COVID-19: ಕೊರೋನಾದಿಂದ ಬರುತ್ತೆ `ಶ್ರವಣ ದೋಷ` ತೊಂದ್ರೆ: ರಿಸರ್ಚ್ ನಿಂದ ಹೊರ ಬಿತ್ತು ಸತ್ಯ!
ವಣ ದೋಷದ ಮೇಲೆ ಕೊರೋನಾ ನೇರ ಪರಿಣಾಮ ಬಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರುವುದು ಬಹಳ ಉತ್ತಮ ಎಂದು ಹೇಳಿದ್ದಾರೆ.
ನಾವೆಲ್ ಸ್ಟಡಿ ಅಸೋಸಿಯೇಟ್ ಸಂಸ್ಥೆ ನಡೆಸಿದ ಅಧ್ಯಯನದಿಂದ ಕೋವಿಡ್-19 ನಿಂದ ಶ್ರವಣ ದೋಷ ಉಂಟಾಗುತ್ತದೆ ಎಂಬ ಸತ್ಯ ಬಹಿರಂಗವಾಗಿದೆ. ಇದು ಅಷ್ಟೇ ಅಲ್ಲದೆ, ಕಿವಿಗೆ ಸಂಬಂದಿತ ಸಮಸ್ಯೆಗೆಯಲು ಕೂಡ ಬರುತ್ತೆ ಎಂದು ವರದಿ ಹೇಳಿದೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ದಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಡಿಯೋಲಾಜಿ ಎಂಬ ಸಂಸ್ಥೆ ಮತ್ತು ಎನ್‌ಐಹೆಚ್ಆರ್ ಮ್ಯಾಂಚೆಸ್ಟರ್ ಬಯೋಮೆಡಿಕಲ್ ರಿಸರ್ಚ್ ಸೆಂಟರ್ (BRC) ವಿಜ್ಞಾನಿಗಳು ಈ ಸಂಶೋಧನೆಯ ನೇತೃತ್ವ ವಹಿಸಿದ್ದಾರೆ.
ಪ್ರೊಫೆಸರ್ ಕೆವಿನ್ ಮುನ್ರೊ ಮತ್ತು ಪಿಎಚ್‌ಡಿ ಸಂಶೋಧಕ ಇಬ್ರಾಹಿಂ ಅಲ್ಮುಫಾರಿಜ್ ಅವರು ಈ ಕುರಿತಂತೆ 56 ಅಧ್ಯಯನ ವರದಿಗಳನ್ನ ಕಂಡುಹಿಡಿದಿದ್ದಾರೆ, ಅದು COVID-19 ಮತ್ತು ಕಿವಿಗೆ ಸಂಬಂದಿಸಿದ ಮತ್ತು ವೆಸ್ಟಿಬುಲರ್ ಸಮಸ್ಯೆಗಳ ನಡುವಿನ ಸಂಬಂಧವನ್ನು ಗುರುತಿಸಿದೆ. ಕರೋನಾ(Corona)ದಿಂದ ಶ್ರವಣ ದೋಷ ಸಮಸ್ಯೆ ಪ್ರಮಾಣವು ಶೇಕಡಾ 7.6, ಟಿನ್ನಿಟಸ್ ಶೇಕಡಾ 14.8 ಮತ್ತು ವರ್ಟಿಗೋ ಶೇಕಡಾ 7.2 ಎಂದು ಅಂದಾಜು ಮಾಡಿ. ಈ ಕುರಿತು 24 ಅಧ್ಯಯನದ ದತ್ತಾಂಶಗಳನ್ನ ಸಂಗ್ರಹಿಸಿದ್ದಾರೆ.
Indonesia: ಭಾರೀ ಮಳೆ ಪ್ರವಾಹದಿಂದಾಗಿ 23 ಮಂದಿ ಸಾವು
ಈ ಕುರಿತಂತೆ ಒಂದು ವರ್ಷದ ಹಿಂದೆ ನಡೆಸಿದ ವಿಮರ್ಶೆಯನ್ನು ಅನುಸರಿಸಿದ ತಂಡ - ಅಧ್ಯಯನ(Study)ಗಳ ವರದಿ ದತ್ತಾಂಶ ಎಲ್ಲವೂ ಸರಿಯಾಗಿದೆ ಎಂದು ವಿವರಿಸಿದೆ. ಅವರ ಡೇಟಾವು ಪ್ರಾಥಮಿಕವಾಗಿ ಹೆಚ್ಚು ವೈಜ್ಞಾನಿಕವಾಗಿ ವಿಶ್ವಾಸಾರ್ಹ ಶ್ರವಣ ಪರೀಕ್ಷೆಗಳಿಗಿಂತ ಹೆಚ್ಚಾಗಿ ಕರೋನಾ ಸಂಬಂಧಿತ ರೋಗಲಕ್ಷಣಗಳನ್ನು ಪಡೆಯಲು ಸ್ವಯಂ-ವರದಿ ಮಾಡಿದ ಪ್ರಶ್ನಾವಳಿಗಳು ಅಥವಾ ವೈದ್ಯಕೀಯ ದಾಖಲೆಗಳನ್ನು ಬಳಸಿಕೊಂಡಿದ್ದಾರೆ.
