ನವದೆಹಲಿ: ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿಯೊಬ್ಬರನ್ನು ಕುರ್ಚಿಯಿಂದ ಕೆಳಗಿಳಿಸಲಾಗಿದೆ. ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿನ್ನೆ ತಡರಾತ್ರಿ (ಶನಿವಾರ) ಇಮ್ರಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆದಿದ್ದು, ಇದರಲ್ಲಿ ಇಮ್ರಾನ್ ಖಾನ್ ವಿರುದ್ಧ 174 ಮತಗಳು ಚಲಾವಣೆಯಾಗಿದ್ದವು.  


COMMERCIAL BREAK
SCROLL TO CONTINUE READING

ಇಮ್ರಾನ್ ಖಾನ್ ಸರ್ಕಾರ ಪತನ!


ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಪತನವಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಿತು. ಇದರಲ್ಲಿ ಇಮ್ರಾನ್ ಖಾನ್ ವಿರುದ್ಧ 174 ಮತಗಳು ಚಲಾವಣೆಯಾಗಿದ್ದವು. ಮತದಾನದ ಫಲಿತಾಂಶಕ್ಕೂ ಮುನ್ನವೇ ಇಮ್ರಾನ್ ಪ್ರಧಾನಿ ನಿವಾಸವನ್ನು ತೊರೆದಿದ್ದರು.


ಪಾಕಿಸ್ತಾನದ ಹೊಸ ಪ್ರಧಾನಿ ಯಾರು?


ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪ್ರಧಾನಿ ಕುರ್ಚಿ ಶೇಕ್ ಶೇಕ್ ಆಗಿದೆ.   ಪ್ರಧಾನಿ ನಿವಾಸದಿಂದ ಮಧ್ಯರಾತ್ರಿಯೇ ಇಮ್ರಾನ್ ಖಾನ್ ತಮ್ಮ ಸಾಮಾನುಗಳನ್ನು ಕಟ್ಟಿಕೊಂಡು ಹೊರಟಿದ್ದಾರೆ. ಇದೀಗ ಇಂದು (ಭಾನುವಾರ) ಪಾಕಿಸ್ತಾನದಲ್ಲಿ ನೂತನ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಕೆಯಾಗಲಿದೆ. ಮಧ್ಯಾಹ್ನ 3 ಗಂಟೆಯೊಳಗೆ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 11ರಂದು ಪಾಕಿಸ್ತಾನಕ್ಕೆ ಹೊಸ ಪ್ರಧಾನಿ ಸಿಗಲಿದ್ದಾರೆ. ಪಾಕ್ ಪ್ರಧಾನಿ ಹುದ್ದೆಗೆ ಈಗಾಗಲೇ ಹೊಸಮುಖ ಆಯ್ಕೆಯಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ನವಾಜ್ ಷರೀಫ್ ಪಕ್ಷದ ನಾಯಕ ಶಹಬಾಜ್ ಷರೀಫ್ ಈಗ ಪಾಕಿಸ್ತಾನದ ಹೊಸ ಪ್ರಧಾನಿಯಾಗಲಿದ್ದಾರೆಂದು ವರದಿಯಾಗಿದೆ.


ಇದನ್ನೂ ಓದಿ: Viral Video: ಎತ್ತರದ ಗುಡ್ಡದಿಂದ ಸೈಕಲ್ ಸಮೇತ ಜಿಗಿದ ಬಾಲಕಿ! ಆಮೇಲೇನಾಯ್ತು..?


ಮತದಾನಕ್ಕೂ ಮುನ್ನ ಇಮ್ರಾನ್ ಹೇಳಿದ್ದೇನು?


ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ಮಾಡುವ ಮೊದಲು ಇಮ್ರಾನ್ ಖಾನ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಸರ್ಕಾರದ ನಂತರ ಬರುವ ಸರ್ಕಾರವನ್ನು ನಾನು ಒಪ್ಪಿಕೊಳ್ಳುವುದಿಲ್ಲವೆಂದು ಇಮ್ರಾನ್ ಹೇಳಿದ್ದಾರೆ.


ಇಮ್ರಾನ್ ನಿರ್ಗಮನದ ಬಗ್ಗೆ ಶಹಬಾಜ್ ಷರೀಫ್ ಹೇಳಿದ್ದೇನು?


ಇಮ್ರಾನ್ ಖಾನ್ ಸರ್ಕಾರದ ವಿದಾಯ ನಂತರ ಪಿಎಂಎಲ್-ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಮಾತನಾಡಿ, ‘ಪಾಕಿಸ್ತಾನಕ್ಕೆ ಇದು ಹೊಸ ದಿನವಾಗಿದೆ ಎಂದು ಹೇಳಿದ್ದಾರೆ. ನಾವು ಸೇಡು ತೀರಿಸಿಕೊಳ್ಳಲು ಬಂದಿಲ್ಲ, ಜನರ ಮತ್ತು ದೇಶದ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Russia-Ukraine war : ನಿರಾಶ್ರಿತರ ನೆರವಿಗೆ ಧಾವಿಸುವಂತೆ ವಿಶ್ವನಾಯಕರಿಗೆ ಕರೆಕೊಟ್ಟ ಪ್ರಿಯಾಂಕ


ವಿಪಕ್ಷಗಳ ಗೆಲುವಿನ ಬಗ್ಗೆ ಬಿಲಾವಲ್ ಹೇಳಿದ್ದೇನು?


ಪ್ರತಿಪಕ್ಷಗಳ ಗೆಲುವಿನ ನಂತರ ಬಿಲಾವಲ್ ಭುಟ್ಟೋ ಸದನದಲ್ಲಿ ಹಳೆಯ ಪಾಕಿಸ್ತಾನಕ್ಕೆ ಸ್ವಾಗತ ಎಂದು ಹೇಳಿದರು. ಇಲ್ಲಿ ಯಾವುದೂ ಅಸಾಧ್ಯವಲ್ಲ, ಎಲ್ಲವೂ ಸಾಧ್ಯವಿದೆ ಅಂತಾ ಅವರು ಹೇಳಿದ್ದಾರೆ.


ಪಿಟಿಐ ನಾಯಕರ ಭಾಷಣ


ಸದನದಲ್ಲಿ ಸೋಲಿನ ನಂತರ ಇಮ್ರಾನ್ ಖಾನ್ ಅವರ ಪಕ್ಷದ ಪಿಟಿಐ ನಾಯಕ ಅಲಿ ಮೊಹಮ್ಮದ್ ಅವರು ರಷ್ಯಾವನ್ನು ಕ್ಷಮಿಸಿ, ಇಮ್ರಾನ್ ಗುರಿಯಾಗಿದ್ದಾರೆ ಎಂದು ಹೇಳಿದರು. ಇಮ್ರಾನ್ ಖಾನ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.