ನೀಡಿದ್ದಾರೆ ಹಾಗೂ ಕಿರುಕುಳ ಅನುಭವಿಸುತ್ತಿರುವವರಿಗೆ ರಕ್ಷಣೆ ನೀಡಿ, ಕೆಲಸಕ್ಕಾಗಿ ಶಾಂತಿಯುತ ವಾತಾವರಣ ಒದಗಿಸುವಂತೆ ಮನವಿ ಮಾಡಿದ್ದಾರೆ. ಗೂಗಲ್ ನಲ್ಲಿ ಈ ಮೊದಲು ಇಂಜಿನೀರ್ ಆಗಿ ಕಾರ್ಯನಿರ್ವಹಿಸಿದ್ದ  ಏಮಿ ನೆಟ್ ಫೀಲ್ಡ್ (Emi Nietfeld) 'ದಿ ನ್ಯೂಯಾರ್ಕ್ ಟೈಮ್ಸ್' (The New York Times) ಗೆ ಬರೆದ ತನ್ನ ಓಪಿನಿಯನ್ ಪೀಸ್ ನಲ್ಲಿ 'ತನಗೆ ಆ ವ್ಯಕ್ತಿಯ ಜೊತೆಗೆ ಒಂದಾದ ಮೇಲೊಂದರಂತೆ ಮೀಟಿಂಗ್ ನಡೆಸಲು ಒತ್ತಾಯಿಸಲಾಗುತ್ತಿತ್ತು ಮತ್ತು ಆ ವ್ಯಕ್ತಿ ತನಗೆ ಕಿರುಕುಳ ನೀಡುತ್ತಿದ್ದ' ಎಂದು ಉಲ್ಲೇಖಿಸಿದ್ದಾರೆ. ಎಮಿಯ ಈ ಒಪೀನಿಯನ್ ಪೀಸ್ ಬಳಿದ ಪ್ರಕರಣ ಕಾವು ಹೆಚ್ಚಿಸತೊಡಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಭೂಕಂಪದ ಮುನ್ನೆಚ್ಚರಿಕೆಗಾಗಿ Google ಹೊಸ ಯೋಜನೆ, ಸುಂದರ್ ಪಿಚೈ ಘೋಷಣೆ


ಏಮಿ ಇದನ್ನೂ ಕೂಡ ಉಲ್ಲೇಖಿಸಿದ್ದಾರೆ
ತಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಇಂದಿಗೂ ಕೂಡ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಾನೆ. ಆದರೆ, ಕಂಪನಿಯ HR ಆತನ ಡೆಸ್ಕ್ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತಮ್ಮ ಮ್ಯಾನೇಜರ್ ಮೂಲಕ ತಮಗೆ ತಲುಪಿಸಲಾಗಿದ್ದು, ರಜೆಯ ಮೇಲೆ ಹೋಗಿ ಇಲ್ಲದೆ ಮನೆಯಿಂದ ಕಾರ್ಯನಿರ್ವಹಿಸಿ ಎಂದು ತಮಗೆ ಸೂಚಿಸಲಾಯಿತು ಎಂದು ಏಮಿ ತಮ್ಮ ಓಪಿನಿಯನ್ ಪೀಸ್ ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದುವರೆಗೆ ಗೂಗಲ್ ವತಿಯಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿಲ್ಲ  ಹಾಗೂ ಕಂಪನಿ ಇದುವರೆಗೆ ಈ ಸಂಪೂರ್ಣ ಪ್ರಕರಣದಲ್ಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. 


ಇದನ್ನೂ ಓದಿ- ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ Google, PM Modi ಜೊತೆಗೆ ಚರ್ಚೆಯ ಬಳಿಕ ಸುಂದರ್ ಪಿಚೈ ಘೋಷಣೆ


ಕಂಪನಿಯ ನೌಕರರು ಸುಂದರ್ ಪಿಚೈ ಅವರಿಗೆ ಬರೆದ ಪತ್ರದಲ್ಲಿ 'ಅಲ್ಫಾಬೆಟ್ ನ ಸುಮಾರು 20 ಸಾವಿರಕ್ಕೂ ಹೆಚ್ಚು ನೌಕರರ ಮೂಲಕ ಲೈಂಗಿಕ ಕಿರುಕುಳಕ್ಕೆ (Sexual Harassment) ವಿರೋಧ ವ್ಯಕ್ತವಾದ ಮೇಲೂ ಕಿರುಕುಳಕ್ಕೆ ಒಳಗಾದ ವ್ಯಕ್ತಿಗೆ ರಕ್ಷಣೆ ನೀಡಿದ ಬಳಿಕವೂ ಅಲ್ಫಾಬೆಟ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಹಾಗೂ ಇದು ಗೂಗಲ್ ನಿಯಮಗಳ ಪರಿಪಾಲನೆಯ ನಿಟ್ಟಿನಲ್ಲಿ ವ್ಯರ್ಥ ಪ್ರಯತ್ನವಾಗಿದೆ. ಕಿರುಕುಳ ನೀಡಲಾಗಿರುವ ಕುರಿತು ದೂರು ನೀಡಿದ ವ್ಯಕ್ತಿಗೆ ಒತ್ತಡ ಸಹಿಸಲು ಬಲವಂತಪಡಿಸಲಾಗಿದೆ. ಬಳಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿ ಕಛೇರಿಯನ್ನೇ ತೊರೆಯುತ್ತಾನೆ ಹಾಗೂ ಕಿರುಕುಳ ನೀಡಿದ ವ್ಯಕ್ತಿ ಮಾತ್ರ ಅಲ್ಲಿಯೇ ಉಳಿಯುತ್ತಾನೆ ಅಥವಾ ಆತನ ಕೃತ್ಯಕ್ಕೆ ಆತನಿಗೆ ಗೌರವಿಸಲಾಗುತ್ತದೆ. ಎಫ್ಲೇವೇಟ್ ನೌಕರರು ಕಿರುಕುಳ ಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಬಯಸುತ್ತಾರೆ . ಕಿರುಕುಳಕ್ಕೆ ಒಳಗಾದವರ ಚಿಂತೆಗೆ ಆದ್ಯತೆ ನೀಡಿ, ಕಂಪನಿ ತನ್ನ ನೌಕರರಿಗೆ ಸಂರಕ್ಷಣೆ ಒದಗಿಸುವತ್ತ ಗಮನಹರಿಸಬೇಕು  ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ- ವಿಶ್ವದ ಅತಿ ಹೆಚ್ಚು ವೇತನ ಪಡೆದ CEO ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲಕ Sundar Pichai


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.