ನವದೆಹಲಿ: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಕಳೆದ 2004 ರಿಂದ ಆಕಾಶಕಾಯಗಳ ಕುರಿತಾಗಿ ಅಧ್ಯಯನ ಮಾಡುತ್ತಿದ್ದು,ಈಗ ಈ 13 ವರ್ಷಗಳ ನಿರಂತರ ಸಂಶೋಧನೆಯ ಫಲವಾಗಿ 2036 ರಲ್ಲಿ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸಬಹುದೆಂದು ಭವಿಷ್ಯ ನುಡಿದಿದೆ. 


COMMERCIAL BREAK
SCROLL TO CONTINUE READING

ಹಲವಾರು ವಿಜ್ಞಾನಿಗಳ ಅಂದಾಜಿನ ಪ್ರಕಾರ 'ಪ್ರಳಯದಿನ' ವನ್ನು ನಿಬಿರು ಗ್ರಹದ ಚಲನೆಯ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗಿದೆ.ಈ ನಾಸಾದ ವರದಿಯನ್ವಯ 'ಅಪೋಪಿಸ್' ಎನ್ನುವ ಕ್ಷುದ್ರಗ್ರಹವು ಭೂಮಿಗೆ ಎದುರಾಗಲಿದ್ದು ಇದರ ಅಪ್ಪಳಿಸುವಿಕೆಯಿಂದಾಗಿ  ಅದು ಸಂಪೂರ್ಣ ಈ ಭೂಮಿಯ ಮೇಲಿನ ಜೀವ ವಲಯಕ್ಕೆ ಹಾನಿಯನ್ನುಂಟು ಮಾಡಲಿದೆ ಎಂದು ತಿಳಿದುಬಂದಿದೆ.ನಾಸಾದ ವಿಜ್ಞಾನಿಗಳಾದ ಸ್ಟೀವ್ ಚೆಲ್ಸ್ಲೆ ಮತ್ತು ಪಾಲ್ ಖೋಡಾಸ್ ಈ ಕ್ಷುದ್ರಗಳಿಗೆ ಸಂಬಂಧಿಸಿದ ಚಲನೆಯನ್ನು ಕಳೆದ 2009 ರಿಂದಲೂ ಅದರ ಮೇಲೆ ನಿಗವಹಿಸಿದ್ದಾರೆ, ಅಲ್ಲದೆ ಇಂತಹ ಲೆಕ್ಕಾಚಾರದ ಆಧಾರದ ಮೇಲೆ 2036ರ ಎಪ್ರಿಲ್ 13ರಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ.


ಈ ಅಫೋಸಿಸ್ ಗ್ರಹಗತಿಯನ್ನು ಡೇವ್ ತೋಲೆನ್ ಮತ್ತು  ಹವಾಯಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇದನ್ನು ಪತ್ತೆ ಹಚ್ಚಿದ್ದಾರೆ.ಇದಕ್ಕೆ ಪೂರಕವಾಗಿ  ರಷ್ಯಾದ ವಿಜ್ಞಾನಿಗಳು ಕೂಡಾ ಭೂಮಿಗೆ ಅಫೋಸಿಸ್ ಕ್ಷುದ್ರಗ್ರಹದ ಅಪ್ಪಳಿಸುವಿಕೆಯು ಕೇವಲ 2036 ಅಷ್ಟೇ ಅಲ್ಲದೆ ಅದು 2029 ಮತ್ತು 2068ರಲ್ಲಿಯೂ ಸಂಬವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ 2029 ರಲ್ಲಿ 32,000 ಕಿ.ಮೀ ದೂರದಲ್ಲಿ ಇದು ಹಾದು ಹೋಗಲಿದ್ದು ಈ ಸಂದರ್ಭದಲ್ಲಿ  ಇದರ ಸಣ್ಣ ಭಾಗವು  ಭೂಮಿಯನ್ನು ನಾಶಪಡಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


ಆದರೆ ಈಗಾಗಲೇ ಕೆಲವು ವಿಜ್ಞಾನಿಗಳು ನವಂಬರ್ 19,2017 ರಂದು ನಿಬಿರು ಅಥವಾ ಪ್ಲಾನೆಟ್ X ಅಪ್ಪಳಿಸುತ್ತದೆ ಎಂದು  ಹಿಂದೆ ಹೇಳಿದ್ದರು ಆದರೆ ಅದು ವಿಫಲಗೊಂಡಿತ್ತು.ಮತ್ತೊಬ್ಬ ವಿಜ್ಞಾನಿ ಡೇವಿಡ್ ಮೆಡೆಯವರ ಅಭಿಪ್ರಾಯದಂತೆ ಈಗಾಗಲೇ ಈ ಅಕ್ಟೋಬರ್ 15ರಿಂದ ಈ ಪ್ರಳಯ ದಿನದ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು  ಇದು ನಿರಂತರವಾಗಿ ಎಳು ವರ್ಷಗಳ ಅವಧಿಯಲ್ಲಿ ಅದು ಭೂಕಂಪ ,ಸುನಾಮಿ,ಹಾಗು ಜ್ವಾಲಾಮುಖಿಯಂತಹ ನೈಸರ್ಗಿಕ ವಿಕೋಪಗಳಿಂದಾಗಿ ಭೂಮಿಗೆ ಹಾನಿಯನ್ನು ಉಂಟುಮಾಡಲಿದೆ ಮತ್ತು ಈಗಾಗಲೇ ನಿಬಿರು ಭೂಮಿಯ ಕಕ್ಷೆಯಲ್ಲಿದೆ ಎಂದು ತಿಳಿಸಿದ್ದಾರೆ.