Russia-Ukraine war : ನಿರಾಶ್ರಿತರ ನೆರವಿಗೆ ಧಾವಿಸುವಂತೆ ವಿಶ್ವನಾಯಕರಿಗೆ ಕರೆಕೊಟ್ಟ ಪ್ರಿಯಾಂಕ

ಯುನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಶೇರ್‌ ಮಾಡಿದ್ದು, ನಿರಾಶ್ರಿತರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ. 

Written by - Zee Kannada News Desk | Last Updated : Apr 9, 2022, 06:06 PM IST
  • ಯುದ್ಧ ನಿರಾಶ್ರಿತರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕ ಮನವಿ
  • ಯುನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ
  • ವಿಶ್ವ ನಾಯಕರಿಗೆ ಮನವಿ ಸಲ್ಲಿಸಿದ ನಟಿ
Russia-Ukraine war : ನಿರಾಶ್ರಿತರ ನೆರವಿಗೆ ಧಾವಿಸುವಂತೆ ವಿಶ್ವನಾಯಕರಿಗೆ ಕರೆಕೊಟ್ಟ ಪ್ರಿಯಾಂಕ title=
Priyanka Chopra

ರಷ್ಯಾ ಮತ್ತು ಉಕ್ರೇನ್‌ (Russia and Ukraine war) ನಡುವಿನ ಸಮರ ಮುಂದುವರೆದಿದೆ. ಆರನೇ ವಾರವೂ ರಷ್ಯಾ, ಉಕ್ರೇನ್‌ ಮೇಲೆ ಸಮರ ಸಾರಿದ್ದು, ಸ್ಥಿತಿ ಭೀಕರವಾಗಿದೆ. ಇನ್ನು ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕ (Priyanka Chopra) ಚೋಪ್ರಾ ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದಾರೆ. 

ಇದನ್ನು ಓದಿ: Russia-Ukraine War : ಉಕ್ರೇನ್‌ ರೈಲ್ವೆ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ : 50ಕ್ಕೂ ಮಿಕ್ಕಿ ಸಾವು

ಯುನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಶೇರ್‌ ಮಾಡಿದ್ದು, ನಿರಾಶ್ರಿತರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ. "ವಿಶ್ವ ನಾಯಕರೇ ನಿರಾಶ್ರಿತರಿಗೆ ಈಗ ಅಗತ್ಯ ಬೆಂಬಲದ ಅಗತ್ಯವಿದೆ. ಪ್ರಪಂಚದಾದ್ಯಂತ ನಿರಾಶ್ರಿತರ ಪರವಾಗಿ ನಿಲ್ಲಬೇಕಿದೆ. ನಾವು ಸುಮ್ಮನೆ ನಿಂತು ನೋಡುವಂತಿಲ್ಲ" ಎಂದು ಶೀರ್ಷಿಕೆ ನೀಡಿ ವಿಡಿಯೋ ಶೇರ್ ಮಾಡಿದ್ದಾರೆ.

ಇದನ್ನು ಓದಿ: Booster Dose: ಏ.10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ನಿರ್ಧಾರ

"ಉಕ್ರೇನ್‌ನಿಂದ ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ನೀವು ಮುಂದಾಗಬೇಕು. 2 ಮಿಲಿಯನ್‌ಗೂ ಅಧಿಕ ಮಕ್ಕಳು ನೆರೆಯ ರಾಷ್ಟ್ರಗಳಲ್ಲಿ ಸುರಕ್ಷತೆಯ ಹುಡುಕಾಟದಲ್ಲಿದ್ದಾರೆ. ಸುಮಾರು 2.5 ಮಿಲಿಯನ್ ಮಕ್ಕಳು ಸ್ಥಳಾಂತರಗೊಂಡಿದ್ದಾರೆ. ಇದು 2ನೇ ವಿಶ್ವ ಯುದ್ಧದ ನಂತರದ ನಡೆದ ಅತಿದೊಡ್ಡ ಪ್ರಮಾಣದ ಸ್ಥಳಾಂತರವಾಗಿದೆ" ಎಂದು ಪ್ರಿಯಾಂಕಾ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

"ಯುಕೆ, ಜರ್ಮನಿ, ಜಪಾನ್, ನಾರ್ವೆ, ಆಸ್ಟ್ರೇಲಿಯಾ ನಾಯಕರೇ ನೀವು ಎಷ್ಟು ಸಹಾಯ ಮಾಡುತ್ತೀರಿ. ನೀವು ನಿರಾಶ್ರಿತರ ಪರ ನಿಲ್ಲುತ್ತೀರಾ? ಅವರಿಗೆ ಅಗತ್ಯವಿರುವ ಸೌಲಭ್ಯ ನೀಡುತ್ತೀರಾ" ಎಂದು ಮನವಿ ಮಾಡಿದ್ದಾರೆ. ಇನ್ನು ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯುನಿಸೆಫ್ ದೇಣಿಗೆ ಲಿಂಕ್ ಅನ್ನು ಸಹ ಶೇರ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News