Britain: Astrazeneca ದಿಂದ ರಕ್ತ ಹೆಪ್ಪುಗಟ್ಟುವಿಕೆ, ಲಸಿಕೆಯ ಬಳಕೆ ಮುಂದುವರೆಸಲು ಸೂಚಿಸಿದ WHO
ಎನ್ಐಹೆಚ್ಆರ್ ಮ್ಯಾಂಚೆಸ್ಟರ್ ಬಯೋಮೆಡಿಕಲ್ ರಿಸರ್ಚ್ ಸೆಂಟರ್ (ಬಿಆರ್ಸಿ) ಈ ಅಧ್ಯಯನಕ್ಕೆ ಧನಸಹಾಯ ನೀಡಿದೆ. ದಿ ಯೂನಿವರ್ಸಿಟಿ ಆಫ್ ಮ್ಯಾಂಚೆಸ್ಟರ್(The University of Manchester) ಮತ್ತು ಮ್ಯಾಂಚೆಸ್ಟರ್ ಬಿಆರ್ಸಿ ಹಿಯರಿಂಗ್ ಹೆಲ್ತ್ ಲೀಡ್ ನ ಆಡಿಯಾಲಜಿ ಪ್ರಾಧ್ಯಾಪಕ ಕೆವಿನ್ ಮುನ್ರೊ, "ಕರೋನಾದಿಂದ ಕಿವಿಗೆ ಸಂಬಂಧಿತ ದೀರ್ಘಕಾಲೀನ ಸಮಸ್ಯೆಗಳು ಬರುತ್ತೇವೆ ಆದ್ದರಿಂದ ಜನರು ಆದಷ್ಟು ಎಚ್ಚರಿಕೆಯಿಂದ ಇರುವುದು ಬಹಳ ಒಳ್ಳೆಯದು. ಅಲ್ಲದೆ ಜನರಿಗೆ ಕ್ಲಿನಿಕಲ್ ಮತ್ತು ಡಯಾಗ್ನೋಸ್ಟಿಕ್ ಅಧ್ಯಯನದ ತುರ್ತು ಅವಶ್ಯಕತೆಯಿದೆ" ಎಂದು ಅವರು ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ AstraZeneca ಲಸಿಕೆ ಪಡೆದ ಏಳು ಜನರು ಸಾವು
"ದಡಾರ, ಮಂಪ್ಸ್ ಮತ್ತು ಮೆನಿಂಜೈಟಿಸ್‌ನಂತಹ ವೈರಸ್(Virus)ಗಳು ಶ್ರವಣ ದೋಷ ಉಂಟುಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ; SARS-CoV-2 ವೈರಸ್‌ನ ಶ್ರವಣೇಂದ್ರಿಯ ಪರಿಣಾಮಗಳ ಬಗ್ಗೆ ಸರಿಯಾಗಿ ತಿಳಿದು ಬರುತ್ತಿಲ್ಲ" ಎಂದು ಮುನ್ರೋ ಹೇಳಿದ್ದಾರೆ.
ಮುನ್ರೊ ಅವರು, "ಈ ಅಧ್ಯಯನ ವಿಮರ್ಶೆಯ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆಯಾದರೂ, ನಾವು ನೋಡಿದ ಅಧ್ಯಯನಗಳು ವಿಭಿನ್ನ ಗುಣಮಟ್ಟದ್ದಾಗಿವೆ, ಆದ್ದರಿಂದ ಈ ಕುರಿತು ನಾವು ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ" ಎಂದು ಹೇಳಿದ್ದಾರೆ.
Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ
ಪ್ರಸ್ತುತ ಪ್ರೊಫೆಸರ್ ಮುನ್ರೊ ಅವರು ಈ ಕುರಿತು ಒಂದು ವರ್ಷದ ಮಟ್ಟಿಗೆ ಯುಕೆಯಲ್ಲಿ ಅಧ್ಯಯನ ಮುಂದುವರೆಡಸಲಿದ್ದಾರೆ. ಕೊರೋನಾದಿಂದ ಆಸ್ಪತ್ರೆ(Hospital)ಯಲ್ಲಿ ಚಿಕಿತ್ಸೆ ಪಡೆದ ಜನರಲ್ಲಿ ಶ್ರವಣ ದೋಷದ ಸಮಸ್ಯೆ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಯುಕೆ(UK)ಯಲ್ಲಿ ಕೊರೋನಾದಿಂದ ಶ್ರವಣ ದೋಷ(Hearing Loss) ಸಂಬಂಧಿತ ಸಮಸ್ಯೆಗಳಿಗೆ ಒಳಗಾದವರ ಸಂಖ್ಯೆ ಹೆಚ್ಚಿದೆ ಮತ್ತು ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಏರುತ್ತಿದೆ. ಕೊರೋನಾ ಮನುಷ್ಯನ ದೇಹದ ಯಾವ ಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು ನಿಖರವಾಗಿ ತಿಳಿದು ಬಂದಿಲ್ಲ. ಈ ಕುರಿತು ರಿಸರ್ಚ್ ತಂಡ ಕಾರ್ಯನಿರತವಾಗಿದೆ.
ಭಾರತದ ಜೊತೆಗಿನ ವ್ಯಾಪಾರ ಪುನರಾರಂಭದ ವಿಚಾರವಾಗಿ ಯೂಟರ್ನ್ ಹೊಡೆದ ಪಾಕ್
ಇಬ್ರಾಹಿಂ ಅಲ್ಮುಫಾರಿಜ್, "ಕೊರೋನಾ ಕುರಿತು ಮಾಡಿದ ಅಧ್ಯನದ ವರದಿಗಳು ವಿಭಿನ್ನ ಗುಣಮಟ್ಟದ್ದಾಗಿದ್ದರೂ, ಈ ಕುರಿತು ಇನ್ನೂ ಅಧ್ಯಯನಗಳು ನಡೆಯುತ್ತಿವೆ ಆದ್ದರಿಂದ ಸಾಕ್ಷ್ಯಗಳ ಆಧಾರವು ಬೆಳೆಯುತ್ತಿದೆ.
ನಮಗೆ ನಿಜವಾಗಿಯೂ ಬೇಕಾಗಿರುವುದು ಕೊರೋನಾ ನಿಯಂತ್ರಣದ ಜೊತೆಗೆ ನಿರ್ಧಿಷ್ಟ ಹೋಲಿಕೆಯ ಅಧ್ಯಯನಗಳು ಬೇಕಾಗಿವೆ. ಉದಾಹರಣೆಗೆ ಆಸ್ಪತ್ರೆಗೆ ದಾಖಲಾದ ರೋಗಿಗಳು ಇತರರ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಕೂಡ ನಿಗಾವಹಿಸಬೇಕು. ಇದು ಅಲ್ಲದೆ ಈ ರೋಗದ ಕುರಿತು ಎಚ್ಚರಿಕೆವಸಬೇಕು, ಈ ಅಧ್ಯಯನವು ಕೋವಿಡ್ -19 ಮತ್ತು ಶ್ರವಣ ಸಮಸ್ಯೆಗಳ ನಡುವೆ ಬಲವಾದ ಸಂಬಂಧವಿದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಅಲ್ಮುಫಾರಿಜ್ ಹೇಳಿದ್ದಾರೆ.
Covid 19: ತಾರಕಕ್ಕೇರಿದ ಕರೋನಾ, ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್ ಘೋಷಣೆ
ಪ್ರೊಫೆಸರ್ ಮುನ್ರೊ ಅವರು, "ಕಳೆದ ಕೆಲವು ತಿಂಗಳುಗಳಲ್ಲಿ ನಾನು ಕೊರೋನಾ ರೋಗಿಗಳಿಂದ ಸುಮಾರು ವರದಿಗಳನ್ನು ಪಡೆದು ಅಧ್ಯಯನವನ್ನು ಮಾಡಿದ್ದೇನೆ. ಅಲ್ಲದೆ ಈ ಸಮಸ್ಯೆಗಳ ಕುರಿತು ನಾನು ಹಲವಾರು ಇ-ಮೇಲ್ ಗಳು ಕೂಡ ಬಂದಿವೆ. ಇದು ಬಹಳ ಆತಂಕಕಾರಿ ವಿಷಯವಾಗಿದೆ. ಶ್ರವಣ ದೋಷದ ಮೇಲೆ ಕೊರೋನಾ ನೇರ ಪರಿಣಾಮ ಬಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರುವುದು ಬಹಳ ಉತ್ತಮ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.