ಜಾಗತಿಕ ಪ್ರಮುಖ ಅನಿಲ ಸೋರಿಕೆ ದುರಂತಗಳ ಬಗ್ಗೆ ನಿಮಗೆಷ್ಟು ಗೊತ್ತು?
ಗುರುವಾರಬೆಳಗ್ಗೆ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಿಂದಾಗಿ ಸುತ್ತಲಿನ ಐದು ಕಿಲೋಮೀಟರ್ ಗಳಲ್ಲಿನ ಹಳ್ಳಿಗಳಿಗೆ ವ್ಯಾಪಿಸಿತು,ಈ ಘಟನೆಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಲ್ಲದೆ ಮತ್ತು ಸುಮಾರು 1,000 ಜನರ ಮೇಲೆ ಪರಿಣಾಮ ಬೀರಿದೆ.
ನವದೆಹಲಿ: ಗುರುವಾರಬೆಳಗ್ಗೆ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಿಂದಾಗಿ ಸುತ್ತಲಿನ ಐದು ಕಿಲೋಮೀಟರ್ ಗಳಲ್ಲಿನ ಹಳ್ಳಿಗಳಿಗೆ ವ್ಯಾಪಿಸಿತು,ಈ ಘಟನೆಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಲ್ಲದೆ ಮತ್ತು ಸುಮಾರು 1,000 ಜನರ ಮೇಲೆ ಪರಿಣಾಮ ಬೀರಿದೆ.
ವಿಶಾಖಪಟ್ಟಣಂ ಹೊರವಲಯದಲ್ಲಿರುವ ಗೋಪಾಲಪಟ್ಟಣಂನ ಎಲ್ಜಿ ಪಾಲಿಮರ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ.ಲಾಕ್ ಡೌನ್ ಸಮಯದಲ್ಲಿ ಮುಚ್ಚಿದ ಪ್ಲಾಸ್ಟಿಕ್ ಕಾರ್ಖಾನೆಯು ಕಾರ್ಯಾಚರಣೆಯನ್ನು ಪುನರಾರಂಭಿಸುವ ಸಿದ್ದತೆ ನಡೆಯುತ್ತಿತ್ತು ಎಂದು ವರದಿಯಾಗಿದೆ. ಮೂರು ಕಿಲೋಮೀಟರ್ ತ್ರಿಜ್ಯದ 200-250 ಕುಟುಂಬಗಳಿಂದ ಸುಮಾರು 500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, ಮೃತರ ಬಂಧುಗಳಿಗೆ 1 ಕೋಟಿ ರೂ.ಗಳ ಸಹಾಯವನ್ನು ಘೋಷಿಸಿದ್ದಾರೆ. ಈವರೆಗೆ ಸುತ್ತಮುತ್ತಲಿನ ಪ್ರದೇಶಗಳಿಂದ 10,000 ಜನರನ್ನು ರಕ್ಷಿಸಲಾಗಿದೆ.
ಪ್ರಪಂಚದಾದ್ಯಂತದ ಪ್ರಮುಖ ಅನಿಲ ಸೋರಿಕೆ ಘಟನೆಗಳ ಪಟ್ಟಿ ಇಲ್ಲಿದೆ:
1. ಮಾರ್ಚ್ 18, 1937: ಟೆಕ್ಸಾಸ್ ಶಾಲೆಯಲ್ಲಿ ನೈಸರ್ಗಿಕ ಅನಿಲ ಸ್ಫೋಟದಲ್ಲಿ ಸುಮಾರು 300 ವಿದ್ಯಾರ್ಥಿಗಳು ಸಾವನ್ನಪ್ಪಿದರು. ಟೆಕ್ಸಾಸ್‌ನ ನ್ಯೂ ಲಂಡನ್‌ನಲ್ಲಿರುವ 1,200 ವಿದ್ಯಾರ್ಥಿಗಳ ಶಾಲೆಯ ನೆಲಮಾಳಿಗೆಯಲ್ಲಿ ಅನಿಲ ಸೋರಿಕೆ ಸಂಭವಿಸಿದ್ದರಿಂದಾಗಿ ಭಾರಿ ಸ್ಫೋಟ ವ್ಯಕ್ತವಾಯಿತು.ಈ ಘಟನೆಯಲ್ಲಿ ಸುಮಾರು 300 ಮಕ್ಕಳು ಮತ್ತು ಶಿಕ್ಷಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ನ್ಯೂ ಲಂಡನ್‌ನ ಕನ್ಸಾಲಿಡೇಟೆಡ್ ಸ್ಕೂಲ್ ಒಂದು ದೊಡ್ಡ ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದ ಮಧ್ಯದಲ್ಲಿತ್ತು.
