ನವದೆಹಲಿ: ಇಮ್ರಾನ್ ಖಾನ್ ಮೋದಿ ಸ್ಟೈಲ್ ಲ್ಲಿ ಸಾರ್ಕ್ ದೇಶದ ನಾಯಕರನ್ನು ಆಹ್ವಾನಿಸಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಜುಲೈ 25 ರಂದು ಚುನಾವಣೆಯಲ್ಲಿ ಪಿಟಿಐಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು  ಇದಾದ ಆದರೆ ಸರ್ಕಾರಕ್ಕೆ ಬಹುಮತದ ಕೊರತೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಈಗ ಸಣ್ಣ ಪುಟ್ಟಪಕ್ಷಗಳ ಬೆಂಬಲದಿಂದ ಆಗಸ್ಟ್ 11ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.


ಇನೊಂದೆಡೆ ಪಿಟಿಐ ಪಕ್ಷದ ಮೂಲಗಳ ಪ್ರಕಾರ ಸಾರ್ಕ್ ದೇಶಗಳ ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲಿದ್ದಾರೆ ಅದರಲ್ಲಿ ಪ್ರಧಾನಿ ಮೋದಿಯವರನ್ನು ಆಮಂತ್ರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ನಿರ್ಧಾರವನ್ನು ಸದ್ಯದಲ್ಲಿ ಇದನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.


ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಪ್ರಧಾನಿ ಮೋದಿ ಇಮ್ರಾನ್ ಖಾನ್ ಅವರಿಗೆ ಪೋನ್ ಮಾಡಿ ಉಭಯದೇಶಗಳ ನಡುವೆ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಕುರಿತಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.