Russia School Firing: ಮಧ್ಯ ರಷ್ಯಾದಲ್ಲಿ ಶಾಲೆಯೊಂದರಲ್ಲಿ ಸೋಮವಾರ ಭೀಕರ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಗುಂಡು ಹಾರಿಸಿದ ವ್ಯಕ್ತಿ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಷ್ಯಾದ ಮಾಧ್ಯಮ ಸಂಸ್ಥೆ ಆರ್ಟಿ ಪ್ರಕಾರ, ಸೋಮವಾರ ಇಝೆವ್ಸ್ಕ್ ನಗರದ ಶಾಲೆಯೊಂದರಲ್ಲಿ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಶಂಕಿತ ವ್ಯಕ್ತಿ ಕಪ್ಪು ಟೀ ಶರ್ಟ್ ಧರಿಸಿದ್ದ
ಮಾಧ್ಯಮ ವರದಿಗಳ ಪ್ರಕಾರ, ಬಲಿಯಾದವರಲ್ಲಿ 7 ಮಂದಿ ನಗರದ ಶಾಲಾ ಸಂಖ್ಯೆ 88 ರ ವಿದ್ಯಾರ್ಥಿಗಳಾಗಿದ್ದಾರೆ. ದಾಳಿಯ ನಂತರ ಬಂದೂಕುಧಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ. ಆದರೆ ಆತ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಶಂಕಿತ ವ್ಯಕ್ತಿ ಸ್ಕೀ ಮಾಸ್ಕ್ ಮತ್ತು ನಾಜಿ ಚಿಹ್ನೆಗಳಿರುವ ಕಪ್ಪು ಟಿ-ಶರ್ಟ್ ಧರಿಸಿದ್ದ ಎಂದು ಹೇಳಲಾಗಿದೆ.


ಇದನ್ನೂ ಓದಿ-ಗೃಹಬಂಧನದಲ್ಲಿ ಕ್ಸಿ ಜಿನ್‌ಪಿಂಗ್? ಚೀನಾದ ದಂಗೆಯ ವದಂತಿಗಳ ಬಗ್ಗೆ ಇಲ್ಲಿದೆ ಮಹುಮುಖ್ಯ ಮಾಹಿತಿ.!


'ಉದ್ಮೂರ್ತಿಯಾದಲ್ಲಿ ಇಂದು ಈ ದುರಂತ ಸಂಭವಿಸಿದೆ'
ಘಟನೆಯ ಕುರಿತು ಹೇಳಿಕೆ ನೀಡಿರುವ ಉದ್ಮೂರ್ತಿಯಾ ಗಣರಾಜ್ಯದ ಗವರ್ನರ್ ಅಲೆಕ್ಸಾಂಡರ್ ಬುರ್ಚಾಲೋವ್, ಸಂತ್ರಸ್ತರಲ್ಲಿ ಒಬ್ಬನನ್ನು ಶಾಲೆಯ ಭದ್ರತಾ ಸಿಬ್ಬಂದಿ ಎಂದು ಗುರುತಿಸಲಾಗಿದೆ ಎಂದಿದ್ದು,  "ಇಂದು ಉದ್ಮೂರ್ತಿಯಾದಲ್ಲಿ ದುರಂತ ಸಂಭವಿಸಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿದಿದ್ದಾರೆ. ಇನ್ನೊಂದೆಡೆ, ಶಿಕ್ಷಣ ಸಚಿವಾಲಯದ ಪ್ರಕಾರ, ಗುಂಡಿನ ದಾಳಿ ನಡೆದ ಶಾಲೆಯನ್ನು ತೆರವುಗೊಳಿಸಲಾಗಿದೆ.


ಇದನ್ನೂ ಓದಿ-Giorgia Meloni: ಯಾರು ಈ ಜಾರ್ಜಿಯಾ ಮೆಲೋನಿ? ಇವರ ಬಗ್ಗೆ ನಿಮಗೆಷ್ಟು ಗೊತ್ತು?


ಇಝೆವ್ಸ್ಕ್ ನಗರದಲ್ಲಿ 6 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಾರೆ
ಘಟನಾ ಸ್ಥಳದಿಂದ ಹೊರಹೊಮ್ಮಿದ ಫೂಟೇಜ್ ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಟ್ಟಡದಿಂದ ಓಡಿಹೋಗುತ್ತಿರುವುದು ಕಂಡುಬಂದಿವೆ. ಇದರೊಂದಿಗೆ, ಪೀಡಿತರನ್ನು ಸ್ಟ್ರೆಚರ್‌ಗಳಲ್ಲಿ ಆಂಬ್ಯುಲೆನ್ಸ್‌ಗೆ ಕರೆದೊಯ್ಯಲಾಗುತ್ತಿದೆ. ಶೂಟಿಂಗ್ ವೇಳೆ ವಿದ್ಯಾರ್ಥಿಗಳು ಅವಿತುಕೊಂಡ ತರಗತಿಯೊಳಗಿನ ಫೋಟೋಗಳೂ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. 630,000 ಜನರು ರಷ್ಯಾದ ಉದ್ಮೂರ್ತಿಯಾ ಗಣರಾಜ್ಯದ ರಾಜಧಾನಿ ಇಝೆವ್ಸ್ಕ್ನಲ್ಲಿ ವಾಸಿಸುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.