2. ಭೋಪಾಲ್ ಅನಿಲ ದುರಂತ (1984): 1984 ರ ಭೋಪಾಲ್ ಅನಿಲ ದುರಂತವು 20 ನೇ ಶತಮಾನದ ವಿಶ್ವದ ಪ್ರಮುಖ ಕೈಗಾರಿಕಾ ಅಪಘಾತಗಳಲ್ಲಿ ಒಂದಾಗಿದೆ "ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಡಿಸೆಂಬರ್ 3, 1984 ರಂದು ಭೋಪಾಲ್ನಲ್ಲಿ ಯುಎಸ್ ಬಹುರಾಷ್ಟ್ರೀಯ ಯೂನಿಯನ್ ಕಾರ್ಬೈಡ್ ಕಾರ್ಪ್ ಕೀಟನಾಶಕ ಘಟಕದಿಂದ ಸುಮಾರು 40 ಟನ್ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ, ಭೋಪಾಲ್ ಅನಿಲ ದುರಂತದಲ್ಲಿ 3,787 ಜನರು ಸಾವನ್ನಪ್ಪಿದ್ದರು.
ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಅನಿಲ ಸೋರಿಕೆಯಿಂದಾಗಿ ಸಾವಿನ ಸಂಖ್ಯೆ 2,259 ಕ್ಕೆ ತಲುಪಿತ್ತು ಎಂದು ತಕ್ಷಣದ ಅಧಿಕೃತ ಅಂದಾಜಿನ ಪ್ರಕಾರ ಮಧ್ಯಪ್ರದೇಶ ಸರ್ಕಾರವು ಈ ಅಂಕಿಅಂಶಗಳನ್ನು ನವೀಕರಿಸಿದೆ. ಭೋಪಾಲ್ ಅನಿಲ ಸೋರಿಕೆಯಿಂದಾಗಿ 5,58,125 ಜನರಿಗೆ ಗಾಯಗಳಾಗಿದ್ದವು, ಇದರಲ್ಲಿ ಸುಮಾರು 3,900 ತೀವ್ರ ಮತ್ತು ಶಾಶ್ವತವಾಗಿ ನಿಷ್ಕ್ರಿಯಗೊಂಡಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ 2006 ರಲ್ಲಿ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ.
3. ಪೈಪರ್ ಆಲ್ಫಾ ದುರಂತ (1988): ಇದು ವಿಶ್ವದ ಭೀಕರ ತೈಲ ರಿಗ್ ದುರಂತವಾಗಿದ್ದು, ಜುಲೈ 6, 1988 ರಂದು 167 ಜನರನ್ನು ಬಲಿ ತೆಗೆದುಕೊಂಡಿತು. ಅನಿಲ ಸೋರಿಕೆಯಾದ ನಂತರ ಉತ್ತರ ಸಮುದ್ರದಲ್ಲಿನ ಆಕ್ಸಿಡೆಂಟಲ್ ಪೆಟ್ರೋಲಿಯಂನ ಪೈಪರ್ ಆಲ್ಫಾ ಆಯಿಲ್ ರಿಗ್‌ನಲ್ಲಿ ಸ್ಫೋಟ ಸಂಭವಿಸಿದೆ.
