Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ

ಕಳೆದ 28 ವರ್ಷಗಳಿಂದ ಅಮೆರಿಕ ರಾಜ್ಯ ಅಲಬಾಮಾದಲ್ಲಿ ಯೋಗವನ್ನು ನಿಷೇಧಿಸಲಾಗಿದೆ. ಯೋಗ ಮಾಡುವುದರಿಂದ ಹಿಂದೂ ಧರ್ಮವನ್ನು ಉತ್ತೇಜಿಸುತ್ತದೆ ಎಂದು ಅಲ್ಲಿನ ಸಾಂಪ್ರದಾಯಿಕ ಕ್ರೈಸ್ತರು ಹೇಳುತ್ತಾರೆ.  

Written by - Yashaswini V | Last Updated : Apr 2, 2021, 10:30 AM IST
  • ಸಾಂಪ್ರದಾಯಿಕ ಕ್ರಿಶ್ಚಿಯನ್ನರು ಯೋಗವನ್ನು ವಿರೋಧಿಸಿದರು
  • 1993 ರಿಂದ ಅಲಬಾಮಾ ರಾಜ್ಯದಲ್ಲಿ ಯೋಗ ನಿಷೇಧಿಸಲಾಗಿದೆ
  • ಯೋಗ ಕುರಿತ ಮಸೂದೆಯನ್ನು ಸೆನೆಟ್ನಲ್ಲಿ ಪರಿಚಯಿಸಲಾಗಿದೆ
Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ title=
Yoga has been banned in the US state of Alabama

ವಾಷಿಂಗ್ಟನ್: ಯೋಗಾಸನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಯುಎಸ್ ರಾಜ್ಯವಾದ ಅಲಬಾಮಾದಲ್ಲಿ ಕಳೆದ 28 ವರ್ಷಗಳಿಂದ ಯೋಗ (Yoga) ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ಈಗಲೂ ಕೂಡ ಯೋಗ ನಿರ್ಬಂಧಗಳು ಮುಂದುವರಿಯಲಿವೆ. ಸರ್ಕಾರಿ ಶಾಲೆಗಳಲ್ಲಿ ಯೋಗ ನಿಷೇಧವನ್ನು ತೆಗೆದುಹಾಕುವ ಸಾಧ್ಯತೆಯಿದ್ದ ಯೋಗ ಮಸೂದೆಯನ್ನು ಅಂಗೀಕರಿಸುವುದನ್ನು ಅಲಬಾಮಾ ರಾಜ್ಯವು ತಡೆಹಿಡಿದಿದೆ.

ಸಾಂಪ್ರದಾಯಿಕ ಕ್ರಿಶ್ಚಿಯನ್ನರಿಂದ ಯೋಗಕ್ಕೆ ವಿರೋಧ:
ಮಾಧ್ಯಮ ವರದಿಯ ಪ್ರಕಾರ, ಆರ್ಥೊಡಾಕ್ಸ್ ಕ್ರಿಶ್ಚಿಯನ್ ಗುಂಪುಗಳ ಆಕ್ಷೇಪಣೆಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಅವರು ಯೋಗದ (Yoga) ಸೋಗಿನಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಕ್ರಿಶ್ಚಿಯನ್ನರನ್ನು ಮತಾಂತರಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ.

1993 ರಿಂದ ಅಲಬಾಮಾ ರಾಜ್ಯದಲ್ಲಿ ಯೋಗ ನಿಷೇಧಿಸಲಾಗಿದೆ:
ಸಂಪ್ರದಾಯವಾದಿ ಗುಂಪುಗಳ ಒತ್ತಡದ ಮೇರೆಗೆ ಅಲಬಾಮಾ ಶಿಕ್ಷಣ ಮಂಡಳಿಯು 1993 ರಲ್ಲಿ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನವನ್ನು ನಿಷೇಧಿಸಿತು. ಅಂದಿನಿಂದ, ಅಲ್ಲಿ ಯೋಗವನ್ನು ನಿಷೇಧಿಸಲಾಗಿದೆ. ಈ ನಿಷೇಧವನ್ನು ತೆಗೆದುಹಾಕಲು, ಕಳೆದ ವರ್ಷ ಮಾರ್ಚ್ನಲ್ಲಿ, ಅಲಬಾಮಾ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 17 ವಿರುದ್ಧ 84 ಮತಗಳಿಂದ 'ಯೋಗ ಮಸೂದೆಯನ್ನು' ಅಂಗೀಕರಿಸಿತು.

