ನವದೆಹಲಿ:  Honda CD 100 - ಹೀರೋ ಮೋಟೋಕಾರ್ಪ್ (Hero Moto Corp) ಮತ್ತು ಹೋಂಡಾ (Honda) ಪಾಲುದಾರಿಕೆಯ ನಂತರ ಭಾರತೀಯ ಮಾರುಕಟ್ಟೆಯಲ್ಲಿ Hero Honda CD 100 ಪಾಲುದಾರ ಕಂಪನಿಯ ಮೊದಲ ಉತ್ಪನ್ನವಾಗಿತ್ತು. ಈ ಮೋಟಾರ್‌ಸೈಕಲ್ ಎಷ್ಟು ಶಕ್ತಿಯುತವಾಗಿತ್ತು ಎಂದರೆ ಪ್ರತಿಯೊಬ್ಬ ಭಾರತೀಯನೂ ಯಾವುದಾದರೂ ಒಂದು ಹಂತದಲ್ಲಿ ಅದನ್ನು ಖರೀದಿಸುವ ಕನಸು ಕಾಣುತ್ತಿದ್ದನು. ಆ ಕಾಲದ ಐಕಾನಿಕ್ ಬೈಕ್, ಅದರ ದೃಢತೆ ಮತ್ತು ಕೈಗೆಟಕುವ ಬೆಲೆಗೆ ಜನರಿಗೆ ಈ ಬೈಕ್ ಭಾರಿ ಇಷ್ಟವಾಗಿತ್ತು ಈ ಬೈಕ್ ಹೀರೋ ಸ್ಪ್ಲೆಂಡರ್‌ನಂತೆಯೇ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಇದೀಗ ಹೋಂಡಾ ಈ ಮೋಟಾರ್‌ಸೈಕಲ್ ಅನ್ನು ಚೀನಾದಲ್ಲಿ ಮರಳಿ ಬಿಡುಗಡೆ ಮಾಡಿದೆ. ಇದನ್ನು ಹೋಂಡಾ ಸಿಜಿ 125 ಸ್ಪೆಷಲ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-PM Mudra Yojana : ಸ್ವಂತ ಉದ್ಯೋಗಕ್ಕೆ ಸರ್ಕಾರ ನೀಡುತ್ತಿದೆ ₹10 ಲಕ್ಷ : 10 ದಿನಗಳಲ್ಲಿ ಕೈಗೆ ಸಿಗುತ್ತೆ ಹಣ!


ಬೆಲೆ ಸುಮಾರು 89, 800 ರೂ.
ಜಪಾನ್‌ನ ಬೈಕ್ ತಯಾರಕ ಹೋಂಡಾದ ಚೀನಾ ಅಂಗ ಸಂಸ್ಥೆಯಾಗಿರುವ ವುಯಾಂಗ್ ಹೋಂಡಾ ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ CG125 (Honda CG125) ಸ್ಪೆಷಲ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯನ್ನು 7,480 ಚೈನೀಸ್ ಯುವಾನ್ (ಸುಮಾರು ರೂ 89,800) ಇರಿಸಲಾಗಿದೆ, ಇದು ಪ್ರಮಾಣಿತ ರೂಪಾಂತರಕ್ಕಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಈ ವಿಶೇಷ ಆವೃತ್ತಿಯನ್ನು ಹಳೆಯ ರೆಟ್ರೊ ಸ್ಟೈಲ್ ನಲ್ಲಿ ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಇದು ಭಾರತದಲ್ಲಿ ಮಾರಾಟವಾಗುವ ಹೋಂಡಾ ಹೈನೆಸ್ CB350 ಗೆ ಹೋಲುತ್ತದೆ. ಬೈಕ್‌ಗೆ (Honda Bikes) ಸಿಂಗಲ್ ಪೀಸ್ ಸೀಟ್, ಫೋರ್ಕ್ ಗೆಟರ್‌ಗಳು, ಬ್ಲ್ಯಾಕ್ಡ್ ಔಟ್ ಫೆಂಡರ್‌ಗಳು, ಎಂಜಿನ್ ಮತ್ತು ಅಂಡರ್‌ಪಿನ್ನಿಂಗ್‌ಗಳನ್ನು ನೀಡಲಾಗಿದೆ. ಹಳೆಯ ರೆಟ್ರೊ ಲುಕ್ ನೀಡಲು,  ಮೋಟಾರ್‌ಸೈಕಲ್‌ಗೆ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು ಅದು ಚೌಕಾಕಾರದ  ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ.


ಇದನ್ನೂ ಓದಿ-4 ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಆರ್‌ಬಿಐ; ನಿಮ್ಮ ಸಾಲದ EMI ಮೇಲೆ ದೊಡ್ಡ ಪರಿಣಾಮ!


ಭಾರತದಲ್ಲಿಯೂ ಕೂಡ ಬಿಡುಗಡೆ ಸಾಧ್ಯತೆ
ಹೋಂಡಾ CG125 ಸ್ಪೆಷಲ್, ಸ್ಟ್ಯಾಂಡರ್ಡ್ ಮಾದರಿಯ ಆರ್ಮ್ದ್ 125 cc ಏರ್-ಕೂಲ್ಡ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ಹೊಂದಿದ್ದು, ಇದು ಸುಮಾರು 10PS ಪವರ್ ಮತ್ತು 9.5Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ 55.55 ಕಿಮೀ ಮೈಲೇಜ್ ನೀಡುತ್ತದೆ ಮತ್ತು 125 ಸಿಸಿ ಬೈಕ್‌ಗಲಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಈ ಮೋಟಾರ್‌ಸೈಕಲ್‌ಗೆ ಕಪ್ಪು ಬಣ್ಣದ ಸ್ಪಾಟ್  ವ್ಹೀಲ್ ಗಳನ್ನು ನೀಡಲಾಗಿದೆ ಮತ್ತು ಎರಡೂ ಬದಿಗಳಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಹೋಂಡಾ ಟೂ-ವೀಲರ್ಸ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಹೊಸ ಮತ್ತು ಕೈಗೆಟುಕುವ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದ್ದರಿಂದ ಈ ಮೋಟಾರ್‌ಸೈಕಲ್ ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್‌ನೊಂದಿಗೆ ಭಾರತವನ್ನು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ.


ಇದನ್ನೂ ಓದಿ-Good News! ಹೆಚ್ಚಾಗಲಿದೆಯಾ Retirement ವಯಸ್ಸು ಹಾಗೂ Pension ಮೊತ್ತ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.