4. ಉಫಾ ರೈಲು ದುರಂತ (1989): ಇದು ಇಗ್ಲಿನ್ಸ್ಕಿ ಜಿಲ್ಲೆಯಲ್ಲಿ (ಆಗಿನ ಬಾಷ್ಕೀರ್ ಎಎಸ್ಎಸ್ಆರ್, ಸೋವಿಯತ್ ಒಕ್ಕೂಟ) ರೈಲ್ವೆ ಅಪಘಾತವಾಗಿದ್ದು, 575 ಜನರನ್ನು ಬಲಿ ತೆಗೆದುಕೊಂಡಿತು, ಜೂನ್ 4, 1989 ರಂದು 800 ಕ್ಕೂ ಹೆಚ್ಚು ಜನರು ಗಾಯಗೊಂಡರು. ರೈಲ್ವೆಯ ಬಳಿ, ರೈಲುಗಳು ಒಂದಕ್ಕೊಂದು ಹಾದುಹೋಗುತ್ತಿದ್ದಂತೆ, ಅದರ ಚಕ್ರಗಳಿಂದ ಕಿಡಿಗಳು ಅನಿಲವನ್ನು ಹೊತ್ತಿಸಿದ್ದರಿಂದಾಗಿ ದೊಡ್ಡ ಸ್ಫೋಟಕ್ಕೆ ಕಾರಣವಾಯಿತು.
5. ಗ್ವಾಡಲಜರಾ ಗ್ಯಾಸ್ ಸ್ಫೋಟ (1992): ಮೆಕ್ಸಿಕೊದ ಡೌನ್ಟೌನ್ ಗ್ವಾಡಲಜರಾದಲ್ಲಿ ಬೆಳಿಗ್ಗೆ 10:05 ಮತ್ತು 11:16 ರ ನಡುವೆ 12 ಸ್ಫೋಟ ಸಂಭವಿಸಿತ್ತು, ಏಪ್ರಿಲ್ 22, 1992 ರಂದು 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 600 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸ್ಫೋಟದಲ್ಲಿ ಎಂಟು ಕಿಲೋಮೀಟರ್ ವರಗೆ ಬೀದಿಗಳು ಗಂಭೀರವಾಗಿ ಹಾನಿಗೊಳಗಾದವು.
6. ಬೀಜಿಂಗ್ ಅನಿಲ ಸೋರಿಕೆ (ಡಿಸೆಂಬರ್ 2008): ಬೀಜಿಂಗ್ ಬಳಿಯ ಉಕ್ಕಿನ ಸ್ಥಾವರದಲ್ಲಿ ಅನಿಲ ಸೋರಿಕೆಯಾಗಿ 17 ಜನರು ಸಾವನ್ನಪ್ಪಿದರು ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿತ್ತು. 7,000 ಉದ್ಯೋಗಿಗಳನ್ನು ಹೊಂದಿದ್ದ ಗ್ಯಾಂಗ್ಲು ಐರನ್ ಮತ್ತು ಸ್ಟೀಲ್ ಕೋ ಲಿಮಿಟೆಡ್‌ನಲ್ಲಿ ಈ ಅಪಘಾತ ಸಂಭವಿಸಿತ್ತು
7. ಚೀನಾ ಮೈನ್‌ನಲ್ಲಿ ಅನಿಲ ಸೋರಿಕೆ (ನವೆಂಬರ್ 2011): ಚೀನಾ ಗಣಿ ಅಪಘಾತದಲ್ಲಿ ಅನಿಲ ಸೋರಿಕೆ 20 ಗಣಿಗಾರರನ್ನು ಬಲಿ ತೆಗೆದುಕೊಂಡಿತು. ಪ್ರಾಥಮಿಕ ತನಿಖೆಯಲ್ಲಿ ಶಾಫ್ಟ್ ಒಳಗೆ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ಅನಿಲ ಸೋರಿಕೆ ಸಂಭವಿಸಿದೆ ಮತ್ತು ಅನಿಲವು ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹರಡಿತು, ಎರಡು ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ 43 ಗಣಿ ಕಾರ್ಮಿಕರ ಮೇಲೆ ಪರಿಣಾಮ ಬಿರಿತ್ತು.