ಇದನ್ನೂ ಓದಿ - Weight Loss: ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಅಭ್ಯಾಸಗಳನ್ನು ಇಂದೇ ಬಿಡಿ

ಯೋಗ ಕುರಿತ ಮಸೂದೆಯನ್ನು ಸೆನೆಟ್ನಲ್ಲಿ ಪರಿಚಯಿಸಲಾಗಿದೆ:
ಮಸೂದೆಯನ್ನು ರಾಜ್ಯ ಸೆನೆಟ್ನಲ್ಲಿ ಕಾನೂನಿನ ರೂಪವನ್ನು ನೀಡಲು ಪರಿಚಯಿಸಲಾಯಿತು, ಆದರೆ ಅಲ್ಲಿನ ಸಾಂಪ್ರದಾಯಿಕ ಕ್ರಿಶ್ಚಿಯನ್ (Christian) ನಾಯಕರು ಇದನ್ನು ವಿರೋಧಿಸಲು ಪ್ರಾರಂಭಿಸಿದರು. ಟಸ್ಕಲೂಸಾ ನ್ಯೂಸ್.ಕಾಮ್ ಪ್ರಕಾರ, ಮಾಜಿ ಅಲಬಾಮಾ ಮುಖ್ಯ ನ್ಯಾಯಮೂರ್ತಿ ರಾಯ್ ಮೂರ್ ಅವರ ನೈತಿಕ ಕಾನೂನು ಮತ್ತು ಇತರ ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಈ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಮಸೂದೆ ಜಾರಿಗೆ ಬಂದ ನಂತರ ರಾಜ್ಯದ ಸರ್ಕಾರಿ ಶಾಲೆಗಳ (Government Schools) ಮತಾಂತರ ಹೆಚ್ಚಾಗುತ್ತದೆ ಎಂದು ಸಂಪ್ರದಾಯವಾದಿಗಳು ಪ್ರತಿಪಾದಿಸಿದರು ಎನ್ನಲಾಗಿದೆ.

ಮಸೂದೆಯನ್ನು ವಿರೋಧಿಸಿದ ಸಂಪ್ರದಾಯವಾದಿ ಕ್ರಿಶ್ಚಿಯನ್ ನಾಯಕ ಬೆಕಿ ಗೆರಿಟ್ಸೆನ್, ಯೋಗವು ಹಿಂದೂ ಧರ್ಮದ ದೊಡ್ಡ ಭಾಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯೋಗದ ಮೇಲಿನ ನಿಷೇಧ ತೆಗೆದುಹಾಕುವುದರಿಂದ ದೇಶದಲ್ಲಿ ಹಿಂದೂ ಧರ್ಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಸುದ್ದಿಗಳ ಪ್ರಕಾರ, ಇದು ಶಾಲೆಗಳಲ್ಲಿ ಹಿಂದೂ ಧರ್ಮವನ್ನು ಆಚರಣೆಗೆ ತರುತ್ತದೆ ಮತ್ತು ಮಕ್ಕಳು ತಮ್ಮ ಧರ್ಮದಿಂದ ವಿಮುಖರಾಗುತ್ತಾರೆ ಎಂದು ಹೇಳುವ ಮಸೂದೆಯನ್ನು ಕ್ರಿಶ್ಚಿಯನ್ ಗುಂಪುಗಳು ವಿರೋಧಿಸುತ್ತಿವೆ ಎಂದು ಹೇಳಿದರು.

