ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಮತ್ತು ಇಮ್ರಾನ್ ಖಾನ್ ಸದ್ಯ ವಿಶ್ವಾದ್ಯಂತ ಚರ್ಚೆಯಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಲಿವುಡ್ ನಟಿಯರಿಗೆ ಮರುಳಾಗಿದ್ದರಂತೆ. ಭಾರತದ ಪ್ರತಿಭಾವಂತ ಹಾಗೂ ಸುಂದರ ನಟಿಯರ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!


ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಅವರ ವೈಯಕ್ತಿಕ ಜೀವನವೂ ಅಷ್ಟೇ ವರ್ಣರಂಜಿತವಾಗಿತ್ತು ಎಂಬುದಕ್ಕೆ ಕೆಲವು ಘಟನೆಗಳೇ ಸಾಕ್ಷಿ. ಈ ಪಾಕಿಸ್ತಾನಿ ಕ್ರಿಕೆಟ್ ನಾಯಕನ ಪ್ರೇಮ ಜೀವನ ಈ ಹಿಂದೆ ಹಲವು ಬಾರಿ ಚರ್ಚೆಯಾಗಿದೆ. ಇದೀಗ ಅವರು ಬಾಲಿವುಡ್‌ ನಟಿ ರೇಖಾ ಜೊತೆ ಲವ್ವಲ್ಲಿ ಬಿದ್ದಿದ್ದರು ಎಂಬ ವಿಚಾರ ಮುನ್ನೆಲೆಗೆ ಬಂದಿದೆ.


ಬಾಲಿವುಡ್ ಬೆಡಗಿಯರ ಜೊತೆ ಇಮ್ರಾನ್ ಉತ್ತಮ ಬಾಂಧವ್ಯ ಹೊಂದಿದ್ದರು ಎಂದೇನೋ ಹೇಳಲಾಗುತ್ತಿದೆ. ಒಮ್ಮೆ ರೇಖ ಅವರೊಂದಿಗಿನ ಪ್ರೀತಿಯ ಸಂಬಂಧ ಬಹುತೇಕ ಮದುವೆಗೆ ತಲುಪಿತ್ತು ಎಂಬ ಊಹಾಪೋಹಗಳು ಕೂಡ ಕೇಳಿಬರುತ್ತಿವೆ.


ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೊತೆ ಮುನ್ಮುನ್ ಸೇನ್ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿದ್ದವು. ಆದರೂ ಇಬ್ಬರೂ ಇದರ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಶಬಾನಾ ಅಜ್ಮಿಯೊಂದಿಗೆ ಇಮ್ರಾನ್ ನಡುವಿನ ಸ್ನೇಹವೂ ಒಂದೊಮ್ಮೆ ಚರ್ಚೆಯ ವಿಷಯವಾಗಿತ್ತು. ಆದರೆ ಈ ಬಗ್ಗೆ ಶಬಾನಾ ಆಗಲಿ ಅಥವಾ ಇಮ್ರಾನ್ ಆಗಲಿ ಏನನ್ನೂ ಹೇಳಲಿಲ್ಲ.


 


ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!


"ರೇಖಾ ಇಮ್ರಾನ್ ಮದುವೆಯಾಗಲಿದ್ದಾರೆ?" ಎಂಬ ಶೀರ್ಷಿಕೆಯ ಲೇಖನವು ವೈರಲ್‌ ಆಗುತ್ತಿದೆ. ಇಮ್ರಾನ್‌ ಖಾನ್‌ ಬಾಂಬೆಯಲ್ಲಿ (ಮುಂಬೈ) ಸುಮಾರು ಒಂದು ತಿಂಗಳು ಕಳೆದರು. 80 ರ ದಶಕದ ಅತ್ಯಂತ ಪ್ರಸಿದ್ಧ ನಟಿಯೊಂದಿಗೆ ಕಾಣಿಸಿಕೊಂಡರು ಎಂದು ಹೇಳಲಾಗುತ್ತದೆ. 


ಅವರು ಒಟ್ಟಿಗೆ ಪರಸ್ಪರರ ಸಹವಾಸವನ್ನು ಆನಂದಿಸುತ್ತಿರುವುದನ್ನು ನೋಡಿದವರಿಗೆ ಅವರ ನಿಕಟತೆಯಿಂದ ಆಘಾತವಾಯಿತು ಮತ್ತು "ಅವರು ಒಬ್ಬರನ್ನೊಬ್ಬರು ಆಳವಾಗಿ ಮತ್ತು ಉತ್ಸಾಹದಿಂದ ಪ್ರೀತಿಸುತ್ತಿದ್ದಾರೆ" ಎಂದು ತಕ್ಷಣವೇ ಮನವರಿಕೆಯಾಯಿತು ಎಂದು ತುಣುಕು ಓದುತ್ತದೆ. ಆದರೆ ಇದು ಸತ್ಯವೋ ಅಥವಾ ಕೇವಲ ಗಾಸಿಪ್‌ ಸುದ್ದಿಯೋ ಎಂಬುದಕ್ಕೆ ಮಾತ್ರ ಸ್ಪಷ್ಟನೆ ಸಿಕ್ಕಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.