8. ಕಾಹೋಸಿಯಂಗ್ ಅನಿಲ ಸ್ಫೋಟ (2014): ದಕ್ಷಿಣ ತೈವಾನ್‌ನ ನಗರವಾದ ಕಾಹೋಸಿಯುಂಗ್‌ನಲ್ಲಿ ಜುಲೈ 31, 2014 ರಂದು 25 ಜನರು ಸಾವನ್ನಪ್ಪಿದರು ಮತ್ತು 267 ಮಂದಿ ಗಾಯಗೊಂಡರು. ಭೂಗತ ಕೈಗಾರಿಕಾ ಪೈಪ್‌ಲೈನ್‌ನಲ್ಲಿ ಪ್ರೋಪೇನ್ ಅನಿಲ ಸೋರಿಕೆ ಸಂಭವಿಸಿತ್ತು.
9. ಚೀನಾ ಅನಿಲ ಸೋರಿಕೆ (ಮೇ 2017): ಅನಿಲ ಸೋರಿಕೆಯಿಂದ ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ 18 ಜನರು ಸಾವನ್ನಪ್ಪಿದ್ದರು. ಯೂಕ್ಸಿಯಾನ್ ಕೌಂಟಿಯ ಹುವಾಂಗ್‌ಫೆಂಗ್ಕಿಯಾವೊ ಟೌನ್‌ಶಿಪ್‌ನ ಜಿಲಿಂಕಿಯಾವೊ ಕೊಲಿಯರಿಯಲ್ಲಿ ಅನಿಲ ಸೋರಿಕೆ ಸಂಭವಿಸಿದಾಗ 55 ಜನರು ಗಣಿಗಾರಿಕೆ ಕೆಲಸ ಮಾಡುತ್ತಿದ್ದರು.
10. ಇರಾನ್ ಅನಿಲ ಸೋರಿಕೆ (ಆಗಸ್ಟ್ 2017): ಇರಾನ್‌ನ ದಕ್ಷಿಣದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾದ ನಂತರ 400 ಕ್ಕೂ ಹೆಚ್ಚು ಜನರು ಉಸಿರಾಟ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ಆಗಸ್ಟ್ 13, 2017 ರಂದು ಡೆಜ್ಫುಲ್ ನಗರದ ಸ್ಥಳೀಯ ನೀರು ಸರಬರಾಜು ಕಂಪನಿಯ ಕೈಬಿಟ್ಟ ಗೋದಾಮಿನೊಂದರಲ್ಲಿ ಜಲಾಶಯಗಳಿಂದ ಅನಿಲ ಸೋರಿಕೆಯಾಗಿತ್ತು.
11. ಚೀನಾ ಹೆಬೀ ಪ್ರಾಂತ್ಯದ ಅನಿಲ ಸೋರಿಕೆ (ನವೆಂಬರ್ 2018): ಚೆಮ್ಚಿನಾ ಅಂಗಸಂಸ್ಥೆ ಹೆಬೀ ಶೆಂಗ್ಹುವಾ ಕೆಮಿಕಲ್ ಇಂಡಸ್ಟ್ರಿ ಕೋ ಒಡೆತನದ ಸ್ಥಾವರದಲ್ಲಿ ಸುಡುವ ಅನಿಲ ಸೋರಿಕೆಯಿಂದಾಗಿ ಹೆಬೆ ಪ್ರಾಂತ್ಯದ ಜಾಂಗ್‌ಜಿಯಾಕೌದಲ್ಲಿ 23 ಜನರು ಸಾವನ್ನಪ್ಪಿದರು ಮತ್ತು 22 ಮಂದಿ ಗಾಯಗೊಂಡಿದ್ದರು. ಪಿವಿಸಿ ನಿರ್ಮಾಪಕ ಹೆಬೀ ಶೆಂಗ್ಹುವಾ ಉತ್ಪಾದನೆಯ ಸಮಯದಲ್ಲಿ ವಿನೈಲ್ ಕ್ಲೋರೈಡ್ ಅನ್ನು ಸೋರಿಕೆ ಮಾಡಿದ್ದರು, ಮತ್ತು ಇದು ಬೆಂಕಿಗೆ ಆಹುತಿಯಾಗಿ, ಟ್ರಕ್‌ಗಳು ಮತ್ತು ಕಟ್ಟಡಗಳ ನಾಶಕ್ಕೆ ಕಾರಣವಾಗಿತ್ತು ಎಂದು ಮೂಲ ಕಂಪನಿ ಚೆಮ್‌ಚಿನಾ ತಿಳಿಸಿತು.