'ನಾನು ಪ್ರತಿದಿನ ಯೋಗ ಮಾಡುತ್ತೇನೆ'- ಶಾಸಕ
ಅದೇ ಸಮಯದಲ್ಲಿ, ಮಸೂದೆಯನ್ನು ಪರಿಚಯಿಸಿದ ಡೆಮಾಕ್ರಟಿಕ್ ಪಕ್ಷದ ಶಾಸಕ ಜೆರೆಮಿ ಗ್ರೇ, ಹಿಂದೂ ಧರ್ಮದ ಅನುಯಾಯಿಗಳು ಅದರಿಂದ ಮತಾಂತರಗೊಳ್ಳಲು ಪ್ರಾರಂಭಿಸುತ್ತಾರೆ ಎಂಬ ಕಲ್ಪನೆಯನ್ನು ನಿರಾಕರಿಸಿದರು. ಸಾಂಪ್ರದಾಯಿಕ ಕ್ರೈಸ್ತರನ್ನು ವಿರೋಧಿಸಿದ ಅವರು, 'ನಾನು ಸುಮಾರು 10 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ನಾನು ಐದು ವರ್ಷಗಳಿಂದ ತರಗತಿಗಳಲ್ಲಿ ಯೋಗ ಕಲಿಸಿದ್ದೇನೆ. ನಾನು ಇನ್ನೂ ಪ್ರತಿ ಭಾನುವಾರ ಬ್ಯಾಪ್ಟಿಸ್ಟ್ ಚರ್ಚ್‌ಗೆ ಹೋಗುತ್ತೇನೆ' ಎಂದು ವಾದಿಸಿದ್ದಾರೆ.

ಇದನ್ನೂ ಓದಿ - VIDEO: "ಯೋಗವನ್ನು ಜೀವನದ ಒಂದು ಅವಿಭಾಜ್ಯ ಅಂಗವಾಗಿಸಿ"; ದೇಶದ ಜನತೆಗೆ ಮೋದಿ ಸಲಹೆ

ಮಸೂದೆಯ ಮೇಲಿನ ಕ್ರಮವನ್ನು ಸೆನೆಟ್ ನಿಲ್ಲಿಸುತ್ತದೆ:
ಮಾಧ್ಯಮ ವರದಿಗಳ ಪ್ರಕಾರ, ಅಲಬಾಮಾದ ಸರ್ಕಾರಿ ಶಾಲೆಗಳಲ್ಲಿ ಯೋಗವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡುವ ಆಯ್ಕೆಯನ್ನು ನೀಡುವುದು ಈ ಮಸೂದೆಯ ಗುರಿಯಾಗಿದೆ. ಈ ಮಸೂದೆ ಜಾರಿಗೆ ಬಂದರೆ, 28 ವರ್ಷದ ಹಳೆಯ ನಿರ್ಬಂಧಗಳು ಕೊನೆಗೊಳ್ಳುತ್ತಿದ್ದವು. ಆದಾಗ್ಯೂ, ಆರ್ಥೊಡಾಕ್ಸ್ ಕ್ರಿಶ್ಚಿಯನ್ನರ ಈ ತೀವ್ರ ವಿರೋಧದ ನಂತರ, ಸೆನೆಟ್ನ ನ್ಯಾಯಾಂಗ ಸಮಿತಿಯು ಈ ಮಸೂದೆಯ ಕುರಿತು ಮುಂದಿನ ಕ್ರಮವನ್ನು ಸದ್ಯಕ್ಕೆ ತಡೆಹಿಡಿದಿದೆ.

ಯೋಗದ ಬಗ್ಗೆ ಕಾನೂನು ಆಗುವ ಭರವಸೆಗಳಿವೆ:
ಎರಡೂ ಕಡೆಗಳಲ್ಲಿ ನಡೆಯುತ್ತಿರುವ ಚರ್ಚೆಯ ಮಧ್ಯೆ, ಸೆನೆಟ್ ನ್ಯಾಯಾಂಗ ಸಮಿತಿ ಅಧ್ಯಕ್ಷ ಟಾಮ್ ವಾಟ್ಲಿ ಈ ವಿಷಯವನ್ನು ಮರುಪರಿಶೀಲಿಸಲು ಒಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಮಸೂದೆಯನ್ನು ಸೆನೆಟ್ನಲ್ಲಿ ಮತ್ತೆ ಪರಿಚಯಿಸಬಹುದು. ಇದರರ್ಥ ಮುಂದಿನ ದಿನಗಳಲ್ಲಿ ಸೆನೆಟ್ನಲ್ಲಿ ಮಸೂದೆಯ ಪರವಾಗಿ ಮತ ಚಲಾಯಿಸಬಹುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News