Giorgia Meloni: ಯಾರು ಈ ಜಾರ್ಜಿಯಾ ಮೆಲೋನಿ? ಇವರ ಬಗ್ಗೆ ನಿಮಗೆಷ್ಟು ಗೊತ್ತು?

Last Updated : Sep 25, 2022, 04:54 PM IST
  • ಬ್ರದರ್ಸ್ ಆಫ್ ಇಟಲಿ ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗುವ ಸಾಧ್ಯತೆ ತೀವ್ರವಾಗಿದೆ.
Giorgia Meloni: ಯಾರು ಈ ಜಾರ್ಜಿಯಾ ಮೆಲೋನಿ? ಇವರ ಬಗ್ಗೆ ನಿಮಗೆಷ್ಟು ಗೊತ್ತು? title=

ಸುಮಾರು ಒಂದು ಶತಮಾನದ ಹಿಂದೆ ಬೆನಿಟೊ ಮುಸೊಲಿನಿಯ ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷವು ಗೆದ್ದ ನಂತರ ಇಟಲಿ ಮತ್ತೊಮ್ಮೆ ತೀವ್ರ ಬಲಪಂಥೀಯ ಸರ್ಕಾರಕ್ಕಾಗಿ ಸಜ್ಜಾಗಿದೆ. ಇದೆ ಸಂದರ್ಭದಲ್ಲಿ ಬಲಪಂಥೀಯ ಬ್ರದರ್ಸ್ ಆಫ್ ಇಟಲಿ ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗುವ ಸಾಧ್ಯತೆ ತೀವ್ರವಾಗಿದೆ.

ಮಾಹಿತಿಯ ಪ್ರಕಾರ, ಸುಮಾರು 51 ಮಿಲಿಯನ್ ಇಟಾಲಿಯನ್ನರು ಮತ ಚಲಾಯಿಸಲು ಅರ್ಹರಾಗಿದ್ದಾರೆ, ಅವರಲ್ಲಿ 4.7 ಮಿಲಿಯನ್ ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಇಂದು ಮತ ಚಲಾಯಿಸಲು ಆಗಮಿಸುವ ಮತದಾರರು 630 ರಿಂದ 400 ಕ್ಕೆ ಕಡಿತಗೊಂಡಿರುವ ಕೆಳಮನೆ ಸದಸ್ಯರ ಆಯ್ಕೆಯಾಗಿ ಮತಚಲಾಯಿಸಲಿದ್ದಾರೆ. ಇನ್ನೊಂದೆಡೆಗೆ ಸೆನೆಟ್ ನ್ನು 315 ರಿಂದ 200 ಸ್ಥಾನಗಳಿಗೆ ಕಡಿತಗೊಳಿಸಿರುವ ಸದನಕ್ಕೆ ಮತ ಹಾಕಲಿದ್ದಾರೆ.ಮತದಾರರು ಎರಡು ಮತದಾನದ ಚೀಟಿಗಳನ್ನು ಪಡೆಯುತ್ತಾರೆ; ಒಂದು ಸೆನೆಟ್‌ಗೆ ಮತ್ತು ಇನ್ನೊಂದು ಕೆಳಮನೆಗೆ ಅವರು ಚಲಾಯಿಸಲಿದ್ದಾರೆ.

ಗುರುವಾರದಂದು ಚುನಾವಣಾ ಪ್ರಚಾರ ಮುಕ್ತಾಯಗೊಂಡ ಸಂದರ್ಭದಲ್ಲಿ ಮಾತನಾಡುತ್ತಾ ಮೆಲೋನಿ ನಾವು ನಿಜವಾದ ಬಹುಸಂಖ್ಯಾತರು ಎಂದು ತಮ್ಮ ಆತ್ಮವಿಶ್ವಾಸವನ್ನು ಹೊರಹಾಕಿದ್ದರು.ಇನ್ನೊಂದೆಡೆಗೆ ಅವರ ಆತ್ಮವಿಶ್ವಾಸಕ್ಕೆ ಪ್ರಮುಖ ಕಾರಣ ಪ್ರತಿ ನಾಲ್ಕು ಇಟಾಲಿಯನ್ನರಲ್ಲಿ ಒಬ್ಬರು ಅವರ ಪಕ್ಷಕ್ಕೆ ಮತ ಹಾಕಲು ಯೋಜಿಸುತ್ತಿದ್ದಾರೆ ಎಂದು ಸುದ್ದಿಮೂಲಗಳು ಹೇಳುತ್ತಿವೆ.

Nostradamus : ನಾಸ್ಟ್ರಾಡಾಮಸ್‌ನ ಈ ಭಯಾನಕ ಭವಿಷ್ಯವಾಣಿ ನಿಜವಾಗುವುದೇ?

ಜುಲೈನಲ್ಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ರಾಷ್ಟ್ರೀಯ ಏಕತಾ ಸರ್ಕಾರವನ್ನು ಒಳಜಗಳಗಳು ಉರುಳಿಸಿದ ನಂತರ ಈಗ ಚುನಾವಣೆಗಳು ನಡೆಯುತ್ತಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಹಿರಂಗವಾಗಿ ಮೆಚ್ಚಿದ ವಲಸಿಗ-ವಿರೋಧಿ ಸಾಲ್ವಿನಿ ಮತ್ತು ಬೆರ್ಲುಸ್ಕೊನಿಗಳಿಗೆ ವಿರುದ್ಧವಾಗಿ, ಮೆಲೋನಿ ಉಕ್ರೇನ್‌ಗೆ ಮಿಲಿಟರಿ ಸಹಾಯವನ್ನು ಬೆಂಬಲಿಸುತ್ತಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ

ಕಳೆದ ಐದು ವರ್ಷಗಳಲ್ಲಿ ಇದು ಮೊದಲ ಚುನಾವಣೆಯಾಗಿದ್ದರೂ, ಇಟಲಿಯ ರಾಜಕೀಯವು ಯಾವಾಗಲೂ ಅಸ್ತವ್ಯಸ್ತವಾಗಿದೆ. ಎರಡನೇ ಜಾಗತಿಕ ಮಹಾಯುದ್ಧದ  ನಂತರದ 77 ವರ್ಷಗಳಲ್ಲಿ, ಇಟಲಿ 70 ಕ್ಕೂ ಹೆಚ್ಚು ಸರ್ಕಾರಗಳನ್ನು ಕಂಡಿದೆ, ಸರಿಸುಮಾರು ಪ್ರತಿ ಹದಿಮೂರು ತಿಂಗಳಿಗೊಮ್ಮೆ ಒಂದು ಸರ್ಕಾರವನ್ನು ಹೊಂದಿದೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಹೇಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News